ಸಲಾರ್ ಟೀಮ್ ಕಡೆಯಿಂದ ಮತ್ತೊಂದು ಸುದ್ದಿ: ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

Public TV
3 Min Read
prashanth neel with ravi basrur 1

ಪ್ರಭಾಸ್ (Prabhas) ನಟನೆಯ ಸಲಾರ್ ಸಿನಿಮಾದ ಟ್ರೈಲರ್ ಯಾವತ್ತು ಬಿಡುಗಡೆಯಾಗಲಿದೆ ಎನ್ನುವ ಪ್ರಶ್ನೆ ಅಭಿಮಾನಿಗಳದ್ದು ಆಗಿತ್ತು. ಆದಷ್ಟು ಬೇಗ ಟ್ರೈಲರ್ (Trailer) ರಿಲೀಸ್ ಮಾಡಿ ಎಂದು ಸಾಕಷ್ಟು ಅಭಿಮಾನಿಗಳು ಕೇಳಿಕೊಂಡಿದ್ದರು. ಕೊನೆಗೂ ಅಭಿಮಾನಿಗಳ ಬೇಡಿಕೆಯನ್ನು ಈಡೇರಿಸಲು ಮುಂದಾಗಿದೆ ಹೊಂಬಾಳೆ ಫಿಲ್ಮ್ಸ್ (Hombale Films). ಆದಷ್ಟು ಬೇಗ ಟ್ರೈಲರ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳಲ್ಲೇ ಟ್ರೈಲರ್ ರಿಲೀಸ್ ಆಗಲಿದೆ.

prabhas

‘ಸಲಾರ್’ (Salaar) ಅಖಾಡದಿಂದ ಮತ್ತೊಂದು ಹೊಸ ವಿಚಾರ ಹೊರಬಂದಿದೆ. ಆದರೆ ಇದು ಅಧಿಕೃತವಲ್ಲ. ಏನಾದರೂ ಈ ಸುದ್ದಿ ಕೇಳಿ ಪ್ರಭಾಸ್ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ಸರಪಟಾಕಿ ಅಂಗಡಿಯನ್ನೇ ಚಿತ್ರಮಂದಿರ ಮುಂದೆ ತರುವುದಾಗಿ ಘೋಷಿಸಿದ್ದಾರೆ. ಹಾಗಿದ್ದರೆ ಪ್ರಶಾಂತ್ ನೀಲ್- ಪ್ರಭಾಸ್ (Prabhas) ಅದ್ಯಾವ ಕಿಡಿಯನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಜನರಿಗಾಗಿ ತೋರಿಸಲು ಕಾದಿದ್ದಾರೆ? ಪ್ರಭಾಸ್ ಅಪ್ಪ- ಮಗನಾಗಿ ಕಾಣಿಸುತ್ತಿರುವುದು ಸತ್ಯವಾ? ಸಾವಿರ ಜನರನ್ನು ಹೊಡೆದುರುಳಿಸುವ ಅದ್ಭುತ ಸಿಕ್ವೇನ್ಸ್ ಇರೋದು ಪಕ್ಕಾನಾ? ಹೀಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.

prabhas with prashanth neel

ಸೆಪ್ಟೆಂಬರ್ 28 ಇದೊಂದು ದಿನಕ್ಕಾಗಿ ಇಡೀ ವಿಶ್ವದ ಸಿನಿ ಪ್ರೇಮಿಗಳು ಕಾಯುತ್ತಿದ್ದಾರೆ. ಒಂದೊಂದು ದಿನವನ್ನು ಒಂದೊಂದು ಯುಗದಂತೆ ಕಳೆಯುತ್ತಿದ್ದಾರೆ. ಅದ್ಯಾವ ರೀತಿ ‘ಸಲಾರ್’ ಗೆದ್ದು ಬೀಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹಿಂದೆ ನೋಡಿರಬಾರದು ಮುಂದೆ ನೋಡಬಾರದು ಅಂಥ ಮಿರಾಕಲ್ ನಡೆಯುತ್ತದಾ? ಪ್ರಶಾಂತ್ ನೀಲ್ ಆ ಕ್ಷಣವನ್ನು ನಮಗೆ ಒದಗಿಸುತ್ತಾರಾ? ಸತತ ಮೂರು ಸೋಲಿನಿಂದ ತತ್ತರಿಸಿರುವುದು ಪ್ರಭಾಸ್ ಒಂದೇ ದಿನ ದೀಪಾವಳಿ ಹಾಗೂ ಗಣೇಶ ಹಬ್ಬವನ್ನು ಮಾಡಲಿದ್ದಾರಾ? ಇಂಥ ಪ್ರಶ್ನೆಗಳನ್ನು ಇಟ್ಟುಕೊಂಡು ದಿನ ತಳ್ಳುತ್ತಿದೆ ಡಾರ್ಲಿಂಗ್ ಭಕ್ತಗಣ.

salara 3

‘ಸಲಾರ್’ ಆರಂಭವಾದಾಗ ಇದನ್ನು ಕನ್ನಡದ ಉಗ್ರಂ ರಿಮೇಕ್ ಎಂದವರಿದ್ದರು. ಆ ಕತೆಯನ್ನೇ ದೊಡ್ಡ ಕ್ಯಾನ್ವಾಸ್‌ನಲ್ಲಿ ಮಾಡಲು ನೀಲ್ ಸಜ್ಜಾಗಿದ್ದಾರೆ. ಈ ಮಾತು ಕೇಳಿತ್ತು. ಯಾವಾಗ ಪೃಥ್ವಿರಾಜ್ ಸುಕುಮಾರ್ ಇನ್ನೊಂದು ಪಾತ್ರದಲ್ಲಿ ಕಾಣಿಸಿದರೋ ಗಾಳಿ ಮಾತಿಗೆ ಹೊಸ ಹುರುಪು ಬಂತು. ಅಣ್ಣ ಹಾಗೂ ತಮ್ಮನ ಬಾಂಧವ್ಯ ಜೊತೆಗೆ ಸೇಡಿನ ಕತೆ ಎನ್ನುವುದು ಹಾರಾಡಿತು. ಎಲ್ಲವೂ ಬರೀ ಪಟಗಳೇ. ಯಾವುದಕ್ಕೂ ಸೂತ್ರ ಇರಲಿಲ್ಲ. ಇದ್ದದ್ದು ಕೇವಲ ಬಣ್ಣ ಮಾತ್ರ. ಈಗ ಅದೆಲ್ಲವನ್ನು ಬಿಟ್ಟು ಇನ್ನೊಂದು ಹಾದಿಯಲ್ಲಿ ಕತೆ ಲಿಂಕ್ ಬಿಚ್ಚಿಕೊಂಡಿದೆ. ಇದು ಅಪ್ಪ ಹಾಗೂ ಮಗನ ಕತೆ. ಅಪ್ಪನ ಪಾತ್ರಕ್ಕೆ ಸಲಾರ್ ಹಾಗೂ ಮಗನ ಪಾತ್ರಕ್ಕೆ ದೇವ್ ಭಾಯ್ ಹೆಸರು ಇಡಲಾಗಿದೆ. ಸತ್ಯವಾ ಸುಳ್ಳಾ?

Salaar 1

ಅಷ್ಟೊಂದು ಜತನದಿಂದ ನಿಗೂಢವಾಗಿ ಯಾರಿಗೂ ಗೊತ್ತಾಗದಂತೆ. ಶೂಟಿಂಗ್ ಸೆಟ್‌ನಿಂದ ಒಂದೇ ಒಂದು ಸುದ್ದಿಯ ನೊಣ ಆಚೆ ಹೋಗದಂತೆ ನೀಲ್ ಎಚ್ಚರಿಕೆ ವಹಿಸಿದ್ದಾರೆ. ಹೀಗಿದ್ದರೂ ಅದೊಂದು ವಿಡಿಯೋ ವೈರಲ್ ಆಗಿದೆ. ಅಭಿಮಾನಿ ಎಂದು ಹೇಳಿಕೊಂಡಿರುವ ವ್ಯಕ್ತಿ ಇದರಲ್ಲಿ ಮಾತಾಡಿದ್ದಾನೆ. ಶೂಟಿಂಗ್ ಸೆಟ್‌ಗೆ ಹೋಗಿದ್ದು, ಅಲ್ಲಿ ಏನು ನಡೆಯುತ್ತಿದೆ. ಯಾರ‍್ಯಾರು ಇದ್ದರು ಎಷ್ಟು ಜನರಿದ್ದರು ಅದ್ಯಾವ ಮಹಾ ದೃಶ್ಯಕ್ಕೆ ಕ್ಯಾಮೆರಾ ಸುತ್ತುತ್ತಿತ್ತು. ಹೀಗೆ ಒಂದೊಂದನ್ನೇ ಬಿಚ್ಚಿಟ್ಟಿದ್ದಾನೆ. ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೆಲ್ಲ ನಿಜವಾ ಎಂದು ಕೇಳುವಂತಿಲ್ಲ. ಆದರೆ ಫ್ಯಾನ್ಸ್ ಮಾತ್ರ ಬಾಯಿ ಚಪ್ಪರಿಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

salaar1 1

ಇದರಲ್ಲಿ ಪ್ರಭಾಸ್ ಎರಡು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಪ್ಪನಾಗಿ ಸಲಾರ್ ಮಗನಾಗಿ ದೇವ್ ಭಾಯ್ ನಟಿಸುತ್ತಿದ್ದಾರೆ. ಅದೊಂದು ದೃಶ್ಯದಲ್ಲಿ ಸುಮಾರು ಸಾವಿರ ಜನರಿದ್ದರು. ಮಗ ಪ್ರಾಣಾಪಾಯದಲ್ಲಿ ಸಿಕ್ಕಿರುತ್ತಾನೆ. ಆಗ ಮಗನನ್ನು ಕಾಪಾಡಲು ಅಪ್ಪ ಸಲಾರ್ ಬರುತ್ತಾನೆ. ಸಾವಿರ ಜನರನ್ನು ಅಪ್ಪ ಮಗ ಇಬ್ಬರೂ ನಾಶ ಮಾಡುತ್ತಾರೆ. ಬಹುಶಃ ಇದೊಂದು ಎರಡು ತಲೆಮಾರಿನ ಕತೆ. ಜಗಪತಿ ಬಾಬು ಹಾಗೂ ಪೃಥ್ವಿರಾಜ್ ಅಪ್ಪ ಮಗ. ಇನ್ನೊಂದು ಕಡೆ ಸಲಾರ್ ಹಾಗೂ ದೇವ್ ಭಾಯ್. ಎರಡು ತಲೆಮಾರಿನ ಕತೆ ಎರಡು ಭಾಗದಲ್ಲಿ ಬರಲಿದೆಯೇನೋ.

 

ಇದು ಆ ಅಭಿಮಾನಿ ಹೇಳಿದ ಮಾತು. ಆದರೆ ಈಗಾಗಲೇ ಶೂಟಿಂಗ್ ಮುಗಿದು ಹೋಗಿದೆ. ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇನ್ನೇನು ಸಿನಿಮಾ ರಿಲೀಸ್ ಆಗುವ ಸಮಯದಲ್ಲಿ ಈ ಅಭಿಮಾನಿ ಹೀಗೆ ಹೇಳಿದ್ದಾನೆ. ಇದನ್ನು ಆತ ಯಾವಾಗ ಎಲ್ಲಿ ನೋಡಿದ? ನಿಜಕ್ಕೂ ಇದೇ ಕತೆಯಾ? ಈ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಉತ್ತರ ಹೇಳಬೇಕಾದವರು ಯಾರು? ಪ್ರಶಾಂತ್ ನೀಲ್ (Prashant Neel) ಮಾತ್ರ. ಅವರು ಹೈದ್ರಾಬಾದ್‌ನಿಂದ ನೇರವಾಗಿ ರವಿ ಬಸ್ರೂರ್ ಸ್ಟುಡಿಯೋಕ್ಕೆ ಬಂದಿದ್ದಾರೆ. ಬಸ್ರೂರಿನಲ್ಲಿ ರೀ- ರೆಕಾರ್ಡಿಂಗ್ ಸೇರಿದಂತೆ ಎಲ್ಲ ಕಾರ್ಯ ನಡೆಯುತ್ತಿವೆ. ಹೈದ್ರಾಬಾದ್‌ನಲ್ಲಿ ಕತೆ ಲೀಕ್ ಆಗುವ ಸಾಧ್ಯತೆ ಇದೆ ಎನ್ನುವುದಕ್ಕಾಗಿ ಈ ಏರ್ಪಾಡು ಮಾಡಿಕೊಂಡಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article