ಹೆತ್ತಪ್ಪನಿಂದಲೇ ಮಗನ ಕೊಲೆಗೆ ಸುಪಾರಿ – ಹತ್ಯೆಗೈದು ಮನೆ ಸೇರಿದ್ದವನ ಕಥೆ ಹೇಳಿತು ಸುಣ್ಣದ ಡಬ್ಬಿ!

Public TV
2 Min Read
belagavi murder

ಬೆಳಗಾವಿ: ಹೆತ್ತಪ್ಪನೇ (Father) ಮಗನ (Son) ಕೊಲೆಗೆ ಮನೆ ಕೆಲಸದವನಿಗೆ ಸುಪಾರಿ ಕೊಟ್ಟು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿಸಿರುವ ಘಟನೆ ಬೈಲಹೊಂಗಲ (Bailhongal) ತಾಲೂಕಿನ ಕುಟರನಟ್ಟಿ ಗ್ರಾಮದಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ.

ಬೈಲಹೊಂಗಲ ಪಟ್ಟಣದ ನಿವಾಸಿ ಸಂಗಮೇಶ ತಿಗಡಿ (38) ಕೊಲೆಯಾದ ವ್ಯಕ್ತಿ. ಮಾರುತೆಪ್ಪ ತಿಗಡಿ (72) ಮಗನ ಕೊಲೆಗೆ ಸುಪಾರಿ ಕೊಟ್ಟ ಅಪ್ಪ. ಆಗಸ್ಟ್ 20ರಂದು ರಾತ್ರಿ ಸಂಗಮೇಶಗೆ ಮದ್ಯ (Alcohol) ಕುಡಿಸಿ ಕುಟರನಟ್ಟಿ ಗ್ರಾಮದ ಹೊರವಲಯದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದನ್ನೂ ಓದಿ: ರೆಸಾರ್ಟ್‌ ತೋರಿಸುತ್ತೇನೆ ಬಾ ಅಂತ ಕರೆದು ಮಹಿಳೆ ಮೇಲೆ ರೇಪ್‌ – ಟೆಕ್ಕಿ ಅರೆಸ್ಟ್‌

Belagavi murder 1

ಹತ್ಯೆಯಾದವನ ಕಿಸೆಯಲ್ಲಿದ್ದ ಸುಣ್ಣದ ಡಬ್ಬಿ (Lime Box) ಆರೋಪಿಯನ್ನು ಪತ್ತೆಹಚ್ಚಲು ಸಹಾಯ ಮಾಡಿದೆ. ಮೃತನ ಜೇಬಲ್ಲಿದ್ದ ಸುಣ್ಣದ ಡಬ್ಬಿಯಲ್ಲಿ ಕೊಲೆ ಮಾಡಿದ ಹಂತಕನ ನಂಬರ್ ಇತ್ತು. ತನ್ನ ಬಳಿ ಮೊಬೈಲ್ ಇಲ್ಲದ್ದಕ್ಕೆ ಮನೆಗೆಲಸ ಮಾಡುತ್ತಿದ್ದಾತನ ನಂಬರ್ ಅನ್ನು ಚೀಟಿಯಲ್ಲಿ ಬರೆದು ಸುಣ್ಣದ ಡಬ್ಬಿಯಲ್ಲಿ ಸಂಗಮೇಶ ಇಟ್ಟುಕೊಂಡಿದ್ದ. ಇದನ್ನೂ ಓದಿ: ಗ್ರಾಹಕರ ಖಾತೆಯಿಂದ 40 ಲಕ್ಷ ರೂ. ಎಗರಿಸಿದ ಬ್ಯಾಂಕ್ ಉದ್ಯೋಗಿ

ಪ್ರಕರಣದ ಹಿಂದೆ ಬಿದ್ದ ಪೊಲೀಸರು ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸಂಗಮೇಶ ಮನೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಕುಡಿದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಸಂಗಮೇಶನ ನಡೆಯಿಂದ ಬೇಸತ್ತು ಹೋಗಿದ್ದ ತಂದೆ ಮಾರುತ್ತೆಪ್ಪ ಪುತ್ರನನ್ನು ಕೊಲ್ಲಲು ಮನೆಕೆಲಸ ಮಾಡಿಕೊಂಡಿದ್ದ ಮಂಜುನಾಥನಿಗೆ ಸುಪಾರಿ ಕೊಟ್ಟಿದ್ದಾನೆ. ಬಳಿಕ ಮಂಜುನಾಥ ಹಾಗೂ ಆತನ ಸ್ನೇಹಿತ ಅಡಿವೆಪ್ಪ ಬೋಳೆತ್ತಿನ್ ಆತನನ್ನು ಕೊಲೆ ಮಾಡಿ ಇದೀಗ ಜೈಲುಪಾಲಾಗಿದ್ದಾರೆ. ಇದನ್ನೂ ಓದಿ: ಧಾರವಾಡ ಮೂಲದ ಆಸ್ಟ್ರೇಲಿಯಾ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಆಸ್ಟ್ರೇಲಿಯಾದ ಕಠಿಣ ಕಾನೂನುಗಳೇ ಸಾವಿಗೆ ಕಾರಣ

ಸದ್ಯ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆ ಐಸಿಯುವಿನಲ್ಲಿ ಆರೋಪಿ ತಂದೆ ಮಾರುತ್ತೆಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸ್ನೇಹಿತರಿಂದಲೇ ಚಿನ್ನ ಕಳವು ಮಾಡಿಸಿ ನಾಟಕ – ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಸಿಕ್ಕಿಬಿದ್ದ ಪತ್ನಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article