ಹುಬ್ಬಳ್ಳಿ: ಸೋಮಶೇಖರ್ (S.T.Somshekar), ಹೆಬ್ಬಾರ್ (Shivaram Hebbar) ಪಕ್ಷ ಬಿಟ್ಟು ಹೋಗಲ್ಲಾ ಎಂದಿದ್ದಾರೆ. ಸದ್ಯದ ಮಟ್ಟಿಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಈ ಬಗ್ಗೆ ರಾಜ್ಯಾಧ್ಯಕ್ಷರೊಂದಿಗೆ ಮಾತಾಡಿದ್ದೇನೆ. ಆ ರೀತಿ ಯಾವುದೇ ಬೆಳವಣಿಗೆ ಆಗಿಲ್ಲಾ ಎಂದಿದ್ದಾರೆ ಎಂದು ಬಾಂಬೆ ಬಾಯ್ಸ್ ಕಾಂಗ್ರೆಸ್ (Congress) ಸೇರ್ಪಡೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ನಾಳೆ ಏನಾಗುತ್ತೆ ಅಂತ ಹೇಳಲು ನಾನು ಭವಿಷ್ಯಗಾರ ಅಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಮುನೇನಕೊಪ್ಪ ಕೂಡ ನನ್ನೊಂದಿಗೆ ಮಾತಾಡಿದ್ದು, ಅವರು ಪಕ್ಷ ತೊರೆಯಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ದೇಗುಲಗಳಿಗೆ ರಿಲೀಸ್ ಮಾಡಿದ್ದ ಅನುದಾನಕ್ಕೆ ಬ್ರೇಕ್
ಮೋದಿಯವರ ನಾಯಕತ್ವ, ಬಿಜೆಪಿ ಪ್ರಸ್ತುತತೆ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಕಾವೇರಿ ವಿಷಯ ಡೈವರ್ಟ್ ಮಾಡಲು ಪಕ್ಷಾಂತರ ವಿಚಾರ ಮುಂದೆ ತಂದಿದ್ದಾರೆ. ಭ್ರಷ್ಟಾಚಾರ ಹೆಚ್ಚಾಗಿದೆ ಅಂತ ಕಾಂಗ್ರೆಸ್ ಪಾರ್ಟಿಯವರೇ ಹೇಳುತ್ತಿದ್ದಾರೆ. ಕಾಂಗ್ರೆಸ್‌ಗೆ ನೇತೃತ್ವ ಮತ್ತು ನಿಯತ್ತಿಲ್ಲ. ಬಿಜೆಪಿ ಬಂಡೆಗಲ್ಲಂತೆ ಗಟ್ಟಿಯಾಗಿದೆ ಎಂದಿದ್ದಾರೆ.
ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ರಾಮಲಿಂಗಾರೆಡ್ಡಿಗೆ ಹೇಗೆ ಗೊತ್ತು, ಅವರೇನು ಬಿಜೆಪಿ ಪಕ್ಷದಲ್ಲಿದ್ದಾರಾ? ಚೆಲುವರಾಯಸ್ವಾಮಿ ಸೇರಿ ಮತ್ತೊಬ್ಬರ ಹೇಳಿಕೆಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ. ಚೆಲುವರಾಯಸ್ಬಾಮಿ ಮೇಲೆ ಗಂಭೀರ ಆರೋಪ ಬಂದಿವೆ. ಅವರು ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ಸರ್ಕಾರದ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿವೆ. ಪ್ರಾಥಮಿಕವಾಗಿ ಕಾಣುವಂತೆ ಸತ್ಯ ಎನ್ನಬಹುದಾದ ಆರೋಪಗಳು ಕೇಳಿ ಬಂದಿವೆ. ದೂರು ಕೊಟ್ಟ ಗುತ್ತಿಗೆದಾರರನ್ನು ಮೊದಲು ಪೊಲೀಸ್ ಠಾಣೆಗೆ ಕರೆಸುತ್ತಿದ್ದಾರೆ. ಗುತ್ತಿಗೆದಾರರನ್ನು ಹೆದರಿಸಿ, ಬೆದರಿಸಿ ಉಲ್ಟಾ ಹೊಡೆಯುವ ಹಾಗೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡ್ಯಾಂನಲ್ಲಿ ತುಂಬಿ ಹಿಡಿದುಟ್ಟುಕೊಳ್ಳಲು ಆಗದೇ ಇದ್ದಾಗ ತಮಿಳುನಾಡಿಗೆ ನೀರು ಬಿಟ್ಟಿದ್ವಿ: ಹೆಚ್‍ಡಿಕೆ
Web Stories