ಮೆಗಾಸ್ಟಾರ್ ಹುಟ್ಟುಹಬ್ಬಕ್ಕೆ 157ನೇ ಸಿನಿಮಾ ಅನೌನ್ಸ್

Public TV
1 Min Read
chiranjeevi 4

ಟಾಲಿವುಡ್ (Telugu) ಮೆಗಾಸ್ಟಾರ್ (Megastar) ಚಿರಂಜೀವಿಗಿಂದು (Chiranjeevi) ಹುಟ್ಟುಹಬ್ಬದ (Birthday)ಸಂಭ್ರಮ. ಮೆಗಾಸ್ಟಾರ್ ಜನ್ಮದಿನದ ಅಂಗವಾಗಿ 157ನೇ ಸಿನಿಮಾ ಅನೌನ್ಸ್ ಆಗಿದೆ. ತೆಲುಗು ಚಿತ್ರರಂಗದ ಎವರ್‌ಗ್ರೀನ್ ಕ್ಲಾಸಿಕ್‌ಗಳಲ್ಲಿ ಒಂದಾಗಿರುವ ಜಗದೇಕ ವೀರುಡು ಅತಿಲೋಕ ಸುಂದರಿಯಂತಹ ಮತ್ತೊಂದು ಫ್ಯಾಂಟಸಿ ಎಂಟರ್‌ಟೈನರ್‌ನಲ್ಲಿ ಚಿರು ನಟಿಸುತ್ತಿದ್ದಾರೆ.

Mega 157

ಬಿಂಬಿಸಾರ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ವಸಿಷ್ಠ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಯುವಿ ಕ್ರಿಯೇಷನ್ಸ್‌ನ ಯಶಸ್ವಿ ಬ್ಯಾನರ್ ಅಡಿಯಲ್ಲಿ ವಿ ವಂಶಿ ಕೃಷ್ಣಾ ರೆಡ್ಡಿ, ಪ್ರಮೋದ್ ಉಪ್ಪಲಪಟ್ಟಿ ಮತ್ತು ವಿಕ್ರಮ್ ರೆಡ್ಡಿ ನಿರ್ಮಿಸಲಿರುವ #Mega157 ಚಿತ್ರ ಚಿರಂಜೀವಿ ಅವರ ವೃತ್ತಿಜೀವನದಲ್ಲಿ ಅತ್ಯಂತ ದುಬಾರಿ ಚಿತ್ರ ಎನ್ನಲಾಗಿದೆ. ಇದನ್ನೂ ಓದಿ:ಬಾಲಿವುಡ್‌ ನಟ ಪಂಕಜ್ ತ್ರಿಪಾಠಿ ತಂದೆ ವಿಧಿವಶ

chiranjeevi 5

ನಿರ್ದೇಶಕ ವಸಿಷ್ಠ (Vasishtha) ಈ ಸಿನಿಮಾ ಮೂಲಕ ಮೆಗಾ ಮಾಸ್ ಯೂನಿವರ್ಸ್ ಅನ್ನು ಸಿನಿರಸಿಕರಿಗೆ ಪರಿಚಯಿಸಲಿದ್ದಾರೆ. ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶದಂತಹ ಪಂಚಭೂತಗಳು (ಪ್ರಕೃತಿಯ ಐದು ಅಂಶಗಳು) ತ್ರಿಶೂಲದೊಂದಿಗೆ ನಕ್ಷತ್ರಾಕಾರದ ಅಂಶವನ್ನು ಹೊಂದಿರುವ ಪೋಸ್ಟರ್ ಅನಾವರಣ ಮಾಡಲಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

ಚಿರು ಹುಟ್ಟುಹಬ್ಬದ ಅಂಗವಾಗಿ ಹೊಸ ಪೋಸ್ಟರ್ ಅನಾವರಣ ಮಾಡಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗವನ್ನು ಪರಿಚಯಿಸಲಿದೆ.

Web Stories

Share This Article