ಕಣ್ಣೀರ ಕಡಲಲ್ಲಿ ವಿಜಯ ರಾಘವೇಂದ್ರ- ಅಣ್ಣನನ್ನು ತಬ್ಬಿ ಸಂತೈಸಿದ ಶ್ರೀಮುರಳಿ

Public TV
1 Min Read
vijay raghavendra 4 1

ತ್ನಿ ಸ್ಪಂದನಾ (Spandana) ನಿಧನ ವಿಜಯ ರಾಘವೇಂದ್ರಗೆ (Vijay Raghavendra) ಬರ ಸಿಡಿಲು ಬಡಿದಂತೆ ಆಗಿದೆ. ಅಂತಿಮ ವಿದಾಯಕ್ಕೆ ಕುಟುಂಬ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಕಣ್ಣೀರ ಕಡಲಲ್ಲಿ ಇರೋ ಅಣ್ಣ ವಿಜಯ್‌ಗೆ ಶ್ರೀಮುರಳಿ (Srimurali) ಸಂತೈಸುತ್ತಿದ್ದಾರೆ.

VIJAY RAGHAVENDRA 4

ಡಾ.ರಾಜ್‌ಕುಮಾರ್ ಕುಟುಂಬಕ್ಕೆ ಒಂದರ ಹಿಂದೆ ಒಂದು ಆಘಾತ ಎದುರಾಗಿದೆ. ಅಪ್ಪು ನಿಧನದ ನಂತರ ಸ್ಪಂದನಾ ಸಾವು ಅರಗಿಸಿಕೊಳ್ಳದ ಆಘಾತವಾಗಿದೆ. ಜೋಡಿ ಹಕ್ಕಿಯಂತೆ ಇದ್ದ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಜೋಡಿಯೇ ಮೇಲೆ ಅದು ಯಾರ ಕೆಟ್ಟ ಕಣ್ಣು ಬಿತ್ತೋ ಏನೋ ಎಂದು ವಿಜಯ ಆಪ್ತರು ಭಾವುಕರಾಗಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಅಣ್ಣನ ಜೊತೆಯಾಗಿ ಶ್ರೀಮುರಳಿ ನಿಂತಿದ್ದಾರೆ. ಇದನ್ನೂ ಓದಿ:ಆಗಿದ್ದು ಆಯ್ತು, ಮರೆತು ಬಿಡಪ್ಪಾ ಅಂತಾ ರಾಘುಗೆ ಹೇಳೋಕೆ ಆಗುತ್ತಾ- ರಾಘಣ್ಣ

vijay raghavendra 5

ಮಗ ಶೌರ್ಯನಿಗೆ ತಂದೆ ಮತ್ತು ಚಿಕ್ಕಪ್ಪ ಶ್ರೀಮುರಳಿ ಸಂತೈಸುತ್ತಿದ್ದಾರೆ. ಸ್ಪಂದನಾ ಇಲ್ಲದೇ ವಿಜಯ ಮುಂದೆ ಬದುಕಿನ ರಥವನ್ನ ಹೇಗೆ ನಡೆಸುತ್ತಾರೆ ಎಂಬುದು ಎಲ್ಲರಿಗೂ ಪ್ರಶ್ನೆ ಮೂಡಿದೆ.

ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.

ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರಘಾಟ್‌ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‌ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

Share This Article