ಬೆಂಗಳೂರಿನ 10 ಕಡೆ ಲೋಕಾಯುಕ್ತ ದಾಳಿ

Public TV
1 Min Read
R I NATARAJ

ಬೆಂಗಳೂರು: ರಾಜ್ಯಾದ್ಯಂತ 25ಕ್ಕೂ ಹೆಚ್ಚು ಕಡೆ ಲೋಕಾಯುಕ್ತ ಪೊಲೀಸರು (Lokayukta Police) ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ನಾಲ್ಕು ಎಫ್‍ಐಆರ್ ಸಂಬಂಧ 10 ಕಡೆ ದಾಳಿ ನಡೆಸಲಾಗಿದೆ.

ಮಹದೇವಪುರ ಬಿವಿಎಂಪಿ ವಲಯದ ಆರ್‍ಐ ನಟರಾಜ್‍ರ (RI Nataraj) ಬನಶಂಕರಿಯ ಅವಲಹಳ್ಳಿಯ ಮನೆ ಮೇಲೆ ದಾಳಿ ನಡೆದಿದೆ. ಆಗಸ್ಟ್ 4 ರಂದು 79 ಫ್ಲ್ಯಾಟ್ ಖಾತೆ ಮಾಡಲು 5 ಲಕ್ಷ ಹಣ ಪಡೆಯುವಾಗ ನಟರಾಜ್ ಟ್ರ್ಯಾಪ್ ಆಗಿದ್ದ. ಖಾಸಗಿ ವ್ಯಕ್ತಿ ಪವನ್ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಈ ಬಗ್ಗೆ ಮಂಜುನಾಥ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದನ್ನೂ ಓದಿ: ಸಣ್ಣ ನೀರಾವರಿ ಇಲಾಖೆ, ಬಿಬಿಎಂಪಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ – ಅಪಾರ ಚಿನ್ನಾಭರಣ, ಹಣ ಪತ್ತೆ

ಪ್ರತಿ ಫ್ಲ್ಯಾಟ್‍ಗೆ 10 ಸಾವಿರದಂತೆ ಲಂಚ ಆರ್‍ಐ ನಟರಾಜ್ ಕೇಳಿದ್ದ ಅಲ್ಲದೆ 79 ಫ್ಲ್ಯಾಟ್‍ಗೆ 7 ಲಕ್ಷದ 90 ಸಾವಿರ ಲಂಚ ಕೇಳಿದ್ದ. 60 % ಹಣ ಅಡ್ವಾನ್ಸ್ ಅಂದ್ರೆ 5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಈ 5 ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಟ್ರ್ಯಾಪ್ ಆಗಿದ್ದ.

Web Stories

Share This Article