ಭಾರತೀಯ ಚಿತ್ರರಂಗದ ಸ್ಟಾರ್ ನಟಿ ಶ್ರೀದೇವಿ (Sridevi) ಅವರ 60ನೇ ವರ್ಷದ ಹುಟ್ಟುಹಬ್ಬವಾಗಿದ್ದು, ಎವರ್‌ಗ್ರೀನ್ ನಾಯಕಿಗೆ ಇದೀಗ ಗೂಗಲ್ (Google) ಡೂಡಲ್ ವಿಶೇಷ ಗೌರವ ಸಲ್ಲಿಸಿದೆ. ಅಕಾಲಿಕ ಮರಣ ಹೊಂದಿರೋ ಹಿರಿಯ ನಟಿಯ ಬರ್ತ್‌ಡೇಗೆ ವಿಶೇಷವಾಗಿ ಗೂಗಲ್ ಶುಭ ಕೋರಿದ್ದಾರೆ.
ಬಾಲಿವುಡ್‌ನ (Bollywood) ದಿವಂಗತ ನಟಿ ಶ್ರೀದೇವಿ ಅವರ 60ನೇ ಜನ್ಮದಿನಕ್ಕೆ (Birthday) ಗೂಗಲ್ ವಿಶೇಷ ಡೂಡಲ್ ಗೌರವ ಸಲ್ಲಿಸಿದೆ. 1963ರಲ್ಲಿ ತಮಿಳುನಾಡಿನಲ್ಲಿ ಜನಿಸಿದ ಶ್ರೀದೇವಿ ತಮ್ಮ ವೃತ್ತಿಜೀವನದ ನಾಲ್ಕು ದಶಕಗಳ ಅವಧಿಯಲ್ಲಿ ಸುಮಾರು ಮುನ್ನೂರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಭಾರಿ ಕೊಡುಗೆ ಸಲ್ಲಿಸಿದ್ದಾರೆ. ನಿರ್ಮಾಪಕ ಬೋನಿ ಕಪೂರ್ (Bony Kapoor) ಅವರನ್ನು ವರಿಸಿದ್ದ ಈ ಚೆಲುವೆಗೆ ಜಾನ್ವಿ ಮತ್ತು ಖುಷಿ ಕಪೂರ್ ಎಂಬ ಮುದ್ದು ಹೆಣ್ಣುಮಕ್ಕಳಿದ್ದಾರೆ. ಇದನ್ನೂ ಓದಿ:2 ವರ್ಷಗಳ ನಂತರ ಕಿರುತೆರೆಗೆ ಮರಳಿದ ಶಾಂಭವಿ ವೆಂಕಟೇಶ್
ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಸ್ಟಾರ್ ನಟರಿಗೆ ನಾಯಕಿಯಾಗಿ ಗೆದ್ದು ಬೀಗಿದ್ದಾರೆ. ಇಂದಿಗೂ ಅವರ ಹಿಂದಿನ ಸಿನಿಮಾಗಳನ್ನ ನೋಡಿ ಖುಷಿ ಪಡುವ ಅಭಿಮಾನಿಗಳಿದ್ದಾರೆ. ಶ್ರೀದೇವಿ ಅವರ ನಟನೆಯನ್ನ ಸ್ಪೂರ್ತಿಯಾಗಿಟ್ಟುಕೊಂಡು ಹಲವು ನಟಿಯರು ಅವರ ಹಾದಿಯಲ್ಲಿ ಹೆಜ್ಜೆ ಇಡ್ತಿದ್ದಾರೆ. ಪುತ್ರಿಯರಾದ ಜಾನ್ವಿ- ಖುಷಿ ಕಪೂರ್ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಳ್ತಿದ್ದಾರೆ.
ಕನ್ನಡದಲ್ಲಿ ಭಕ್ತ ಕುಂಬಾರ, ಹೆಣ್ಣು ಸಂಸಾರದ ಕಣ್ಣು, ಬಾಲ ಭಾರತ, ಯಶೋದ ಕೃಷ್ಣ, ಪ್ರಿಯಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಒಟ್ಟು ಕನ್ನಡದ 5 ಸಿನಿಮಾದಲ್ಲಿ ಶ್ರೀದೇವಿ ನಟಿಸಿದ್ದರು.