ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) 11ನೇ ದಿನದ ಪುಣ್ಯಸ್ಮರಣೆಯಲ್ಲಿ ಶ್ರೀಮುರಳಿ (Srimurali) ಭಾಗಿಯಾಗಿದ್ದಾರೆ. ಸಹೋದರ ವಿಜಯ- ಪುತ್ರ ಶೌರ್ಯ ಆಗಮನದ ಬಳಿಕ ಮುರಳಿ ಕೂಡ ಭಾಗವಹಿಸಿದ್ದು, ಮತ್ತೆ ಕಾಲು ನೋವಿನ ಸ್ಥಿತಿಯಲ್ಲಿಯೇ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ನಟನಿಗೆ ಏನಾಯ್ತು ಅಂತಾ ಅಭಿಮಾನಿಗಳು ಆತಂಕಗೊಂಡಿದ್ದಾರೆ.
ಉತ್ತರಕ್ರಿಯೆ ಇಂದು (ಆಗಸ್ಟ್ 16) ಬೆಳಿಗ್ಗೆ 8:30ರಿಂದ ಸ್ಪಂದನಾ ಸ್ವಗೃಹದಲ್ಲಿ ಶಾಂತಿ ಹೋಮ ನೆರವೇರಿದೆ. ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಶಿವಣ್ಣ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಮಗನ ಕೈ ಹಿಡಿದು ವಿಜಯ ಎಂಟ್ರಿ ಕೊಟ್ಟರೆ, ಅತ್ತಿಗೆ ಸ್ಪಂದನಾ ಪುಣ್ಯಸ್ಮರಣೆಯಲ್ಲಿ ಕುಂಟುತ್ತಾಲೇ ಶ್ರೀಮುರಳಿ (Srimurali) ಎಂಟ್ರಿ ಕೊಟ್ಟಿದ್ದಾರೆ. ಕಾಲಿನ ನೋವಿನಿಂದಲೇ ನಿಧಾನಕ್ಕೆ ಹೆಜ್ಜೆ ಇಡುತ್ತಾ ಬಂದಿದ್ದಾರೆ. ಕೆಲ ದಿನಗಳ ಹಿಂದೆ ಬಘೀರ ಸಿನಿಮಾದ ಶೂಟಿಂಗ್‌ನಲ್ಲಿ ಶ್ರೀಮುರಳಿಗೆ ಪೆಟ್ಟಾಗಿತ್ತು. ಬಳಿಕ ಚೇತರಿಸಿಕೊಂಡಿದ್ದರು. ಸ್ಪಂದನಾ ಅಂತ್ಯಕ್ರಿಯೆ ಸಂದರ್ಭದಲ್ಲಿ ಚೆನ್ನಾಗಿದ್ರಲ್ಲಾ ಈಗ ಶ್ರೀಮುರಳಿಗೆ ಏನಾಯ್ತು ಎಂದು ಫ್ಯಾನ್ಸ್ ಆತಂಕಗೊಂಡಿದ್ದಾರೆ.
ಶಾಂತಿ ಹೋಮ(Shanthi Homa) ನೆರವೇರಿದ ಬಳಿಕ ಮಧ್ಯಾಹ್ನ 1 ಗಂಟೆಯಿಂದ ನಂತರ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನ ಆರಂಭವಾಗಿದೆ. ಮನೆಮಗಳು ಸ್ಪಂದನಾ ಆತ್ಮಕ್ಕೆ ಚಿರಶಾಂತಿ ಕೋರಲು ಸರ್ವರಿಗೂ ಭಾಗಿಯಾಗುವಂತೆ ಬಿ.ಕೆ ಶಿವರಾಂ ಮತ್ತು ಎಸ್.ಎ ಚಿನ್ನೆಗೌಡರು ಮತ್ತು ಕುಟುಂಬಸ್ಥರು ಸರ್ವರಿಗೂ ಆಹ್ವಾನ ನೀಡಿದ್ದರು. ಇದನ್ನೂ ಓದಿ:ತೆಲುಗಿನಲ್ಲಿ ಬರಲಿದೆ ಹಾಸ್ಟೆಲ್ ಹುಡುಗರ ಕಥೆ- ರಮ್ಯಾ ನಟಿಸಿದ್ದ ಪಾತ್ರಕ್ಕೆ ರಶ್ಮಿ ಗೌತಮ್ ನಟನೆ
ಸುಮಾರು 4000 ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ವಿಐಪಿ- ಸಾರ್ವಜನಿಕರಿಗೆ ಬೇರೆ ಬೇರೆ ಊಟದ ವ್ಯವಸ್ಥೆ ಮಾಡಲಾಗಿದೆ. 80ಕ್ಕೂ ಹೆಚ್ಚು ಅಡುಗೆಯವರಿಂದ ಭೋಜನ ತಯಾರಿ ಮಾಡಿಸಿದ್ದಾರೆ. ಬರುವ ಗೆಸ್ಟ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಿದ್ದು, ಪೊಲೀಸ್ ಸಿಬ್ಬಂದಿಗಳು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಭೋಜನಕ್ಕೆ ಉಪ್ಪಿಟ್ಟು, ಪಲಾವ್, 2500 ಲಡ್ಡು, ಮಸಾಲಾ ವಡೆ, ಉದ್ದಿನ ವಡೆ, ಕೊಸಂಬರಿ, ಅನ್ನದ ಜೊತೆ ತರಕಾರಿ ಸಾರು ಮತ್ತು ತಿಳಿಸಾರು ಹಾಗೂ ಪಾಯಸ, ಮೊಸರು, ಹಪ್ಪಳ, ಆಬೊಂಡೆ ಸೇರಿದಂತೆ 21 ಬಗೆಯ ವಿವಿಧ ಖಾದ್ಯಗಳ ತಯಾರಿ ಮಾಡಲಾಗಿದೆ.
ಆಗಸ್ಟ್ 6ರಂದು ಭಾನುವಾರ ಬ್ಯಾಕಾಂಕ್‌ನಲ್ಲಿ ಹೃದಯಾಘಾತದಿಂದ ಸ್ಪಂದನಾ ನಿಧನರಾಗಿದ್ದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ.