ಉಡುಪಿ: ನಿಯಮಬಾಹಿರವಾಗಿ ಅಂಗಡಿ ವ್ಯಾಪಾರ ನಡೆಸುವ ವಿಚಾರದಲ್ಲಿ ಸರೋಜಾ ದಾಸ್ ಮತ್ತು ಗ್ರಾಮಸ್ಥರ ನಡುವೆ ತಿಕ್ಕಾಟ ಇತ್ತು. ಹಲವಾರು ಬಾರಿ ಇದೇ ವಿಚಾರಕ್ಕೆ ಜಟಾಪಟಿಯೂ ನಡೆದಿತ್ತು. ಕರ್ತವ್ಯದಲ್ಲಿದ್ದ ಪೊಲೀಸರಿಗೆ ಸೀಮೆಎಣ್ಣೆ ಎರಚಿ ಬೆಂಕಿ ಕೊಡುವಷ್ಟರ ಮಟ್ಟಿಗೆ ಇದು ಮುಂದುವರಿಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆಶ್ಚರ್ಯವಾದರೂ ಸತ್ಯವಾಗಿರುವ ಈ ಘಟನೆ ಕುಂದಾಪುರದಲ್ಲಿ (Kundapura) ನಡೆದಿದೆ.
ಉಡುಪಿ (Udupi) ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಅಂಗಡಿ ವಸ್ತುಗಳನ್ನು ಇಟ್ಟು ಮಾರಾಟ ಮಾಡಬಾರದು ಎಂದು ಗ್ರಾಮಸ್ಥರಿಗೂ ಅಂಗಡಿ ಮಾಲಕಿ ಸರೋಜಾ ದಾಸ್‍ಗೂ (Saroja Das) ತಗಾದೆಯಿತ್ತು. ಸ್ಥಳೀಯರು ಗ್ರಾಮಸ್ಥರು ಪಂಚಾಯತ್ ನಡುವೆ ಈ ವಿಚಾರದಲ್ಲಿ ಜಗಳಗಳು ಬಹಳ ಸಮಯದಿಂದ ನಡೆಯುತ್ತಿತ್ತು. ಪೊಲೀಸರಿಗೆ ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದರು. ಸಮಸ್ಯೆ ಕುರಿತು ಚರ್ಚೆ ನಡೆಯುತ್ತಿದ್ದಾಗ ಸರೋಜಾ ದಾಸ್ ಬಾಟ್ಲಿಯಲ್ಲಿ ಸೀಮೆ ಎಣ್ಣೆ (Kerosene) ಹಿಡಿದು ಸ್ಥಳದಲ್ಲಿದ್ದವರ ಮೇಲೆ ಎರಚಿದ್ದಾರೆ. ನೆಲ ಒರೆಸುವ ಮಾಪ್‍ಗೆ ಬೆಂಕಿ ಹಚ್ಚಿ ಜನರತ್ತ ದಾಳಿ ಮಾಡಲು ಬಂದಿದ್ದಾರೆ.
ಕೋಟೇಶ್ವರ (Koteshwara) ಮುಖ್ಯರಸ್ತೆಯಲ್ಲಿ ಈ ಘಟನೆ ಕೆಲಕಾಲ ಹೈಡ್ರಾಮ ಸೃಷ್ಟಿ ಮಾಡಿತು. ಸರೋಜಾ ಅವರ ಟೈಲರ್ ಮತ್ತು ಫ್ಯಾನ್ಸಿ ಸ್ಟೋರ್ ಸಾಮಾನುಗಳನ್ನು ರಸ್ತೆಗೆ ಹರಡಿ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಿದ್ದು ಇಷ್ಟೆಲ್ಲ ರಂಪಾಟಕ್ಕೆ ಕಾರಣ. ಈ ಬಗ್ಗೆ ಪಂಚಾಯತ್ ಸೂಚನೆ ಕೊಟ್ಟಿದ್ದರು ಆ ಬಗ್ಗೆ ಮಹಿಳೆ ಕ್ಯಾರೇ ಅಂದಿರಲಿಲ್ಲ. ತನಿಖೆಗೆ ಆಗಮಿಸಿದ ಪೊಲೀಸರನ್ನು ಮಹಿಳೆ ನಿಂದಿಸಿದ್ದಾರೆ. ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಏಮ್ಸ್ ನಿರ್ಮಾಣಕ್ಕೆ ಒತ್ತಡ – ಕೇಂದ್ರ ಆರೋಗ್ಯ ಸಚಿವರ ಭೇಟಿಯಾದ ಹೈ.ಕ ನಾಯಕರ ನಿಯೋಗ
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಸರೋಜಾ ದಾಸ್ ಬೀದಿ ರಂಪ ಇದೇ ಮೊದಲಲ್ಲ. ಅಮಾಸೆಬೈಲು ಹಾಗೂ ಶಂಕರನಾರಾಯಣ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ಯಂತೆ. ನ್ಯಾಯಾಲಯಕ್ಕೆ ಹಾಜರಾಗದ ಕಾರಣ ವಾರಂಟ್ ಜಾರಿ ಮಾಡಲಾಗಿದೆ ಎಂಬ ಮಾಹಿತಿ ಇದೆ.
Web Stories