ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಪೇಚಿಗೆ ಸಿಲುಕಿದ ಪತ್ನಿ!

Public TV
1 Min Read
MALLESHWARAM POLICE STATION

ಬೆಂಗಳೂರು: ಪತಿಗೆ ಬುದ್ಧಿ ಕಲಿಸಲು ಹೋಗಿ ಪತ್ನಿ ಪೇಚಿಗೆ ಸಿಲುಕಿದ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಪತಿಗೆ ಬುದ್ಧಿ ಕಲಿಸಲೆಂದು ಪತ್ನಿಯು ತನ್ನ ಚಿನ್ನವನ್ನ ಸ್ನೇಹಿತನಿಂದ ಕಳವು ಮಾಡಿಸಿ ನಾಟಕ ಮಾಡಿದ್ದಾಳೆ. ಬಳಿಕ ತಾನೇ ಠಾಣೆಗೆ ತೆರಳಿ ಚಿನ್ನ ಕಳೆದು ಹೋಗಿರುವ ಬಗ್ಗೆ ದೂರು ನೀಡಿದ್ದಾಳೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಾಗ ಮಹಿಳೆಯ ಅಸಲಿ ಕಹಾನಿ ಬಯಲಾಗಿದೆ.

MALLESHWARAM

ಏನಿದು ಘಟನೆ..?: ಪತ್ನಿಯು ಬ್ಯಾಂಕ್‍ನಿಂದ (Bank) ಚಿನ್ನವನ್ನ ಬಿಡಿಸಿಕೊಂಡು ಬಂದಿದ್ದಾಳೆ. ಈ ಚಿನ್ನವನ್ನು ಸ್ಕೂಟಿಯ ಫೂಟ್ ಮ್ಯಾಟ್‍ನಲ್ಲಿ ಇರಿಸಿದ್ದಾಳೆ. ಅಲ್ಲದೆ ಸ್ಕೂಟಿಯನ್ನು ಒಂದು ಕಡೆ ಇಟ್ಟು ತನ್ನ ಸ್ನೇಹಿತನಿಗೆ ಕರೆ ಮಾಡಿದ್ದಾಳೆ. ಅಂತೆಯೇ ಸ್ಥಳಕ್ಕೆ ಬಂದ ಸ್ನೇಹಿತ ಅಲ್ಲಿಂದ ಸ್ಕೂಟಿಯನ್ನ ತೆಗೆದುಕೊಂಡು ಹೋಗಿದ್ದಾನೆ.

ಇತ್ತ ಇಷ್ಟೆಲ್ಲಾ ಆದ ಬಳಿಕ ಚಿನ್ನ (Gold) ಕಳ್ಳತನವಾಗಿರುವ ಬಗ್ಗೆ ಪತ್ನಿ ಠಾಣೆಗೆ ದೂರು ಕೊಟ್ಟಿದ್ದಾಳೆ. ಪೊಲೀಸರು ತನಿಖೆ ಮಾಡಿದಾಗ ಧನರಾಜ್ ಬೈಕ್ ತೆಗೆದುಕೊಂಡು ಹೋಗಿರೋದು ಬೆಳಕಿಗೆ ಬಂದಿದೆ. ಅತನ ನಂಬರ್ ಪರಿಶೀಲನೆ ಮಾಡಿದಾಗ ಈಕೆಯ ಜೊತೆ ಮೊಬೈಲ್ ನಲ್ಲಿ ಮಾತಾಡಿರೋದು ಕೂಡ ಬಯಲಾಗಿದೆ. ಇಬ್ಬರನ್ನ ಕರೆದು ವಿಚಾರಣೆ ಮಾಡಿದಾಗ ಗಂಡನಿಗೆ ಬುದ್ಧಿ ಕಲಿಸಲು ಮಾಡಿದ್ದಾಗಿ ಹೇಳಿದ್ದಾರೆ. ಇದನ್ನೂ ಓದಿ: ಯಾರನ್ನು ಬೆಳೆಸಿದ್ದೇನೋ ಅವರೇ ಮೋಸ ಮಾಡಿದ್ರು: ಜನಾರ್ದನ ರೆಡ್ಡಿ ಗುಡುಗು

ಸದ್ಯ ಅವಳದ್ದೇ ಚಿನ್ನವಾಗಿರೋದ್ರಿಂದ ಪೊಲೀಸರು ಕಾನೂನು ಸಲಹೆಗೆ ಮುಂದಾಗಿದ್ದಾರೆ. ಈ ಸಂಬಂಧ ಮಲ್ಲೆಶ್ವರಂ ಪೊಲೀಸ್ ಠಾಣೆಯಲ್ಲಿ (Malleshwaram Police Station) ಪ್ರಕರಣ ದಾಖಲಾಗಿದೆ.

Web Stories

Share This Article