ತಾಯಿಯನ್ನು ಕರೆತಂದು ಪತ್ನಿಯ ಪಾರ್ಥಿವ ಶರೀರ ತೋರಿಸಿದ ವಿಜಯ ರಾಘವೇಂದ್ರ

Public TV
1 Min Read
Vijaya Raghavendra

ನಿಜಕ್ಕೂ ಈ ದೃಶ್ಯ ಕರುಳು ಹಿಂಡುತ್ತಿತ್ತು. ವಾರದ ಹಿಂದೆಯಷ್ಟೇ ಸಂಭ್ರಮದಿಂದ ಮನೆ ಬಿಟ್ಟಿದ್ದ ಪತ್ನಿ ಸ್ಪಂದನಾ (Spandana) ಇದೀಗ ಶವವಾಗಿ ಮನೆಗೆ ವಾಪಸ್ಸಾಗಿದ್ದಾರೆ. ಬ್ಯಾಂಕಾಕ್ ಗೆ ಪ್ರವಾಸಕ್ಕೆಂದು ಹೋಗಿದ್ದ ಪತ್ನಿಯನ್ನು ಶವವಾಗಿ ಮನೆಗೆ ಕರೆತಂದಿದ್ದಾರೆ ವಿಜಯ ರಾಘವೇಂದ್ರ. ಪತ್ನಿಯ ಅಂತಿಮ ದರ್ಶನಕ್ಕೆ ವಿಜಯ ರಾಘವೇಂದ್ರ (Vijay Raghavendra)  ತಾಯಿಯನ್ನು ಕರೆತಂದರು. ಆ ದೃಶ್ಯ ಅಲ್ಲಿದ್ದವರ ಕಣ್ಣನ್ನು ಒದ್ದೆ ಮಾಡಿತು.

Spandana 2 copy

ತಾಯಿಯನ್ನು ಕರೆತಂದ ಶ್ರೀಮುರಳಿ ಮತ್ತು ವಿಜಯ ರಾಘವೇಂದ್ರ, ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿಸಿದರು. ಸೊಸೆಯನ್ನು ಕಂಡ ಅತ್ತೆ ಕೆಲ ಕ್ಷಣ ಭಾವುಕರಾಗಿ ಕಣ್ಣೀರಿಟ್ಟರು. ಎರಡು ದಿನದಿಂದ ಸೊಸೆಯ ಮುಖ ನೋಡಲು ಕಾಯುತ್ತಿದ್ದ ಅತ್ತೆ, ಸೊಸೆಯ ಮುಖ ಕಾಣುತ್ತಿದ್ದಂತೆಯೇ ಕಣ್ಣಿರಿನ ಕಟ್ಟೆಯೇ ಒಡೆದಿತ್ತು. ಇದನ್ನೂ ಓದಿ:ಕುಟುಂಬಸ್ಥರಿಗೆ ಸ್ಪಂದನಾ ಮೃತದೇಹ ಹಸ್ತಾಂತರ – ಮಲ್ಲೇಶ್ವರಂ ಮನೆಯಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ

Flight

ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಸ್ಪಂದನಾ ಅವರ ಮೃತದೇಹದ ಅಂತಿಮ ದರ್ಶನ ಪಡೆಯಲು ಅವರ ಮನೆ ಮುಂದೆ ಅಭಿಮಾನಿಗಳು ಸಾಗರವೇ ಹರಿದು ಬಂದಿತ್ತು. ಶಿವರಾಜಕುಮಾರ್ (Shivarajkumar), ಗೀತಾ ಶಿವರಾಜಕುಮಾರ್, ಅನು ಪ್ರಭಾಕರ್, ನಿರ್ಮಾಪಕ ಮುನಿರತ್ನ ಸೇರಿದಂತೆ ಅನೇಕ ಗಣ್ಯರು ಮಧ್ಯರಾತ್ರಿಯೇ ಬಂದು ಅಂತಿಮ ದರ್ಶನ ಪಡೆದರು.

ಇಂದು ಮಧ್ಯಾಹ್ನ 1 ಗಂಟೆವರೆಗೂ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ಅವರ ಮನೆ ಮುಂದೆಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು.

Share This Article