ಸಿನಿಮಾ ಕಥೆಗೂ ಮೀರಿದ ಸುಖಿ ದಾಂಪತ್ಯ ಅವರದ್ದು – ಸ್ಪಂದನಾ ನೆನೆದು ಕಂಬನಿ ಮಿಡಿದ ಗಣ್ಯರು

Public TV
2 Min Read
1 3

ನಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ನಿಧನದ ಸುದ್ದಿ ಎಲ್ಲರಿಗೂ ತೀವ್ರ ಅಘಾತವನ್ನುಂಟುಮಾಡಿದೆ. ಸ್ಪಂದನಾ ಇನ್ನಿಲ್ಲ ಅನ್ನೋ ವಿಚಾರವನ್ನೇ ಅರಗಿಸಿಕೊಳ್ಳೋದಕ್ಕೆ ಸಾಧ್ಯವಾಗುತ್ತಿಲ್ಲ. ಕುಟುಂಬದವರ ಆಕ್ರಂದನವಂತು ಮುಗಿಲುಮುಟ್ಟಿದೆ. ನಟ-ನಟಿಯರು, ಆಪ್ತರು, ಬಂಧುಗಳು ಸೇರಿದಂತೆ ಗಣ್ಯಮಾನ್ಯರು ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ ಗಣ್ಯರು ಸ್ಪಂದನಾ ಹಾಗೂ ವಿಜಯ್ ನಡುವಿನ ಒಡನಾಟ, ಸ್ನೇಹ ಬಾಂಧವ್ಯದ ಕುರಿತು ಭಾವುಕ ಮಾತುಗಳನ್ನಾಡಿದ್ದಾರೆ.

2 2

ಸಚಿವ ಪ್ರಿಯಾಂಕ್ ಖರ್ಗೆ:
ವಿಜಯ ರಾಘವೇಂದ್ರ ನನಗೆ ಕ್ಲಾಸ್‌ಮೇಟ್‌. ನಾವು ಆಗಾಗ್ಗೆ ಭೇಟಿ ಆಗ್ತಾ ಇರ್ತೀವಿ. ಎರಡು ವಾರಗಳ ಹಿಂದೆಯಷ್ಟೇ ವಿಜಯ್ ನನಗೆ ಫೋನ್ ಮಾಡಿದ್ರು. ನಮ್ಮ ಶಾಲೆಯ ಸ್ನೇಹಿತರೆಲ್ಲಾ ಕುಟುಂಬ ಸಮೇತರಾಗಿ ಒಂದು ದಿನ ಊಟಕ್ಕೆ ಸೇರೋಣ ಅಂತಾ ಹೇಳಿದ್ರು. ಆಗಸ್ಟ್ 15ರ ನಂತರ ಸಿಗೋಣ ಅಂತಾ ಹೇಳಿದ್ರು. ಆದ್ರೆ ನಾನು ಇತ್ತೀಚೆಗೆ ಬ್ಯುಸಿಯಾಗಿದ್ದರಿಂದ ಭೇಟಿ ಮಾಡಲು ಆಗಲಿಲ್ಲ. ಈ ಘಟನೆ ಬಹಳ ಆಘಾತವನ್ನುಂಟುಮಾಡಿದೆ. ಸ್ಪಂದನಾ-ವಿಜಯ್ ಬಹಳಷ್ಟು ಹೃದಯಗಳ ಮನಗೆದ್ದಿದ್ದಾರೆ. ಏಕೆಂದರೆ ಅವರು ಎಲ್ಲರ ಜೊತೆ ಮಾತನಾಡುವವರು, ಬೇರೆಯವರ ಯಶಸ್ಸಿನಲ್ಲಿ ಸಂತೋಷ ಕಾಣುವವರಾಗಿದ್ದರು.

Priyank Kharge

ನಿರ್ದೇಶಕ ನಂಜುಂಡೇಗೌಡ:
`ಕಾಸಿನ ಸರ’ ಸಿನಿಮಾ ಮಾಡುವಾಗ ವಿಜಯ ರಾಘವೇಂದ್ರ ಜೊತೆ ಸ್ಪಂದನಾ ಜೊತೆಯಾಗಿ ಇರ್ತಿದ್ರು. ಎಲ್ಲಾ ಸಮಯದಲ್ಲೂ ಪತಿ ಜೊತೆ ಇರ್ತಿದ್ರು. ಅವರ ಜೋಡಿಯ ಹೊಂದಾಣಿಕೆ ಎಷ್ಟಿತ್ತು ಅಂದ್ರೆ ಸಿನಿಮಾ ಕಥೆಗೂ ಮೀರಿದ ಸುಖಿ ದಾಂಪತ್ಯ ಅವರದ್ದಾಗಿತ್ತು. ವಿಜಯ್ ರಾಘವೇಂದ್ರಗೆ ಎರಡು ಸಿನಿಮಾ ಮಾಡಿದ್ದೇನೆ. ಮದುವೆಗೆ ಮುನ್ನ `ನಾನು ನೀನು ಜೋಡಿ’ ಸಿನಿಮಾ ಮಾಡಿದ್ದೆ, ಆಗ ಅವರಿಗೆ ಸ್ಪಂದನಾ ಜೊತೆಗೆ ಎಂಗೇಜ್ಮೆಂಟ್ ಆಗಿತ್ತು. ಆಗಿನಿಂದಲೇ ಸ್ಪಂದನಾ ಅವರೂ ನನಗೆ ಪರಿಚಯ. ತುಂಬಾ ಸೌಮ್ಯ ಸ್ವಭಾವದ ಹುಡುಗಿ ಆಕೆ. ರಾಘು ಮುಂದಿನ ಜೀವನ ಹೇಗಿರುತ್ತೋ? ನೆನಪಿಸಿಕೊಂಡ್ರೇನೆ ಬೇಸರವಾಗುತ್ತೆ.

ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್:
ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಫಿಲ್ಮ್ ಚೇಂಬರ್‌ಗೆ ಬರ್ತಿದ್ರು. ಎಷ್ಟು ಚೆನ್ನಾಗಿತ್ತು ಈ ಜೋಡಿ ಅಂದ್ರೆ, ನಾನೇ ಎಷ್ಟೋ ಸಲ ನಿಮಗೆ ದೃಷ್ಟಿ ಆಗುತ್ತೆ, ದೃಷ್ಟಿ ತೆಗೆಸಿಕೊಳ್ಳಿ ಅಂತಾ ಹೇಳಿದ್ದೆ. ಯಾರಿಗೂ ಬೇಸರವನ್ನುಂಟುಮಾಡದ ಕುಟುಂಬ ಅವರದ್ದಾಗಿತ್ತು. ಸ್ಪಂದನಾ ಸಾವು ಬಹಳ ನೋವು ತಂದಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article