ಕಲಬುರಗಿ: ಮತ್ತೊಮ್ಮೆ ಆಪರೇಷನ್ ಕಮಲ ಮಾಡೋ ಚಿಂತನೆಯಲ್ಲಿ ಬಿಜೆಪಿಯವರು ಇದ್ದಾರೆ. ಆದರೆ ಕರ್ನಾಟಕದಲ್ಲಿ ಅವರ ಆಟ ನಡೆಯಲ್ಲ. 6 ತಿಂಗಳಲ್ಲಿ ಬಿಜೆಪಿಯವರು ಸರ್ಕಾರ ಮಾಡಿ ತೋರಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸವಾಲು ಹಾಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಆರು ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಕಾಂಗ್ರೆಸ್ ಪಕ್ಷದ ಹುಳುಕನ್ನು ಹುಡುಕಲು ಬಹಳಷ್ಟು ಶ್ರಮ ಹಾಕುತ್ತಿದ್ದಾರೆ. ಆದರೆ ಅದರ ಅರ್ಧ ಶ್ರಮವನ್ನು ಪಕ್ಷದ ಅಭಿವೃದ್ದಿಗೆ ಹಾಕಲಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನಾನು ಸಹಕಾರ ಕ್ಷೇತ್ರದಲ್ಲಿ ಬೆಳೆಯಲು ನನ್ನ ಗುರುಗಳಾದ ಡಿಕೆಶಿ ಕಾರಣ: ಎಸ್.ಟಿ.ಸೋಮಶೇಖರ್
ಸರ್ಕಾರ ಸುಭದ್ರವಾಗಿದ್ದು, ಯಾವುದೇ ಗೊಂದಲಗಳಿಲ್ಲ. ಆರು ತಿಂಗಳಲ್ಲಿ ಬಿಜೆಪಿಯವರು ಸರ್ಕಾರ ಮಾಡಿ ತೋರಿಸಲಿ. ರಾಜಕೀಯ ಮಾಡಲು ಅವರಿಗಷ್ಟೇ ಬರುತ್ತಾ? ನಮಗೂ ಬರುತ್ತದೆ. ಆರು ತಿಂಗಳು ಕಾದು ನೋಡಿ, ಎಷ್ಟು ಜನ ಬಿಜೆಪಿಯಲ್ಲಿ ಇರುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಆಪರೇಷನ್ ಹಸ್ತದ ಸುಳಿವು ನೀಡಿದರು.
ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವರ ಹೆಸರಲ್ಲಿ ಸುಳ್ಳು ಹೇಳಿದ್ದಾರೆ. ದಾಖಲೆ ಇಡಿ ನ್ಯಾಯಾಂಗಕ್ಕೆ ಹೋಗೋಣ. ಯಾವ ಮಠಕ್ಕೂ, ದೇವಸ್ಥಾನಕ್ಕೂ ಹೋಗುವುದು ಬೇಡ. ದಾಖಲೆ ಇಟ್ಟು ನ್ಯಾಯಾಂಗಕ್ಕೆ ಹೋಗೋಣ ಎಂದರು. ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಅಸ್ಥಿರತೆ ಕಾಡುತ್ತಿದೆ: ಯಡಿಯೂರಪ್ಪ
ಉಪೇಂದ್ರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಉಪೇಂದ್ರ ಹೇಳಿದ್ದು ತಪ್ಪು. ಅವರು ಪ್ರಬುದ್ಧ ರಾಜಕೀಯ ಮಾಡಲು ಬಂದವರು. ಇಂತಹ ಅಪ್ರಬುದ್ಧ ಹೇಳಿಕೆ ನೀಡಿರುವುದರಿಂದ ಅನೇಕರಿಗೆ ನೋವಾಗಿದೆ. ಕಾನೂನು ಏನು ಕ್ರಮ ಕೈಗೊಳ್ಳುತ್ತೆ ಕೈಗೊಳ್ಳಲಿ ಎಂದು ತಿಳಿಸಿದರು.
Web Stories