Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಚಂದ್ರಯಾನ- 3 ಯಶಸ್ಸಿನ ರೂವಾರಿಗಳು ಇವರೇ..

Public TV
Last updated: August 23, 2023 11:43 pm
Public TV
Share
2 Min Read
scientist 4
SHARE

ಬೆಂಗಳೂರು: ಚಂದ್ರಯಾನ-3 (Chandrayaan-3) ಯಶಸ್ಸಿನ ಹಿಂದೆ ಇಸ್ರೋ ವಿಜ್ಞಾನಿಗಳ ಅಹರ್ನಿಶಿ ಶ್ರಮವಿದೆ. ಈ ತಂಡದ ನಾಯಕತ್ವ ವಹಿಸಿ ಚಂದ್ರಯಾನದ ಯಶಸ್ಸಿನಲ್ಲಿ 7 ಮಂದಿ ವಿಜ್ಞಾನಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಇವರಲ್ಲಿ ಐವರು ವಿಜ್ಞಾನಿಗಳು ಮಂಗಳವಾರ ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಕೂಡ ಸಲ್ಲಿಸಿದ್ರು. ಅಂದಹಾಗೇ ಅವರ್ಯಾರು..? ಈ ಯೋಜನೆಯಲ್ಲಿ ಅವರ ಪಾತ್ರ ಏನು ಎಂಬುದನ್ನು ನೋಡೋಣ..

ಚಂದ್ರಯಾನ- 3 ಯಶಸ್ಸಿನ ರೂವಾರಿಗಳು:
* ಎಸ್.ಸೋಮನಾಥ್ (ಇಸ್ರೋ ಚೇರ್ಮನ್): ಎಲ್‍ವಿಎಂ3 ಯೋಜನೆಯಲ್ಲಿ ಇವರೇ ಪ್ರಮುಖರು. 2022ರ ಜನವರಿಯಲ್ಲಿ ಇಸ್ರೋ ಚೇರ್ಮನ್ ಆದ ಸೋಮನಾಥ್ ಅವರು, ಇದಕ್ಕೂ ಮೊದಲು ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್ ನಲ್ಲಿ ಲಿಕ್ವಿಡ್ ಪ್ರೊಪಲ್ಶನ್ ಸೆಂಟರ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ರು. ಶೀಘ್ರವೇ ಮಾನವಸಹಿತ ಗಗನಯಾನ್ ಮಿಷನ್, ಸೋಲಾರ್ ಮಿಷನ್ ನೇತೃತ್ವ ವಹಿಸಿದ್ದಾರೆ. ಇವರು ಬೆಂಗಳೂರಿನ ಐಐಎಸ್‍ಸಿಯಲ್ಲಿ ಓದಿದ್ದಾರೆ.

* ಪಿ.ವೀರಮುತ್ತುವೇಲ್ (ಚಂದ್ರಯಾನ-3 ಪ್ರಾಜೆಕ್ಟ್ ಡೈರೆಕ್ಟರ್): ಚಂದ್ರಯಾನ-3 ಪ್ರಾಜೆಕ್ಟ್ ಡೈರೆಕ್ಟರ್. ಹೊಸ ರೋವರ್, ಲ್ಯಾಂಡರ್ ನಿರ್ಮಾಣದಲ್ಲಿ ಇವರದ್ದೇ ಪ್ರಮುಖ ಪಾತ್ರ. ಚಂದ್ರಯಾನ-2 ತಂಡದಲ್ಲಿ ಇವರು ಕೆಲಸ ಮಾಡಿದ್ದರು. ಈ ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿರುವ ಇಸ್ರೋ ಇನ್‍ಫ್ರಾಸ್ಟ್ರಕ್ಚರ್ ಪ್ರೋಗ್ರಾಮ್ ಡೆಪ್ಯುಟಿ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಇದನ್ನೂ ಓದಿ: ವಿಕ್ರಮ್ ಲ್ಯಾಂಡ್ ಆದ ಬಳಿಕ ಮೊದಲ ಚಿತ್ರ ರಿಲೀಸ್

* ಕೆ ಕಲ್ಪನಾ (ಚಂದ್ರಯಾನ- 3 ಡೆಪ್ಯುಟಿ ಪ್ರಾಜೆಕ್ಟ್ ಡೈರೆಕ್ಟರ್): ಚೆನ್ನೈನಲ್ಲಿ ಬಿಟೆಕ್ ಪೂರ್ಣಗೊಳಿಸಿದ ಬೆನ್ನಲ್ಲೇ ಕಲ್ಪನಾ ಇಸ್ರೋ ಸೇರಿದ್ದರು. ಮೊದಲು ಶ್ರೀಹರಿಕೋಟಾದಲ್ಲಿ ಐದು ವರ್ಷ ಕೆಲಸ ಮಾಡಿದ್ರು. ನಂತ್ರ ಬೆಂಗಳೂರಿನ ಉಪಗ್ರಹ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ರು. ಐದು ಉಪಗ್ರಹಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಚಂದ್ರಯಾನ-2 ಯೋಜನೆಯ ಭಾಗವಾಗಿದ್ದರು.. ಚಂದ್ರಯಾನ-3 ಡೆಪ್ಯುಟಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

* ಎಸ್ ಉನ್ನಿಕೃಷ್ಣನ್ ನಾಯರ್ (ವಿಎಸ್‍ಎಸ್‍ಸಿ ನಿರ್ದೇಶಕ): ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್ ನ ನಿರ್ದೇಶಕರು.. ಚಂದ್ರಯಾನ- 3 ಗಗನನೌಕೆಯನ್ನು ನಭಕ್ಕೆ ಹೊತ್ತೊಯ್ದ ಎಲ್‍ಎಂವಿ 3 ರಾಕೆಟ್‍ನ್ನು ಇಲ್ಲಿಯೇ ರೂಪಿಸಿದರು. ಇದನ್ನೂ ಓದಿ: ಚಂದ್ರಯಾನ-3 ಮಿಷನ್ ಸಕ್ಸಸ್: ಅಭಿನಂದನೆ ಸಲ್ಲಿಸಿದ ರಷ್ಯಾ ಬಾಹ್ಯಾಕಾಶ ಸಂಸ್ಥೆ

* ಎಂ ಶಂಕರನ್ (ಯುಆರ್ ಎಸ್‍ಸಿ ನಿರ್ದೇಶಕ): ಯುಆರ್ ರಾವ್ ಸ್ಯಾಟಲೈಟ್ ಸೆಂಟರ್ ನಿರ್ದೇಶಕರು. ಇವರನ್ನು ಇಸ್ರೋ ಪವರ್ ಹೌಸ್ ಎಂದು ಕರೆಯುತ್ತಾರೆ. ಉಪಗ್ರಹಗಳಿಗೆ ಅಗತ್ಯವಾದ ಪವರ್ ಸಿಸ್ಟಂ ಅಭಿವೃದ್ಧಿಪಡಿಸುವಲ್ಲಿ ಇವರಿಗೆ ಮೂರು ದಶಕಗಳ ಅನುಭವ ಇದೆ. ಚಂದ್ರಯಾನ-3 ಮಿಷನ್‍ನಲ್ಲಿರುವ ಲ್ಯಾಂಡರ್ ಶಕ್ತಿ ಪರೀಕ್ಷಿಸಲು ಚಂದ್ರನ ಮೇಲ್ಮೈ ಮಾದರಿಯನ್ನು ರೂಪಿಸುವಲ್ಲಿ ಇವರದ್ದೇ ಪ್ರಮುಖ ಪಾತ್ರ.

* ವಿ.ನಾರಾಯಣನ್ (ಎಲ್‍ಪಿಎಸ್‍ಸಿ ನಿರ್ದೇಶಕ): ತಿರುವನಂತಪುರದ ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಂ ಸೆಂಟರ್ ನಿರ್ದೇಶಕರು. ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್‍ಗೆ ಅಗತ್ಯವಾದ ಥ್ರಸ್ಟರ್ ಗಳನ್ನು ಇವರ ನೇತೃತ್ವದಲ್ಲಿಯೇ ರೂಪಿಸಲಾಗಿದೆ.

* ಬಿಎನ್ ರಾಮಕೃಷ್ಣ (ಐಎಸ್‍ಟಿಆರ್ ಎಸಿ ನಿರ್ದೇಶಕ): ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರಾಕಿಂಗ್ ಅಂಡ್ ಕಮಾಂಡ್ ನೆಟ್‍ವರ್ಕ್ ಸೆಂಟರ್ ನಿರ್ದೇಶಕರು. ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯ ಕೊನೆಯ 20 ನಿಮಿಷಗಳನ್ನು ಇಲ್ಲಿಂದಲೇ ಮೇಲ್ವಿಚಾರಣೆ ಮಾಡಲಾಯ್ತು. ದೇಶದಲ್ಲೇ ಅತಿದೊಡ್ಡ 32 ಮೀಟರ್ ಗಳ ಡಿಶ್ ಅಂಟೆನಾ ಇಲ್ಲಿದ್ದು, ಇದ್ರ ನೆರವಿಂದ ವಿಕ್ರಮ್ ಲ್ಯಾಂಡರ್‍ಗೆ ಕಮಾಂಡ್ ಕಳಿಸಲಾಗುತ್ತದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


follow icon

TAGGED:bengaluruChandrayaan-3ISROscientistಚಂದ್ರಯಾನ-3ಬೆಂಗಳೂರು
Share This Article
Facebook Whatsapp Whatsapp Telegram

Cinema News

Shilpa Shetty and Raj Kundra 1
ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಪತಿ ವಿರುದ್ಧ ಉದ್ಯಮಿಗೆ 60 ಕೋಟಿ ರೂ. ವಂಚನೆ ಆರೋಪ
Bollywood Cinema Latest Main Post
Sandeepa Virk
ಇನ್‌ಸ್ಟಾದಲ್ಲಿ 12 ಲಕ್ಷ ಫಾಲೋವರ್ಸ್‌ ಹೊಂದಿದ್ದ ಇನ್‌ಫ್ಲುಯೆನ್ಸರ್‌ ಬಂಧನ
Cinema Crime Latest Top Stories
Actor Darshan 1
ದರ್ಶನ್ ಜಾಮೀನು ಭವಿಷ್ಯಕ್ಕೆ ಕೌಂಟ್‌ಡೌನ್ – ನಟನಿಗೆ ಜೈಲಾ? ಬೇಲಾ?
Cinema Court Latest Main Post Sandalwood
Darshan
ಗುರುವಾರ ದರ್ಶನ್‌ ಪಾಲಿಗೆ ಬಿಗ್‌ ಡೇ – ಸುಪ್ರೀಂ ತೀರ್ಪಿನತ್ತ ಚಿತ್ತ, ಮತ್ತೆ ಜೈಲುಪಾಲಾಗ್ತಾರಾ ನಟ?
Cinema Court Karnataka Latest Main Post
Dhanush
ಧನುಷ್ ನನ್ನ ಗೆಳೆಯ – ಡೇಟಿಂಗ್ ವದಂತಿಗೆ ತೆರೆ ಎಳೆದ ಮೃಣಾಲ್ ಠಾಕೂರ್
Cinema Latest South cinema Top Stories

You Might Also Like

ಸಾಂದರ್ಭಿಕ ಚಿತ್ರ
Bengaluru City

2.5 ಲಕ್ಷಕ್ಕೆ ನವಜಾತ ಶಿಶುವನ್ನೇ ಮಾರಿದ ತಾಯಿ – ಹಣ ಖರ್ಚಾದ ಬಳಿಕ ಮಗು ವಾಪಸ್ಸಿಗಾಗಿ ದೂರು

Public TV
By Public TV
15 minutes ago
supreme Court 1
Court

ದೆಹಲಿಯಲ್ಲಿ ಬೀದಿ ನಾಯಿಗಳ ಹಾವಳಿ ಕೇಸ್‌ – ಹೊಸ ತ್ರಿಸದಸ್ಯ ಪೀಠ ರಚಿಸಿದ ಸಿಜೆಐ ಗವಾಯಿ

Public TV
By Public TV
10 hours ago
Arjun Tendulkar engaged to Ravi Ghais granddaughter Saaniya Chandok
Cricket

ಖ್ಯಾತ ಉದ್ಯಮಿಯ ಮೊಮ್ಮಗಳ ಜೊತೆ ಅರ್ಜುನ್‌ ತೆಂಡ್ಕೂಲರ್‌ ಎಂಗೇಜ್‌

Public TV
By Public TV
10 hours ago
Doddaballapura Teacher Love
Chikkaballapur

ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನ ಲವ್ವಿ-ಡವ್ವಿ; NCC ಪಾಠ ಹೇಳಿಕೊಟ್ಟ ಗುರುವಿನ ಜೊತೆಯೇ ಜೂಟ್

Public TV
By Public TV
10 hours ago
ICICI Bank
Latest

ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಮಿನಿಮಮ್ ಬ್ಯಾಲನ್ಸ್ ಮೊತ್ತ ಇಳಿಸಿದ ICICI ಬ್ಯಾಂಕ್‌

Public TV
By Public TV
10 hours ago
puri jagannath temple
Crime

ದೇವಸ್ಥಾನವನ್ನು ಸ್ಫೋಟಿಸುತ್ತೇವೆ – ಪುರಿ ದೇಗುಲದ ಗೋಡೆ ಮೇಲೆ ಬರಹ

Public TV
By Public TV
11 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?