ಲಕ್ನೋ: ಉಚಿತವಾಗಿ ಚಿಕನ್ ಕೊಟ್ಟಿಲ್ಲವೆಂದು ಸಿಟ್ಟಿಗೆದ್ದ ಗುಂಪೊಂದು ಯುವಕನಿಗೆ ಮನಬಂದಂತೆ ಥಳಿಸಿದ ಘಟನೆ ಉತ್ತರಪ್ರದೇಶದ (Uttarpradesh) ಲಲಿತ್‍ಪುರ ಜಿಲ್ಲೆಯಲ್ಲಿ ನಡೆದಿದೆ.
ಯುವಕನಿಗೆ ಥಳಿಸುತ್ತಿರುವ ವೀಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಥಳಿತಕ್ಕೊಳಗಾದ ಯುವಕನನ್ನು ಸುಜನ್ ಅಹಿರ್‍ವಾರ್ ಎಂದು ಗುರುತಿಸಲಾಗಿದೆ.
ಸುಜನ್ ಗ್ರಾಮದಿಂದ ಗ್ರಾಮಕ್ಕೆ ತನ್ನ ಬೈಕಿನಲ್ಲಿ ತೆರಳಿ ಮನೆ ಮನೆಗೆ ಚಿಕನ್ ಮಾರಾಟ (Chicken Sale) ಮಾಡುತ್ತಿದ್ದನು. ಹಿಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿದ್ದ ಗುಂಪೊಂದು ಸುಜನ್‍ನ ಅಡ್ಡ ಹಾಕಿ ಉಚಿತವಾಗಿ ಚಿಕನ್ ಕೊಡುವಂತೆ ಕೇಳಿಕೊಂಡಿದೆ. ಆದರೆ ಇದಕ್ಕೆ ಸುಜನ್ ಒಪ್ಪಿಕೊಂಡಿಲ್ಲ. ಇದರಿಂದ ಸಿಟ್ಟಿಗೆದ್ದ ಗುಂಪು ಸುಜನ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದೆ. ಅಲ್ಲದೆ ಚಪ್ಪಲಿಯಲ್ಲಿಯೂ ಏಟು ನೀಡಿ ಅಮಾನವೀಯವಾಗಿ ವರ್ತಿಸಿದ್ದಾರೆ. ಇದನ್ನೂ ಓದಿ: BMTC ಬಸ್‍ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ- ಫ್ರೀ ಟಿಕೆಟ್ ನೀಡಲು ನಿರಾಕರಿಸಿ ನಿಂದನೆ
ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.
Web Stories