ಶ್ರಾವಣ ಮಾಸದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲ ಗೆಹ್ಲೋಟ್

Public TV
1 Min Read
Thawar Chand Gehlot

ಅಮರಾವತಿ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯ ತಿರುಮಲ ವೆಂಕಟೇಶ್ವರ ಸನ್ನಿಧಿಗೆ (Tirumala Tirupati Temple) ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಭೇಟಿ ನೀಡಿ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Thawar Chand Gehlot 1

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲರು ದೇಶದಲ್ಲಿ ಸುಖ, ಸಮೃದ್ಧಿ, ಶಾಂತಿ ತುಂಬಿರಲಿ ಹಾಗೂ ಇಡೀ ವಿಶ್ವದಲ್ಲೇ ದೇಶದ ಹೆಸರು ಪಸರಿಸಲೆಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಚಂದ್ರನ ಮಣ್ಣಿಗೆ ಹೋಲಿಕೆಯಾಗುತ್ತಂತೆ ತಮಿಳುನಾಡಿನ ಮಣ್ಣು – ಚಂದ್ರಯಾನ-3ಗೂ ಇದೆ ಈ ಮಣ್ಣಿನ ಕೊಡುಗೆ; ಏನಿದರ ವಿಶೇಷತೆ?

ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (TTD) ಅಧಿಕಾರಿಗಳು ಮತ್ತು ಅರ್ಚಕರು ರಾಜ್ಯಪಾಲರನ್ನು ಸ್ವಾಗತಿಸಿದರು. ಪೂಜೆಯ ನಂತರ ರಂಗಾನಾಯಕುಲ ಮಂಟಪದಲ್ಲಿ ಶ್ರೀವಾರಿ ವಸ್ತ್ರವನ್ನು ನೀಡಿ ರಾಜ್ಯಪಾಲರನ್ನು ಗೌರವಿಸಿದರು. ನಂತರ ತಿಮ್ಮಪ್ಪ ಸ್ವಾಮಿ ಪ್ರಸಾದವನ್ನು ರಾಜ್ಯಪಾಲರಿಗೆ ದೇವಾಲಯದ ವತಿಯಿಂದ ನೀಡಲಾಯಿತು. ಇದನ್ನೂ ಓದಿ: ಚಂದ್ರಯಾನ ಯಶಸ್ಸಿಗಾಗಿ ರುದ್ರಾಭಿಷೇಕ, ಮಹಾಮೃತ್ಯುಂಜಯ ಹೋಮ – ಶ್ರೀಶೈಲ ಜಗದ್ಗುರುಗಳಿಂದಲೂ ಶುಭಹಾರೈಕೆ

Web Stories

Share This Article