ಮಳೆ ಬೆಳೆ ರಾಜಕೀಯ ವೈಪರೀತ್ಯದ ಎಚ್ಚರಿಕೆ – ಕೋಮಾರನಹಳ್ಳಿ ಲಕ್ಷ್ಮಿ ರಂಗನಾಥ ಸ್ವಾಮಿ ಕಾರ್ಣಿಕ

Public TV
1 Min Read
Davanagere Komaranahalli Lakshmi Ranganatha Swamy

ದಾವಣಗೆರೆ: ಅನಾದಿಕಾಲದಿಂದಲೂ ಕಾರ್ಣಿಕಕ್ಕೆ ತನ್ನದೇ ಆಗಿರುವ ಪ್ರಾಶಸ್ತ್ಯವಿದೆ. ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ಕೋಮಾರನಹಳ್ಳಿ (Komaranahalli) ಬಳಿ ಇರುವ ಲಕ್ಷ್ಮಿ ರಂಗನಾಥ ಸ್ವಾಮಿ (Lakshmi Ranganatha Swamy) ಕಾರ್ಣಿಕವಾಗಿದ್ದು, ಇದು ಎಚ್ಚರ ಸಂದೇಶದ ಕಾರ್ಣಿಕವಾಗಿದೆ ಎಂದು ಇಲ್ಲಿನ ನಂಬಿಕೆಯಾಗಿದೆ.

ಮುತ್ತಿನ ರಾಶಿಗೆ ಸರ್ಪ ಸುತ್ತಿತಲೆ ಸರ್ಪಕ್ಕೆ ಹದ್ದು ಕಾದೀತಲೇ ಎಚ್ಚರ ಎಂದು ಹರಳಹಳ್ಳಿ ಅಂಜನೇಯಸ್ವಾಮಿ ಪೂಜಾರಿ ಅವಾಹಿತ ವ್ಯಕ್ತಿಯಿಂದ ಕಾರ್ಣಿಕ ನುಡಿದಿದ್ದಾರೆ. ಇದರ ಅರ್ಥ ಮಳೆ ಬೆಳೆ ರಾಜಕೀಯ ವೈಪರೀತ್ಯದ ವಾಣಿ ಎಂದು ಅರ್ಥೈಸಲಾಗಿದೆ.

ಪ್ರತಿ ವರ್ಷ ನಾಗರ ಪಂಚಮಿ ನಂತರ ನಡೆಯುವ ಕಾರ್ಣಿಕವಾಗುತ್ತಿದ್ದು, ಅಪಾರ ಜನಸ್ತೋಮ ನಡುವೆ ಅದ್ದೂರಿಯಾಗಿ ಕಾರ್ಣಿಕ ನಡೆದಿದೆ. ಇಲ್ಲಿ ನುಡಿಯುವ ಕಾರ್ಣಿಕ ಸತ್ಯವಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ.

ಈ ಬಾರಿ ಮಳೆ ಬೆಳೆಯಲ್ಲಿ ರೈತರಿಗೆ ಸಂಕಷ್ಟವಾಗಲಿದ್ದು, ರಾಜಕೀಯದಲ್ಲಿ ಸಾಕಷ್ಟು ವೈಪರೀತ್ಯವಾಗಲಿದೆ ಎಂದು ಕಾರ್ಣಿಕ ನುಡಿದಿದೆ. ಇದನ್ನೂ ಓದಿ: Chandrayaan-3; ರಾಜ್ಯದ ಎಲ್ಲಾ ಶಾಲೆಗಳಲ್ಲೂ ಲ್ಯಾಂಡಿಂಗ್‌ ನೇರ ಪ್ರಸಾರ: ಯೋಗಿ ಆದಿತ್ಯನಾಥ್‌

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article