ಹಾಡಹಗಲೇ ಯುವತಿಯ ಕತ್ತು ಸೀಳಿ ಯುವಕ ಪರಾರಿ – ಚಿಕಿತ್ಸೆ ಫಲಿಸದೇ ಯುವತಿ ಸಾವು

Public TV
1 Min Read
puttur murder copy

– ಆರೋಪಿ ಪೊಲೀಸರ ಬಲೆಗೆ

ಮಂಗಳೂರು: ಹಾಡಹಗಲೇ ಯುವಕನೋರ್ವ ಬೈಕ್‌ನಲ್ಲಿ ಬಂದು ಯುವತಿಯ ಕತ್ತು ಸೀಳಿ ಪರಾರಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ (Puttur) ನಡೆದಿದೆ.

ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ವಿಟ್ಲದ (Vitla) ಅಳಿಕೆ ನಿವಾಸಿ ಗೌರಿ (25) ಮೃತಪಟ್ಟಿದ್ದಾರೆ. ಆರೋಪಿ ಪದ್ಮರಾಜ್ (30) ವಿಟ್ಲ ನಿವಾಸಿಯಾಗಿದ್ದು, ಕಳೆದ ಕೆಲ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಗುರುವಾರ ಮಧ್ಯಾಹ್ನ ಪುತ್ತೂರು ಬಸ್ ನಿಲ್ದಾಣದ ಬಳಿ ಇವರಿಬ್ಬರ ನಡುವೆ ವಾಗ್ವಾದ ನಡೆದಿದ್ದು, ಯುವತಿ ಮಹಿಳಾ ಠಾಣೆಗೆ ದೂರು ನೀಡಲೆಂದು ಬರುತ್ತಿದ್ದ ಸಂದರ್ಭ ಆರೋಪಿ ಪದ್ಮರಾಜ್ ಬೈಕ್‌ನಲ್ಲಿ ಬಂದು ಯುವತಿಯನ್ನು ತಡೆದು ಮೂರರಿಂದ ನಾಲ್ಕು ಬಾರಿ ಆಕೆಯ ಕುತ್ತಿಗೆಗೆ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಶಾಸಕ ಅಜಯ್ ಸಿಂಗ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮನೆ ಕೆಲಸದಾತನ ಶವ ಪತ್ತೆ

ಚಾಕು ಇರಿತಕ್ಕೊಳಗಾದ ಯುವತಿ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಕೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಯುವತಿ ಸಾವನ್ನಪ್ಪಿದ್ದು, ಪ್ರೇಮ (Love) ವೈಫಲ್ಯವೇ ಕೃತ್ಯಕ್ಕೆ ಕಾರಣ ಎಂದು ತಿಳಿದು ಬಂದಿದೆ. ಈ ಕುರಿತು ಪುತ್ತೂರು ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕುಡಿದು ಬಂದು ಮದುವೆ ಮಾಡಿಸುವಂತೆ ಕಿರಿಕ್ – ತಂದೆಯಿಂದಲೇ ಮಗನ ಹತ್ಯೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article