ಧಾರವಾಡ: ಬೆಳಗಾವಿಯ (Belagavi) ಮಲಪ್ರಭಾ ನದಿಗೆ ಬಿದ್ದು ಧಾರವಾಡ (Dharwad) ಮೂಲದ ಆಸ್ಟ್ರೇಲಿಯಾ (Australia) ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಮಹಿಳೆ ಡೆತ್‍ನೋಟ್ ಬರೆದು ಕೊರಿಯರ್ ಮಾಡಿದ್ದು, ಮಹಿಳೆಯ ಸಾವಿಗೆ ಆಸ್ಟ್ರೇಲಿಯಾ ಕಾನೂನುಗಳೇ ಕಾರಣ ಎಂದು ತಿಳಿದು ಬಂದಿದೆ.
ಆಸ್ಟ್ರೇಲಿಯಾದಲ್ಲಿದ್ದ ಪ್ರಿಯದರ್ಶಿನಿ ಎಂಬ ಮಹಿಳೆ ಅಲ್ಲಿನ ಕಠಿಣ ಕಾನೂನಿನಿಂದ ನ್ಯಾಯ ಸಿಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಇತ್ತೀಚೆಗೆ ಮಹಿಳೆಯ ಮಗ ಅನಾರೋಗ್ಯದಿಂದ ಬಳಲುತ್ತಿದ್ದ. ಆದರೆ ಅಲ್ಲಿಯ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಕ್ಕಿರಲಿಲ್ಲ. ರೋಗ ಗುಣಮುಖ ಆಗುವ ಬದಲು ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಇದನ್ನೂ ಓದಿ: ಬುದ್ದಿ ಹೇಳಿದ್ದಕ್ಕೆ ಶಿಕ್ಷಕನಿಗೆ ಲಾಂಗ್ ಝಳಪಿಸಿದ ವಿದ್ಯಾರ್ಥಿ
ಈ ವಿಚಾರಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈಫಲ್ಯ ಎಂದು ಪ್ರಿಯದರ್ಶಿನಿ ದೂರು ದಾಖಲಿಸಿದ್ದಳು. ಆದರೆ ಆಸ್ಟ್ರೇಲಿಯಾ ಕಾನೂನಿನಂತೆ ಮಕ್ಕಳನ್ನು ನೋಡಿಕೊಂಡಿಲ್ಲ ಎಂಬ ಆರೋಪ ಪ್ರಿಯದರ್ಶಿನಿ ಮೇಲೆ ಇತ್ತು. ಇದಕ್ಕಾಗಿ ಪ್ರಿಯದರ್ಶಿನಿ ಕಾನೂನು ಹೋರಾಟ ಆರಂಭಿಸಿದ್ದಳು. ಆದರೆ ಪ್ರಯೋಜನವಾಗದೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ಪ್ರಿಯದರ್ಶಿನಿ ಆತ್ಮಹತ್ಯೆ ವಿಚಾರವಾಗಿ ಭಾರತ ಸರ್ಕಾರದ ಮೂಲಕ ಆಸ್ಟ್ರೇಲಿಯಾ ಸರ್ಕಾರದ ಮೊರೆ ಹೋಗಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.
ಮಹಿಳೆಗೆ ಎರಡು ಮಕ್ಕಳಿದ್ದು, ಅವರು ಆಸ್ಟ್ರೇಲಿಯಾದಲ್ಲೇ ಹುಟ್ಟಿದ್ದರಿಂದ ಅಲ್ಲಿಯ ಪೌರತ್ವ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಪ್ರಿಯದರ್ಶಿನಿ ಆಸ್ಟ್ರೇಲಿಯಾದಿಂದ ಕಳೆದ ಭಾನುವಾರ ಭಾರತಕ್ಕೆ ಬಂದಿದ್ದರು. ಆ ದಿನ ತನ್ನ ಎಲ್ಲಾ ಬ್ಯಾಗ್‍ಗಳನ್ನು ಮನೆಗೆ ಕೊರಿಯರ್ ಮಾಡಿದ್ದಳು. ಆದರೆ ಆಕೆ ಮನೆಗೆ ಬರದೇ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಳಿಕ ಆಕೆಯ ಶವ ಬೆಳಗಾವಿ ಜಿಲ್ಲೆಯ ಗೋರವನಕೊಳ್ಳ ಗ್ರಾಮದ ಬಳಿ ಪತ್ತೆಯಾಗಿತ್ತು. ಇದನ್ನೂ ಓದಿ: WWE ಮಾಜಿ ಸ್ಟಾರ್ ಬ್ರೇ ವ್ಯಾಟ್ 36ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]