ಎರಡನೇ ಬಾರಿ ವಿಶ್ವಾಸ ಪರೀಕ್ಷೆಯಲ್ಲಿ ಗೆದ್ದ ಮೋದಿ – ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲು

Public TV
2 Min Read
modi lok sabha

– ಬೆಂಗಳೂರಲ್ಲಿ ಯುಪಿಎಗೆ ಅಂತ್ಯಕ್ರಿಯೆ ಮಾಡಲಾಗಿದೆ ಎಂದ ಪ್ರಧಾನಿ

ನವದೆಹಲಿ: ಲೋಕಸಭೆಯಲ್ಲಿ (Lok Sabha) ನಿರೀಕ್ಷೆಯಂತೆ ಎಲ್ಲವೂ ನಡೆದಿದೆ. ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿಲುವಳಿಗೆ ಸೋಲಾಗಿದೆ. ಎರಡನೇ ಬಾರಿ ಪ್ರಧಾನಿ ಮೋದಿ (Narendra Modi) ನೇತೃತ್ವದ ಸರ್ಕಾರ ವಿಶ್ವಾಸ ಪರೀಕ್ಷೆಯಲ್ಲಿ ಗೆದ್ದು ಬೀಗಿದೆ.

ವಿಪಕ್ಷಗಳ ಗೈರಿನಲ್ಲಿ ಧ್ವನಿಮತದ ಮೂಲಕ ಅವಿಶ್ವಾಸ ನಿಲುವಳಿಯನ್ನು ಎನ್‌ಡಿಎ ಸರ್ಕಾರ ಸೋಲಿಸಿದೆ. ಈ ಸೋಲನ್ನು ವಿಪಕ್ಷಗಳ ಕೂಟ ಕೂಡ ನಿರೀಕ್ಷೆ ಮಾಡಿತ್ತು. ಏಕೆಂದರೆ, ವಿಪಕ್ಷಗಳ ಕೂಟದ ಬಳಿ ಅಗತ್ಯ ಸಂಖ್ಯಾ ಬಲವೇ ಇರಲಿಲ್ಲ. ಮೋದಿಯನ್ನು ಸಂಸತ್‌ಗೆ ಕರೆಯಿಸಿ ಮಣಿಪುರ ಹಿಂಸಾಚಾರದ ಬಗ್ಗೆ ಹೇಳಿಕೆ ಕೊಡಿಸಬೇಕೆಂಬ ಏಕೈಕ ಉದ್ದೇಶದಿಂದ ಐಎನ್‌ಡಿಐಎ ಕೂಟ ಈ ನಿಲುವಳಿಯನ್ನು ಮಂಡಿಸಿತ್ತು. ಇದನ್ನೂ ಓದಿ: ಮಣಿಪುರ ಶೀಘ್ರದಲ್ಲೇ ಶಾಂತಿಯ ಬೆಳಕನ್ನು ಕಾಣಲಿದೆ: ಮೋದಿ ಭರವಸೆ

narendra modi lok sabha

ಒಂದರ್ಥದಲ್ಲಿ ವಿಪಕ್ಷ ಕೂಟ ತಮ್ಮ ಉದ್ದೇಶ ಸಾಧನೆಯಲ್ಲಿ ಯಶಸ್ಸು ಸಾಧಿಸಿತು. ಕಾರಣ ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು, ಮಣಿಪುರದ ಹಿಂಸಾಚಾರದ ಬಗ್ಗೆ ಸುದೀರ್ಘ ಹೇಳಿಕೆ ಕೊಟ್ಟರು.

ಅವಿಶ್ವಾಸ ನಿರ್ಣಯದ ಮೇಲೆ ಕಳೆದ ಮೂರು ದಿನಗಳಿಂದ ನಡೆದ ಚರ್ಚೆಯಲ್ಲಿ ಕೇಂದ್ರದ ವಿರುದ್ಧ ನಾನಾ ಆರೋಪ ಮಾಡಿದ್ದ ವಿಪಕ್ಷಗಳಿಗೆ ಲಘು ಧಾಟಿಯಲ್ಲಿಯೇ ಪ್ರಧಾನಿ ತಿರುಗೇಟು ನೀಡಿದರು. ಸುದೀರ್ಘ 2 ಗಂಟೆ 13 ನಿಮಿಷ ಪ್ರತ್ಯುತ್ತರ ನೀಡಿದ ಪ್ರಧಾನಿ ಮೋದಿ ವಿಪಕ್ಷಗಳ ಕೂಟದ ಬಂಡವಾಳವನ್ನು ಇಂಚಿAಚಾಗಿ ಬಯಲು ಮಾಡಿದರು. ಮೋದಿಯ ಪ್ರತಿ ಮಾತನ್ನು ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಬೆಂಬಲಿಸಿದರೆ, ವಿಪಕ್ಷ ಸದಸ್ಯರು ಮಾತು ಮಾತಿಗೂ ಅಡ್ಡಿಪಡಿಸಲು ನೋಡಿದರು. ಮಣಿಪುರ.. ಮಣಿಪುರ ಎಂದು ಘೋಷಣೆ ಕೂಗುತ್ತಿದ್ದರು. ಇದಕ್ಕೆ ತಲೆಕೆಡಿಸಿಕೊಳ್ಳದ ಮೋದಿ ವ್ಯಂಗ್ಯಾಸ್ತçಗಳನ್ನು ಪ್ರಯೋಗಿಸುತ್ತಾ ಸಾಗಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ಮೋದಿ ಭಾಷಣದ ಮಧ್ಯೆ ಸಭಾತ್ಯಾಗ ಮಾಡಿದ ವಿಪಕ್ಷಗಳ ಸಂಸದರು

Modi speech MPs

ಅವಿಶ್ವಾಸ ಪರೀಕ್ಷೆ ಇಟ್ಟ ವಿಪಕ್ಷಗಳಿಗೆ ಧನ್ಯವಾದ. ದೇವರೇ ಅವಿಶ್ವಾಸ ನಿಲುವಳಿ ಮಂಡಿಸಲು ವಿಪಕ್ಷಗಳಿಗೆ ಸೂಚಿಸಿದ್ದಾರೆ. 2018ರಲ್ಲಿ ಏನಾಯ್ತು ಅಂತಾ ಗೊತ್ತಲ್ಲ. ಈಗಲೂ ಅದೇ ಆಗಲಿದೆ. 2024ರಲ್ಲಿ ಎನ್‌ಡಿಎ ಎಲ್ಲಾ ದಾಖಲೆ ಉಡೀಸ್ ಮಾಡಲಿದೆ. ಇದು ನಮಗೆ ಪರೀಕ್ಷೆಯಲ್ಲ. ಇದು ನಮಗೆ ಶುಭಸೂಚಕ ಎಂದು ಮೋದಿ ವ್ಯಾಖ್ಯಾನಿಸಿದರು.

ವಿಪಕ್ಷಗಳಿಗೆ ಅಧಿಕಾರ ದಾಹ ಹೆಚ್ಚಿದೆ. ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವ ಪಕ್ಷಗಳೆಲ್ಲಾ ಒಂದಾಗಿವೆ. ಬೆಂಗಳೂರಲ್ಲಿ ಯುಪಿಎಗೆ ಅಂತ್ಯಕ್ರಿಯೆ ಮಾಡಲಾಗಿದೆ. ನಮ್ಮ ಎನ್‌ಡಿಎ ಅಕ್ಷರ ಕದ್ದು ಆ ಕಡೆ ಈ ಕಡೆ ಐಐ ಸೇರಿಸಿಕೊಂಡಿದ್ದಾರೆ. ಇದು ಘಮಾಂಡಿಯಾ ಕೂಟ ಎಂದು ಲೇವಡಿ ಮಾಡಿದರು. ಮೋದಿ ಮಾತು ಕೇಳಲಾಗದೇ ವಿಪಕ್ಷಗಳು ವಾಕೌಟ್ ಮಾಡಿದವು. ಇದನ್ನೂ ಓದಿ: ವಿಪಕ್ಷಗಳ ನೋ ಬಾಲ್‌ಗೆ ನಮ್ಮವರಿಂದ ಸಿಕ್ಸರ್‌, ಬೌಂಡರಿ, ಕೊನೆಗೆ ಸೆಂಚುರಿ: ನರೇಂದ್ರ ಮೋದಿ

Web Stories

Share This Article