ಸ್ತನ ಕ್ಯಾನ್ಸರ್ ಬರಲು ಕಾರಣಗಳೇನು..?- ಚಿಕಿತ್ಸೆ ಹೇಗೆ..?

Public TV
3 Min Read
Breast Cancer

ಹಿಳೆಯರ ಅಂದವನ್ನು ಕಾಪಾಡುವಲ್ಲಿ ಸ್ತನಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಈ ಸ್ತನಗಳಿಗೂ ಮಾರಕ ಕಾಯಿಲೆ ಕ್ಯಾನ್ಸರ್ ವಕ್ಕರಿಸುತ್ತದೆ. ಹೌದು. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಮಾರಕ ಕಾಯಿಲೆಗಳಲ್ಲಿ ಸ್ತನ ಕ್ಯಾನ್ಸರ್ (Breast Cancer) ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಈ ರೋಗವು ಹೆಚ್ಚಾಗಿ ಕಂಡುಬರುತ್ತಿದೆ. ಸುಮಾರು 8 ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್‍ಗೆ ಒಳಗಾಗುತ್ತಾರೆ. ಇದು ಒಂದು ಅಥವಾ ಎರಡು ಸ್ತನಗಳ ಮೇಲೆಯೂ ಪರಿಣಾಮ ಬೀರಬಹುದು. ಇದು ಸ್ತನದ ವಿವಿಧ ಭಾಗಗಳಲ್ಲಿ ಸಂಭವಿಸಬಹುದು ಮತ್ತು ಇದು ಸ್ತನದಲ್ಲಿ ಸಂಭವಿಸುವ ಅಸಹಜ ಬೆಳವಣಿಗೆಯಾಗಿದ್ದು ಅದು ಹರಡಲೂಬಹುದು.

DIET FOOD

ಕೆಲವು ಮಹಿಳೆಯರು ವಯಸ್ಸಾದ್ರೂ ಯಂಗ್ ಆಂಡ್ ಬ್ಯೂಟಿಫುಲ್ ಆಗಿ ಕಾಣಲು ಪಾಶ್ಚಿಮಾತ್ಯ ಡಯಟ್ ಪ್ಲಾನ್ ಮೊರೆ ಹೋಗುತ್ತಿದ್ದು, ಇದೇ ಈಗ ಮಾರಕ ಕಾಯಿಲೆಗೆ ಕಾರಣವಾಗುತ್ತಿದೆ ಎಂಬ ಆತಂಕಕಾರಿ ವಿಚಾರವೊಂದು ಬಯಲಾಗಿದೆ. ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಇರುವ ಮೂಡನಂಭಿಕೆ ಹಾಗೂ ತಿಳುವಳಿಕೆ ಕೊರತೆ ಕೂಡಾ ಸ್ತನ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸಾಕಷ್ಟು ಮಹಿಳೆಯರು ಕೊನೆಯ ಹಂತದಲ್ಲಿ ಸ್ತನ ಕ್ಯಾನ್ಸರ್ ಬೆಳಕಿಗೆ ಬಂದು ಸಾವಿಗೆ ಕಾರಣರಾಗುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಕಳೆದ ವರ್ಷಗಳಿಂದ ಸ್ತನ ಕ್ಯಾನ್ಸರ್ ಪ್ರಕರಣ ಏರಿಕೆಯಾಗುತ್ತಿದ್ದು, ಈ ಸಂಬಂಧ ಬಗ್ಗೆ ಕಿದ್ವಾಯಿ ಆಸ್ಪತ್ರೆಯ ವೈದ್ಯರು ಅಚ್ಚರಿಯ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನ ಮಹಿಳೆಯರಲ್ಲಿ ಕೊರೊನಾಕ್ಕೂ ಮೊದಲು ವರ್ಷಕ್ಕೆ 700 ರಿಂದ 750 ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿತ್ತು. ಆದರೆ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 1012 ಕೇಸ್ ಕಾಣಿಸಿಕೊಂಡಿದೆ. ಅದರಲ್ಲೂ ಹೆಚ್ಚಾಗಿ ಮಧ್ಯವಯಸ್ಸಿನ ಮಹಿಳೆಯರು 3ನೇ ಹಂತ ಅಥವಾ 4ನೇ ಹಂತ ಸ್ಥಿತಿಗಳಲ್ಲಿ ಸ್ತನದ ಕ್ಯಾನ್ಸರ್ ಪತ್ತೆಯಾಗ್ತೀರೊದು ಸಾಕಷ್ಟು ಸಾವಿಗೆ ಕಾರಣವಾಗುತ್ತಿದೆ. ಹೀಗಾಗಿ ಮಹಿಳೆಯರು ಪ್ರತಿ ತಿಂಗಳು ಒಂದು ಸರಿ ತಮ್ಮನ್ನು ತಾವು ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ ಅವಶ್ಯ ಎಂದು ಹೇಳಿದ್ದಾರೆ.

Alcoholic Drink copy

ಸ್ತನ ಕ್ಯಾನ್ಸರ್‌ಗೆ ಕಾರಣಗಳೇನು..?
* ಮಹಿಳೆಯರಲ್ಲಿ ಹೆಚ್ಚಾದ ಮದ್ಯಪಾನ ಹಾಗೂ ಧೂಮಪಾನ
* ಪಾಶ್ಚಿಮಾತ್ಯ ಜೀವನ ಶೈಲಿ ಹಾಗೂ ಡಯಟ್ ಪ್ಲಾನ್
* ಅತಿ ಬೇಗನೇ ಋತುಸ್ರಾವ
* ತಡವಾದ ಋತುಬಂಧ
* ಸಂತಾನೋತ್ಪತ್ತಿ ಅಂಶಗಳು
* ಗರ್ಭನಿರೋಧಕ ಬಳಕೆ
* ಹಾರ್ಮೋನು ಬದಲಾವಣೆಯ ಚಿಕಿತ್ಸೆ
* ಬೊಜ್ಜು, ತೂಕ ಹೆಚ್ಚಾಗುವುದು ಹಾಗೂ ಕೊಬ್ಬಿನ ಅಂಶ ಈ ಎಲ್ಲವುಗಳು ಸ್ತನ ಕ್ಯಾನ್ಸರ್‍ಗೆ ಕಾರಣವಾಗಿರುತ್ತದೆ.

ಪೌಷ್ಟಿಕಾಂಶದ ಅಂಶಗಳಲ್ಲಿ, ತೂಕ ಹೆಚ್ಚಾಗುವುದು ಮತ್ತು ಹೆಚ್ಚಿನ ಕ್ಯಾಲೋರಿ ಸೇವನೆಯು ಸ್ತನ ಕ್ಯಾನ್ಸರ್ ಬೆಳವಣಿಗೆಗೆ ಎರಡು ಕಾರಣಗಳಾಗಿವೆ. 1940 ರಲ್ಲಿ ಮೊದಲ ಬಾರಿಗೆ, ಕೊಬ್ಬಿನ ಹೆಚ್ಚಿನ ಬಳಕೆಯು ಪ್ರಾಣಿಗಳಲ್ಲಿ ಸ್ತನ ಗೆಡ್ಡೆಗೆ ಕಾರಣವಾಗುತ್ತದೆ ಎಂದು ಕೆಲ ಸಂಶೋಧನೆಗಳು ತೋರಿಸಿವೆ. ಒಂದೆಡೆ ಕ್ಯಾಲೋರಿ ಸೇವನೆಯು ತೂಕ ಹೆಚ್ಚಳ ಮತ್ತು ಸ್ಥೂಲಕಾಯತೆಗೆ ಕಾರಣವಾಗುತ್ತದೆ, ಮತ್ತೊಂದೆಡೆ ಇದು ಬಾಲ್ಯದಲ್ಲಿ ಎತ್ತರವನ್ನು ಹೆಚ್ಚಿಸುತ್ತದೆ ಮತ್ತು ಪ್ರಸವಪೂರ್ವ ಋತುಬಂಧಕ್ಕೆ ಕಾರಣವಾಗುತ್ತದೆ.

BREAST CANCER 111

ಆರಂಭಿಕ ಲಕ್ಷಣಗಳು:
* ಒಂದು ಅಥವಾ ಎರಡೂ ಸ್ತನಗಳಲ್ಲಿ ಊತ ಅಥವಾ ಕೆಂಪಾಗುವಿಕೆಯಂತಹ ಸ್ಪಷ್ಟ ವ್ಯತ್ಯಾಸಗಳು
* ಸ್ತನಗಳ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ
* ಒಂದು ಅಥವಾ ಎರಡೂ ಮೊಲೆತೊಟ್ಟುಗಳ ಹಿಂತೆಗೆದುಕೊಳ್ಳುವಿಕೆ
* ಎದೆ ಹಾಲು ಹೊರತುಪಡಿಸಿ ನಿಪ್ಪಲ್ ಡಿಸ್ಚಾರ್ಜ್
* ಸ್ತನಗಳಲ್ಲಿ / ಸುತ್ತಲೂ ಅಸಾಮಾನ್ಯ ನೋವು
* ಸ್ತನದ ಮೇಲೆ ಅಥವಾ ಒಳಗೆ ಗಂಟುಗಳು ಅಥವಾ ಊತಗಳು

ಚಿಕಿತ್ಸೆ ಹೇಗೆ..?
* ಸ್ತನ ಗೆಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ
* ಸ್ತನ ಮತ್ತು ಸುತ್ತಮುತ್ತಲಿನ ಅಂಗಾಂಶಗಳಲ್ಲಿ ಮರುಕಳಿಸುವ ಅಪಾಯವನ್ನು ಕಡಿಮೆ ಮಾಡಲು ವಿಕಿರಣ ಚಿಕಿತ್ಸೆ
* ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಮತ್ತು ಹಾರ್ಮೋನ್ ಚಿಕಿತ್ಸೆಗಳು, ಕೀಮೋಥೆರಪಿ ಅಥವಾ ಉದ್ದೇಶಿತ ಜೈವಿಕ ಚಿಕಿತ್ಸೆಗಳು ಸೇರಿದಂತೆ ಹರಡುವಿಕೆಯನ್ನು ತಡೆಯಲು ಔಷಧಿಗಳು.

ಒಟ್ಟಿನಲ್ಲಿ ಸ್ತನದ ಕ್ಯಾನ್ಸರ್ ಇಷ್ಟು ಗಂಭೀರ ಸಮಸ್ಯೆಯಾಗಿರುವುದರಿಂದ ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿಯ ಮಾಸವೆಂದು ಆಚರಿಸಲಾಗುತ್ತಿದೆ.

Web Stories

Share This Article