ಮೂರು ಐಷಾರಾಮಿ ಕಾರುಗಳನ್ನು ಕಳೆದುಕೊಂಡು ಕಣ್ಣೀರಿಟ್ಟ ಸನ್ನಿ ಲಿಯೋನ್‌

Public TV
2 Min Read
sunny leone 3

ಬಾಲಿವುಡ್ (Bollywood) ನಟಿ ಸನ್ನಿ ಲಿಯೋನ್ (Sunny Leone) ಅವರು ಹಿಂದಿ- ಸೌತ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಇದೀಗ ತಾವು ಮೂರು ಕಾರು (Car) ಕಳೆದುಕೊಂಡಿರುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟಕ್ಕೂ ಮೂರು ಕಾರು ಕಳೆದುಕೊಳ್ಳಲು ಕಾರಣವೇನು? ಎಂಬುದನ್ನ ನಟಿ ಬಿಚ್ಚಿಟ್ಟಿದ್ದಾರೆ.

sunny leone

ಆಂಗ್ಲ ಮಾಧ್ಯಮವೊಂದಕ್ಕೆ ತಾವು ಮೂರು ಕಾರು ಕಳೆದುಕೊಂಡ ವ್ಯಥೆಯನ್ನು ಬಿಚ್ಚಿಟ್ಟಿದ್ದಾರೆ. ಮೊದಲ ಬಾರಿಗೆ ಸನ್ನಿ ಭಾರತಕ್ಕೆ ಬಂದಾಗ ಇಲ್ಲಿನ ಮಳೆಗಾಲದಿಂದ ಅನುಭವಿಸಿದ ಅನುಭವವನ್ನು ಶೇರ್ ಮಾಡಿದ್ದಾರೆ. ಆಕಾಶದಿಂದ ಇಷ್ಟು ಮಳೆ ಬರುತ್ತೆ ಎನ್ನುವ ಅಂದಾಜು ಕೂಡ ನನಗಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿ

sunny leone

ನಾನು ಮೊದಲು ಕೆಲಸಕ್ಕಾಗಿ ಭಾರತಕ್ಕೆ ಬಂದಾಗ ನಾನು ಮುಂಬೈನಲ್ಲಿರುತ್ತಿದ್ದೆ, ಸಮುದ್ರದ ಸಮೀಪದಲ್ಲಿ ಮನೆ ಮಾಡಿದ್ದೆ. ಆಗ ಮನ್ಸೂನ್ ಸಂದರ್ಭ ಇಡೀ ವರ್ಷದಲ್ಲಿಯೇ ನನ್ನ ಫೇವರಿಟ್ ಸಮಯ. ಆಗ ಮಳೆಯಿಂದ ಮೂರು ಕಾರುಗಳು ಕೆಟ್ಟು ಹೋದಾಗ ಮಳೆಯ ಕೆಟ್ಟ ಪರಿಣಾಮದ ಬಗ್ಗೆ ನನಗೆ ಗೊತ್ತಾಯಿತು. ಮಳೆಗೆ ನನ್ನ ದುಬಾರಿ ಮೂರು ಕಾರುಗಳನ್ನು ಕಳೆದುಕೊಂಡೆ. ಎರಡನ್ನೂ ಒಂದೇ ದಿನ ಕಳೆದುಕೊಂಡೆ. ಬಳಿಕ ಮತ್ತೊಂದು. ಅದು ನಿಜಕ್ಕೂ ಹಾರಿಬಲ್ ಆಗಿತ್ತು ಎಂದು ತಮ್ಮ ಬೇಸರವನ್ನ ನಟಿ ಹೊರಹಾಕಿದ್ದಾರೆ.

sunny leone 4

ಭಾರತದಲ್ಲಿ ಆಮದು ಮಾಡಿದ ಕಾರು ಖರೀದಿಸಿದರೆ ನೀವು ದೊಡ್ಡ ಮೊತ್ತವನ್ನು ತೆರಿಗೆಯಾಗಿ ಪಾವತಿಸುತ್ತೀರಿ. ಒಂದು ಎಂಟು ಸೀಟುಗಳ ಮರ್ಸಿಡಿಸ್ ಟ್ರಕ್ ಕಳೆದುಕೊಂಡೆ. ನನಗೆ ಬೇಸರವಾಯಿತು. ಆದರೂ ಪರವಾಗಿಲ್ಲ. ಕೆಲವೊಮ್ಮೆ ಹೀಗಾಗುತ್ತದೆ ಎಂದಿದ್ದಾರೆ. ವಸ್ತುಗಳನ್ನು ನಾವು ಬದಲಾಯಿಸಬಹುದು. ಜೀವಗಳನ್ನು ಬದಲಾಯಿಸಲಾಗದು. ಯಾರಿಗೂ ಯಾವುದೇ ಹಾನಿಯಾಗಲಿಲ್ಲ. ಈಗ ನಾನು ಭಾರತದಲ್ಲಿ ನಿರ್ಮಿಸಿದ ಗಾಡಿ ಓಡಿಸುತ್ತೇನೆ ಎಂದಿದ್ದಾರೆ. ಇದನ್ನು ಮಳೆಗಾಲಕ್ಕಾಗಿಯೇ ನಿರ್ಮಿಸಲಾಗಿದೆ. ಅಂದು ನಾನು ರಾಂಗ್ ಕಾರು ಖರೀದಿಸಿದೆ ಎಂದು ನಟಿ ಮಾತನಾಡಿದ್ದಾರೆ.

ಸನ್ನಿ ಲಿಯೋನ್ ಅವರು ಬಹುಭಾಷಾ ನಟಿಯಾಗಿ ಮಿಂಚಿದ್ದಾರೆ. ಕನ್ನಡದಲ್ಲೂ ಸನ್ನಿ ಸೊಂಟ ಬಳುಕಿಸುವ ಮೂಲಕ ಗಂಡ್ ಹೈಕ್ಳ ದಿಲ್ ಕದ್ದಿದ್ದಾರೆ. ಕಳೆದ ವರ್ಷ ಅದಿತಿ ಪ್ರಭುದೇವ ನಟನೆಯ ‘ಚಾಂಪಿಯನ್’ ಚಿತ್ರದಲ್ಲಿ ಡಿಂಗರ್ ಬಿಲ್ಲಿ ಸಾಂಗ್‌ಗೆ ಹೆಜ್ಜೆ ಹಾಕಿದ್ದರು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article