ವಾಷಿಂಗ್ಟನ್: ಸತತ 27 ವರ್ಷದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದ ವ್ಯಕ್ತಿಗೆ 3.5 ಕೋಟಿ ರೂ. ಬಹುಮಾನವಾಗಿ ಸಿಕ್ಕಿದೆ.
ಅಮೆರಿಕದ (America) ಬರ್ಗರ್ ಕಿಂಗ್ (Burger King) ಕಂಪನಿ ಉದ್ಯೋಗಿ ಕೆವಿನ್ ಫೋರ್ಡ್ 27 ವರ್ಷ ರಜೆ ಇಲ್ಲದೇ ಕೆಲಸ ಮಾಡಿದ್ದರು. ಆದರೆ ನಿವೃತ್ತಿ ಸಂದರ್ಭದಲ್ಲಿ ಕಂಪನಿ ಇವರಿಗೆ ಸಣ್ಣಪುಟ್ಟ ಉಡುಗೊರೆಗಳನ್ನು ನೀಡಿ ಕೈ ತೊಳೆದುಕೊಂಡಿತು. ತನ್ನ ಅತ್ಯಮೂಲ್ಯ ಸೇವೆಗಾಗಿ ಕಂಪನಿಯಿಂದ ಏನಾದರು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಫೋರ್ಡ್‌ಗೆ ಸಹಜವಾಗಿಯೇ ನಿರಾಸೆಯಾಯಿತು. ಇದನ್ನೂ ಓದಿ: ಯುಎಸ್ ಅಧ್ಯಕ್ಷೀಯ ಸ್ಥಾನಕ್ಕೆ ಭಾರತೀಯ ಅಮೆರಿಕನ್ ಸ್ಪರ್ಧೆ – ಎಲೋನ್ ಮಸ್ಕ್ ಶ್ಲಾಘನೆ
ಇದರಿಂದ ಬೇಸರಗೊಂಡ ಫೋರ್ಡ್‌ನ ಮಗಳು ಸೆರಿನಾ ಸಾಮಾಜಿಕ ಜಾಲತಾಣದಲ್ಲಿ ತನ್ನ ತಂದೆಯ ಕರ್ತವ್ಯ ನಿಷ್ಠೆ ಬಗ್ಗೆ ವೀಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು. ತನ್ನ ತಂದೆ ಸೇವೆಗೆ ಅರ್ಹವಾದ ಮನ್ನಣೆ ಸಿಗಬೇಕು ಎಂದು GoFundMe ಅಭಿಯಾನವನ್ನು ಪ್ರಾರಂಭಿಸಿದರು.
ಈ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆವಿನ್ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿ ವಿಶ್ವದಾದ್ಯಂತ ಜನರು ದೇಣಿಗೆ ನೀಡಿದರು. ಇದರ ಫಲವಾಗಿ 4,18,000 ಡಾಲರ್ ಅಂದರೆ 3.48 ಕೋಟಿಗೂ ಹೆಚ್ಚು ದೇಣಿಗೆ ಹರಿದು ಬಂತು. ಇದನ್ನೂ ಓದಿ: 21 ಚರ್ಚ್‌ಗಳನ್ನು ಧ್ವಂಸಗೊಳಿಸಿದ 600 ಜನರ ಮೇಲೆ ಕೇಸ್ – 135 ಆರೋಪಿಗಳನ್ನು ಬಂಧಿಸಿದ ಪಾಕ್ ಪೊಲೀಸರು
Web Stories