ಬೆಂಗಳೂರು: ಶೆಡ್‌ನಲ್ಲಿ ವಾಸವಿದ್ದ ಕೂಲಿ ಕಾರ್ಮಿಕನ (Labor) ಕುಟುಂಬದ ಮೇಲೆ ಮೇಸ್ತ್ರಿ (Mason) ಹಾಗೂ ಆತನ ಗ್ಯಾಂಗ್ ಮಾರಣಾಂತಿಕವಾಗಿ ಹಲ್ಲೆ (Attack) ನಡೆಸಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಚಂದಾಪುರದ ಹೆಡ್‌ಮಾಸ್ಟರ್ ಲೇಔಟ್‌ನಲ್ಲಿ ನಡೆದಿದೆ.
ರಾಯಚೂರು ಮೂಲದ ಕಟ್ಟಡ ಕೂಲಿ ಕಾರ್ಮಿಕ ಶಿವರಾಜ್ (58) ಹಾಗೂ ಇಬ್ಬರು ಮಕ್ಕಳ ಮೇಲೆ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ. ಮೇಸ್ತ್ರಿ ಬಾಲು ಮತ್ತು ಕೆಲ ಕಿಡಿಗೇಡಿಗಳು ಈ ಹಲ್ಲೆ ನಡೆಸಿದ್ದಾರೆ. ಶಿವರಾಜ್ ಮೇಸ್ತ್ರಿ ಬಾಲುವನ್ನು ಬಿಟ್ಟು ಪ್ರತ್ಯೇಕವಾಗಿ ಕಟ್ಟಡ ಕೆಲಸವನ್ನು ಮಾಡುತ್ತಿದ್ದ. ಇದರಿಂದ ಕೋಪಗೊಂಡ ಬಾಲು ಮಂಗಳವಾರ ತಡರಾತ್ರಿ ಕೆಲ ಪುಡಿ ರೌಡಿಗಳನ್ನು ಕರೆದುಕೊಂಡು ಬಂದು ಊಟ ಮಾಡುತ್ತಿದ್ದ ಶಿವರಾಜ್ ಕುಟುಂಬದ ಮೇಲೆ ಬಾಟಲ್ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಮೊಬೈಲ್ ಕದ್ದು ಫೋನ್ ಪೇ, ಗೂಗಲ್ ಪೇ ಬಳಸಿ ಹಣ ಎಗರಿಸುತ್ತಿದ್ದ ಮೂವರು ಅರೆಸ್ಟ್
ಶಿವರಾಜ್‌ನ ಎರಡು ಮಕ್ಕಳಿಗೆ ರಾಡ್‌ನಿಂದ ಹಲ್ಲೆ ನಡೆಸಿದ್ದು, ತಲೆ ಹಾಗೂ ಕಣ್ಣಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಶಿವರಾಜ್‌ನ ಕೈ ಹಾಗೂ ಒಂದು ಕಾಲನ್ನು ಮುರಿಯಲಾಗಿದೆ. ಅಲ್ಲದೇ ಮನೆ ಮಂದಿಗೆಲ್ಲಾ ಮನಬಂದಂತೆ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದವರನ್ನು ಶಿವರಾಜ್ ಸ್ನೇಹಿತರು ತಡರಾತ್ರಿ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕೆ ಸೂರ್ಯಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು 4ರ ಬಾಲಕಿ ಸಾವು
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]