ರೆಸಾರ್ಟ್‌ ತೋರಿಸುತ್ತೇನೆ ಬಾ ಅಂತ ಕರೆದು ಮಹಿಳೆ ಮೇಲೆ ರೇಪ್‌ – ಟೆಕ್ಕಿ ಅರೆಸ್ಟ್‌

Public TV
2 Min Read
Resort

ಪಣಜಿ: ಗೋವಾಕ್ಕೆ (Goa) ಬನ್ನಿ ಇಲ್ಲಿನ ಪ್ರವಾಸಿ ತಾಣಗಳನ್ನ (Tourist Place) ತೋರಿಸುತ್ತೇನೆ, ಮೂಲ ಸೌಕರ್ಯಗಳನ್ನ ತೋರಿಸುತ್ತೇನೆ ಅಂತಾ ಕರೆದು ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗೋವಾದಲ್ಲಿ ನಡೆದಿದ್ದು, ಶುಕ್ರವಾರ (ಇಂದು) ಬೆಳಕಿಗೆ ಬಂದಿದೆ.

ಉತ್ತರ ಗೋವಾದ (North Goa) ಅಸ್ಸೋನೋರಾ ಗ್ರಾಮದ ರೆಸಾರ್ಟ್‌ನಲ್ಲಿ ಪ್ರವಾಸಕ್ಕೆ ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗುಜರಾತ್ ಮೂಲದ ಟೆಕ್ಕಿಯನ್ನ ಗೋವಾ ಪೊಲೀಸರು (Goa Police) ಬಂಧಿಸಿದ್ದಾರೆ. ಆಗಸ್ಟ್‌ 23 ರಂದು ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ದೂರಿನ ಆಧಾರದ ಮೇಲೆ ಪೊಲೀಸರು 47 ವರ್ಷದ‌ ಕಾಮುಕನನ್ನ ಬಂಧಿಸಿದ್ದಾರೆ. ಆರೋಪಿಯನ್ನ ಲಕ್ಷ್ಮಣ್‌ ಶಿಯಾರ್‌ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪಾಸ್‌ಪೋರ್ಟ್, ವೀಸಾ ಇಲ್ಲದೆ ಬೋಟ್‌ನಲ್ಲಿ ಬೆಂಗಳೂರಿಗೆ ನುಸುಳಿದ್ದ ಶ್ರೀಲಂಕಾದ ಮೋಸ್ಟ್ ವಾಂಟೆಡ್‌ ಕ್ರಿಮಿನಲ್‌ಗಳು ಅರೆಸ್ಟ್

ರೆಸಾರ್ಟ್‌ನಲ್ಲಿ ನಡೆದಿದ್ದೇನು?
ಸಂತ್ರಸ್ತೆ ಮತ್ತು ಆರೋಪಿ ಕೆಲವು ದಿನಗಳ ಹಿಂದೆ ವಿಮಾನದಲ್ಲಿ (Flight) ಭೇಟಿಯಾಗಿದ್ದರು. ಈ ವೇಳೆ ಆರೋಪಿ ಆಕೆಯ ಫೋನ್‌ ನಂಬರ್‌ ಪಡೆದುಕೊಂಡಿದ್ದ. ನಂತರ ಇಬ್ಬರು ಪರಸ್ಪರ ಫೋನ್‌ನಲ್ಲಿ ಸಂಪರ್ಕದಲ್ಲಿದ್ದರು. ಇತ್ತೀಚೆಗೆ ಸಂತ್ರಸ್ತ ಮಹಿಳೆ ಮತ್ತು ಆರೋಪಿ ಪ್ರತ್ಯೇಕವಾಗಿ ಗೋವಾಕ್ಕೆ ಭೇಟಿ ನೀಡಿದ್ದರು. ಆಗಸ್ಟ್‌ 23 ರಂದು ಮಹಿಳೆಗೆ ಕರೆ ಮಾಡಿದ್ದ ಆರೋಪಿ ರೆಸಾರ್ಟ್‌ನಲ್ಲಿರುವ ಸೌಕರ್ಯಗಳನ್ನು ತೋರಿಸುತ್ತೇನೆ ಎಂದು ತಾನು ಉಳಿದುಕೊಂಡಿದ್ದ ರೆಸಾರ್ಟ್‌ಗೆ ಬರಲು ಹೇಳಿದ್ದಾನೆ. ಮಹಿಳೆ ಒಂಟಿಯಾಗಿ ರೆಸಾರ್ಟ್‌ಗೆ ಹೋಗಿದ್ದಾಳೆ. ಈ ವೇಳೆ ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದ ಕಿಡಿಗೇಡಿ ಅತ್ಯಾಚಾರ ಎಸಗಿದ್ದಾನೆ. ನಂತರ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್‌ ಅಧಿಕಾರಿ ದಳವಿ ತಿಳಿಸಿದ್ದಾರೆ.

ಬಳಿಕ ನೊಂದ ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಉತ್ತರ ಗೋವಾದ ಮಾಪುಸಾ ಪಟ್ಟಣದ ಬಳಿಯ ಥಿವಿಮ್ ಗ್ರಾಮದಲ್ಲಿ ಆರೋಪಿಯನ್ನ ಬಂಧಿಸಲಾಯಿತು. ಇದನ್ನೂ ಓದಿ: Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಅತ್ಯುತ್ತಮ ನಟ ಅಲ್ಲು ಅರ್ಜುನ್, ನಟಿ ಆಲಿಯಾ ಭಟ್ ಮತ್ತು ಕೀರ್ತಿ ಸನನ್

Web Stories

Share This Article