ಮಕ್ಕಳಿಗಾಗಿ ಪನೀರ್ ಮಸಾಲ ರೋಲ್

Public TV
2 Min Read
masala paneer roll

ಕ್ಕಳಿಗೆ ಚಪಾತಿ ರೋಲ್, ವೆಜ್ ರೋಲ್ ಮುಂತಾದ ತಿಂಡಿಗಳು ಬಹುಬೇಗ ಇಷ್ಟವಾಗುತ್ತದೆ. ಇಂತಹ ತಿಂಡಿಗಳನ್ನು ಮಾಡಿ ಮಕ್ಕಳಿಗೆ ತಿನ್ನಲು ಕೊಡುವುದಲ್ಲದೇ ಅವರ ಟಿಫನ್ ಬಾಕ್ಸ್‌ಗೂ ಹಾಕಿ ಶಾಲೆಗೆ ಕಳುಹಿಸಬಹುದು. ಇದು ಹೊಟ್ಟೆ ತುಂಬಿಸುವುದಲ್ಲದೇ ಒಳ್ಳೆಯ ರುಚಿಯನ್ನೂ ನೀಡುತ್ತದೆ. ಇವತ್ತು ನಾವು ನಿಮಗೆ ಪನೀರ್ ಮಸಾಲ ರೋಲ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು? ಇದಕ್ಕೆ ಯಾವೆಲ್ಲಾ ಸಾಮಗ್ರಿಗಳು ಬೇಕು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಮುಂಬೈ ಸ್ಟ್ರೀಟ್ ಸೈಡ್ ಸ್ಟೈಲ್‌ನಲ್ಲಿ ಗೆಣಸು ಮನೆಯಲ್ಲೇ ಮಾಡಿ

masala paneer roll 2

ಬೇಕಾಗುವ ಸಾಮಗ್ರಿಗಳು:
ಚಪಾತಿ ಅಥವಾ ಪರೋಟ – 4
ಮಯೋನೀಸ್- 4 ಚಮಚ
ಪನೀರ್ – 400 ಗ್ರಾಂ
ಹೆಚ್ಚಿದ ಕಾಪ್ಸಿಕಮ್ – ಅರ್ಧ ಕಪ್
ಹೆಚ್ಚಿದ ಟೊಮೆಟೊ – 1
ಹೆಚ್ಚಿದ ಈರುಳ್ಳಿ – 1
ಶುಂಠಿ – 1 ಚಮಚ
ಹೆಚ್ಚಿದ ಹಸಿರು ಮೆಣಸು – 2
ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಚಮಚ
ಹೆಚ್ಚಿದ ಪುದೀನಾ – 1 ಚಮಚ
ಕಸೂರಿ ಮೇತಿ – 1 ಚಮಚ
ಸೋಂಪು ಪೌಡರ್ – 1 ಚಮಚ
ಅಚ್ಚ ಖಾರದ ಪುಡಿ – 1 ಚಮಚ
ಪೆಪ್ಪರ್ ಪೌಡರ್ – 1 ಚಮಚ
ಆಮ್ಚೂರ್ ಪೌಡರ್ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು

masala paneer roll 1

ಮಾಡುವ ವಿಧಾನ:
* ಮೊದಲಿಗೆ ಪನೀರ್ ಅನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಅಥವಾ ಪುಡಿ ಮಾಡಿಕೊಳ್ಳಿ.
* ಈಗ ಒಂದು ಬೌಲ್ ತೆಗೆದುಕೊಂಡು ಎಲ್ಲಾ ಸಾಮಗ್ರಿಗಳನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಬಳಿಕ ಅದಕ್ಕೆ ಹೆಚ್ಚಿದ ಪನೀರ್ ಅಥವಾ ಪುಡಿ ಮಾಡಿದ ಪನೀರ್ ಅನ್ನು ಸೇರಿಸಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳಿ.
* ನಂತರ ಒಂದೊಂದೆ ಚಪಾತಿ ಅಥವಾ ಪರೋಟವನ್ನು ತವಾದಲ್ಲಿ ಬೇಯಿಸಿಕೊಂಡು ಅದರ ಮೇಲೆ ಮಯೋನೀಸ್ ಹಚ್ಚಿಕೊಳ್ಳಿ.
* ಬಳಿಕ ಅದಕ್ಕೆ ಮಸಾಲೆ ಪನೀರ್ ಮಿಶ್ರಣವನ್ನು ಅದರ ಒಳಗಡೆ ಹಾಕಿ ರೋಲ್ ಮಾಡಿಕೊಳ್ಳಿ. ಅದೇ ರೀತಿ ಉಳಿದ ಚಪಾತಿಗಳನ್ನೂ ಮಾಡಿಕೊಳ್ಳಿ.
* ಪನೀರ್ ಮಸಾಲ ರೋಲ್ ತಿನ್ನಲು ರೆಡಿ. ಇದನ್ನು ಒಂದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿಕೊಂಡು ಕೆಚಪ್ ಅಥವಾ ಟೊಮೆಟೋ ಸಾಸ್‌ನೊಂದಿಗೆ ಸವಿಯಲು ಕೊಡಿ. ಇದನ್ನೂ ಓದಿ: ರುಚಿರುಚಿಯಾಗಿ ಮಾಡಿ ಚಿಲ್ಲಿ ಗಾರ್ಲಿಕ್ ಪರೋಟ

Web Stories

Share This Article