ವಿಕ್ಕಿ ಜೈನ್‌ ಜೊತೆ ಮತ್ತೆ ಮದುವೆಯಾದ ಅಂಕಿತಾ ಲೋಖಂಡೆ

Public TV
1 Min Read
ankita lokhande

ಹಿಂದಿ ಕಿರುತೆರೆ ನಟಿ ಅಂಕಿತಾ ಲೋಖಂಡೆ (Ankita Lokhande) ಅವರು ವಿಕ್ಕಿ ಜೈನ್ (Vicky Jain) ಜೊತೆ ಮತ್ತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ನಟಿ ಮತ್ತೆ ಮದುವೆಯಾಗಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ನಟಿ ಶೇರ್ ಮಾಡಿದ್ದಾರೆ.

ankita lokhande

ಸುಶಾಂತ್ ಸಿಂಗ್ (Sushant Singh) ಜೊತೆ ಅಂಕಿತಾ ಅವರು ಡೇಟ್ ಮಾಡುತ್ತಿದ್ದರು. ಕೆಲವು ಮನಸ್ತಾಪಗಳಿಂದ ಈ ಜೋಡಿ ಬ್ರೇಕಪ್ ಮಾಡಿಕೊಂಡಿತ್ತು. ಬಳಿಕ ವಿಕ್ಕಿ ಜೈನ್ ಜೊತೆ ಅಂಕಿತಾ 2021ರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಈಗ ಮತ್ತೆ ಈ ಜೋಡಿ ಮದುವೆಯಾಗುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ:ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿದ ಸ್ಪಂದನಾ ಅಂತ್ಯಸಂಸ್ಕಾರ

ankita lokhande 1

ಕ್ರಿಶ್ಚಿಯನ್ ಪದ್ಧತಿಯಂತೆ ವಿಕ್ಕಿ- ಅಂಕಿತಾ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ನಟಿ ಪಿಂಕ್ ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ವಿಕ್ಕಿ ಅವರು ಬಿಳಿ ಬಣ್ಣದ ಸೂಟ್‌ನಲ್ಲಿ ಹೈಲೈಟ್ ಆಗಿದ್ದಾರೆ. ರಿಂಗ್ ಬದಲಿಸಿ, ಪರಸ್ಪರ ಕಿಸ್ ಮಾಡಿರೋ ವೀಡಿಯೋ ನಟಿ ಶೇರ್ ಮಾಡಿದ್ದಾರೆ. ಒಟ್ನಲ್ಲಿ ಈ ಜೋಡಿ ಖುಷಿ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:ಮಾಲಾಶ್ರೀ ಕೋರಿಕೆಯನ್ನ ಈಡೇರಿಸಿದ ದೈವ- ಕೊರಗಜ್ಜನ ಆದಿಸ್ಥಳಕ್ಕೆ ನಟಿ ಭೇಟಿ

ಹಿಂದಿ ಕಿರುತೆರೆಯಲ್ಲಿ ‘ಪವಿತ್ರಾ ರಿಶ್ತಾ’ (Pavithra Rishta) ಎಂಬ ಸೀರಿಯಲ್ ಮೂಲಕ ಅಂಕಿತಾ ಮನೆ ಮಾತಾಗಿದ್ದರು. ಬಳಿಕ ಕೆಲವು ರಿಯಾಲಿಟಿ ಶೋನಲ್ಲಿ ಮಿಂಚಿದ್ದರು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article