ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ – ಬೀದರ್‌ನ ಸ್ನೇಹಿತರಿಬ್ಬರು ದುರ್ಮರಣ

Public TV
1 Min Read
Telangana Accident

ಬೀದರ್: ಲಾರಿಗೆ ಹಿಂಬದಿಯಿಂದ ಕಾರು (Car) ಡಿಕ್ಕಿಯಾಗಿ ಸ್ಥಳದಲ್ಲೇ ಬೀದರ್ (Bidar) ಮೂಲದ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ತೆಲಂಗಾಣದ (Telangana) ಜಹೀರಾಬಾದ್ ಬಳಿ ನಡೆದಿದೆ.

ಮೃತರನ್ನು ಅವಿನಾಶ್ ಗೋಡೆ (27) ಹಾಗೂ ವೀರೇಶ್ (30) ಎಂದು ಗುರುತಿಸಲಾಗಿದೆ. ಈ ಇಬ್ಬರೂ ಯುವಕರು ಔರಾದ್‍ನ ನಾಗಮಾರಪ್ಪಳ್ಳಿ ಗ್ರಾಮದ ವಾಸಿಗಳು ಎಂದು ತಿಳಿದು ಬಂದಿದೆ. ಈ ಇಬ್ಬರು ಸ್ನೇಹಿತರಾಗಿದ್ದು, ಅಪಘಾತದ ತೀವ್ರತೆಯಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆ.30 ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿಗೆ ಚಾಲನೆ: ಲಕ್ಷ್ಮಿ ಹೆಬ್ಬಾಳ್ಕರ್

ಯುವಕರು ಬೀದರ್‍ನಿಂದ ಹೈದರಾಬಾದ್‍ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಏಕಾಏಕಿ ಕಾರು ನಿಯಂತ್ರಣ ತಪ್ಪಿದೆ. ಇದರಿಂದ ಮುಂದೆ ಸಾಗುತ್ತಿದ್ದ ಲಾರಿಗೆ ರಭಸವಾಗಿ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ಸಾವಿಗೀಡಾಗಿದ್ದಾರೆ. ಜಹೀರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಪತಿಯನ್ನ ಸ್ನಾನ ಮಾಡುವಂತೆ ಬಾತ್‌ರೂಮ್‌ಗೆ ಕಳುಹಿಸಿ, ಸ್ನೇಹಿತನೊಂದಿಗೆ ಪತ್ನಿ ಎಸ್ಕೇಪ್

Web Stories

Share This Article