ರಾಖಿ ಕಟ್ಟಲು ಅಣ್ಣ ಬೇಕೆಂದ ಮಗಳು- ಗಂಡು ಮಗು ಕದ್ದು ಸಿಕ್ಕಿಬಿದ್ದ ದಂಪತಿ

Public TV
2 Min Read
BABY HAND

ನವದೆಹಲಿ: ಒಂದು ತಿಂಗಳ ಗಂಡು ಮಗುವನ್ನು ಅಪಹರಿಸಿದ (Boy Baby Kidnap) ಆರೋಪದ ಮೇಲೆ ದಂಪತಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತರನ್ನು ಟ್ಯಾಗೋರ್ ಗಾರ್ಡನ್‍ನ ರಘುಬೀರ್ ನಗರದ ನಿವಾಸಿಗಳಾದ ಸಂಜಯ್ ಗುಪ್ತಾ (41) ಮತ್ತು ಅನಿತಾ ಗುಪ್ತಾ (36) ಎಂದು ಗುರುತಿಸಲಾಗಿದೆ. ಈ ದಂಪತಿಯ 17 ವರ್ಷದ ಮಗ ಕಳೆದ ವರ್ಷ ಸಾವನ್ನಪ್ಪಿದ್ದಾನೆ. ಇತ್ತ ಮುಂಬರುವ ರಕ್ಷಾ ಬಂಧನ (Rakshabhandhan) ಹಬ್ಬದಂದು ರಾಖಿ ಕಟ್ಟಲು ಅಣ್ಣ ಬೇಕು ಎಂದು ಮಗಳು ಕೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಮಗಳ ಸೆಯನ್ನು ಈಡೇರಿಸುವ ಸಲುವಾಗಿ ದಂಪತಿ ಗಂದು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ.

rakhi 3

ಗುರುವಾರ ಮುಂಜಾನೆ 4.34ರ ಸುಮಾರಿಗೆ ವಿಕಲಚೇತನ ಮಹಿಳೆಯೊಬ್ಬರ ಶಿಶುವನ್ನು ಅಪಹರಿಸಿದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಛಟ್ಟಾ ರೈಲ್ ಚೌಕ್‍ನ ಫುಟ್‍ಪಾತ್‍ನಲ್ಲಿ ವಾಸಿಸುವ ದೂರುದಾರ ದಂಪತಿ, ಮುಂಜಾನೆ 3 ಗಂಟೆಯ ಸುಮಾರಿಗೆ ಎಚ್ಚರಗೊಂಡಾಗ ತಮ್ಮ ಮಗು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಮಗುವನ್ನು ಯಾರೋ ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಸಮೀಪದ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು (CCTV Camera) ಪರಿಶೀಲಿಸಿದಾಗ, ಇಬ್ಬರು ಬೈಕ್‍ನಲ್ಲಿ ಆ ಪ್ರದೇಶದಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಬೈಕ್ ಸಂಜಯ್ ಹೆಸರಿನಲ್ಲಿ ನೋಂದಾಯಿಸುರುವುದು ಬೆಳಕಿಗೆ ಬಂದಿದೆ. ಅಂತೆಯೇ ಟ್ಯಾಗೋರ್ ಗಾರ್ಡನ್‍ನ ರಘುಬೀರ್ ನಗರದಲ್ಲಿರುವ ಸಿ-ಬ್ಲಾಕ್‍ನಲ್ಲಿ ಆರೋಪಿ ದಂಪತಿ ಮತ್ತು ಅಪಹರಣಕ್ಕೊಳಗಾದ ಮಗುವನ್ನುಪೊಲೀಸರು ಪತ್ತೆ ಹಚ್ಚಿರುವುದಾಗಿ ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.

rakshabandhan

ಕಳೆದ ವರ್ಷ ಆಗಸ್ಟ್ 17 ರಂದು ತಮ್ಮ ಹದಿಹರೆಯದ ಮಗ ಟೆರೇಸ್‍ನಿಂದ ಬಿದ್ದು ಸಾವನ್ನಪ್ಪಿದ್ದಾನೆ ಮತ್ತು ಅವರ 15 ವರ್ಷದ ಮಗಳು ಮುಂಬರುವ ರಕ್ಷಾ ಬಂಧನದಂದು ರಾಖಿ ಕಟ್ಟಲು ಸಹೋದರನನ್ನು ಕೇಳುತ್ತಿದ್ದಳು ಎಂದು ಸಂಜಯ್ ಮತ್ತು ಅನಿತಾ ಬಹಿರಂಗಪಡಿಸಿದರು. ಆದ್ದರಿಂದ ಅವರು ಗಂಡುಮಗುವನ್ನು ಅಪಹರಿಸಲು ನಿರ್ಧರಿಸಿದರು. ಛಟ್ಟಾ ರೈಲ್ ಚೌಕ್ ಬಳಿ ತನ್ನ ತಾಯಿಯಿಂದ ಸ್ವಲ್ಪ ದೂರದಲ್ಲಿ ಮಲಗಿದ್ದ ಈ ಶಿಶುವನ್ನು ದಂಪತಿ ಕಂಡುಕೊಂಡು ಅಪಹರಿಸಿದ್ದಾರೆ.

ವೃತ್ತಿಯಲ್ಲಿ ಟ್ಯಾಟೂ ಆರ್ಟಿಸ್ಟ್ ಆಗಿರುವ ಸಂಜಯ್ ಈ ಹಿಂದೆ ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅನಿತಾ ಮೆಹಂದಿ ಕಲಾವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತ ಮಗುವಿನ ತಾಯಿ ಎರಡೂ ಕೈ ಮತ್ತು ಕಾಲುಗಳಿಗೆ ಅಂಗವಿಕಲರಾಗಿದ್ದಾರೆ ಮತ್ತು ಅವರ ತಂದೆ ಚಿಂದಿ ಆಯುವವರಾಗಿದ್ದಾರೆ. ಅವರು ನಿರಾಶ್ರಿತರಾಗಿದ್ದು, ಫುಟ್‍ಪಾತ್‍ನಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದರು.

Web Stories

Share This Article