ಬೆಂಗ್ಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ ಸಂಪೂರ್ಣ ಬ್ಯಾನ್;‌ ಯಾರ ಹೆಸರಿರುತ್ತೋ ಅವರಿಗೂ 50,000 ರೂ. ದಂಡ: ಡಿಕೆಶಿ ಎಚ್ಚರಿಕೆ

Public TV
2 Min Read
d.k.shivakumar

ಬೆಂಗಳೂರು: ಆಗಸ್ಟ್‌ 15ರ ನಂತರ ಬೆಂಗಳೂರಿನಲ್ಲಿ (Bengaluru) ಸಂಪೂರ್ಣವಾಗಿ ಫ್ಲೆಕ್ಸ್, ಬ್ಯಾನರ್ ನಿಷೇಧಿಸಲಾಗಿದೆ. ಯಾರಾದರು ಫ್ಲೆಕ್ಸ್‌, ಬ್ಯಾನರ್‌ ಹಾಕಿದರೆ 50,000 ರೂ. ದಂಡ ಹಾಕಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (D.K. Shivakumar) ಎಚ್ಚರಿಸಿದರು.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊರಗಡೆ ನೋಡಿದಾಗ ನನಗೆ ಅಸಹ್ಯ ಎನ್ನಿಸಿದೆ. ಬ್ಯಾನರ್, ಫ್ಲೆಕ್ಸ್ ಯಾರದೇ ಆಗಲಿ ಸಂಪೂರ್ಣ ಬ್ಯಾನ್. ಯಾರು ಕೂಡ ಹಾಕಬಾರದು. ಯಾರದಾದರು ಹೆಸರಲ್ಲಿ ಹಾಕಿದರೆ ಅವರಿಗೂ 50 ಸಾವಿರ ದಂಡ ಹಾಕುತ್ತೇವೆ. ಇನ್ಮೇಲೆ ಫ್ಲೆಕ್ಸ್ ಹಾಕಿದರೆ ಎಫ್‌ಐಆರ್ ಕೂಡ ದಾಖಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸರ್ಕಾರವನ್ನ ಟೀಕಿಸಿದ್ದ ಹೆಚ್‍ಡಿಕೆ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ

flex banner high court

ನಾನು ಉಸ್ತುವಾರಿ ಆದಾಗಲೆ ಘೋಷಣೆ ಮಾಡಬೇಕು ಎಂದುಕೊಂಡಿದ್ದೆ. ಕೆಲವು ಕಾರಣಕ್ಕೆ ತಡವಾಗಿ ಘೋಷಣೆ ಮಾಡಿದ್ದೇನೆ. ಒಂದು ಪಾಲಿಸಿ ಮಾಡುತ್ತೇವೆ. ಸರ್ಕಾರದ್ದು ಯಾವುದಾದರು ಹಾಕವಂತಹ ಪ್ರಸಂಗ ಬಂದರೆ ಅದು ಹೇಗೆ ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಬೆಂಗಳೂರು ಸಿಟಿಯೊಳಗೆ ಫ್ಲೆಕ್ಸ್, ಬ್ಯಾನರ್ ಯಾರೂ ಹಾಕಬಾರದು. ನಾನು ಸೇರಿ ಯಾರು ಕೂಡ ಹಾಕಬಾರದು. ಇನ್ಮೇಲೆ ಅಕ್ರಮವಾಗಿರುವ ಫ್ಲೆಕ್ಸ್ ಹಾಕುವಂತಿಲ್ಲ. ಯಾರಾದ್ರೂ ಫ್ಲೆಕ್ಸ್ ಹಾಕಿದ್ರೆ 50 ಸಾವಿರ ದಂಡ. ಈಗಿರುವ ಫ್ಲೆಕ್ಸ್ ತೆರವು ಮಾಡಬೇಕು. ಫ್ಲೆಕ್ಸ್ ಬಗ್ಗೆ ಹೈಕೋರ್ಟ್ ಆದೇಶವೂ ಇದೆ. ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ಸಂಪೂರ್ಣ ತೆರವು ಮಾಡಲಾಗುವುದು. ಹೋಲ್ಡಿಂಗ್ಸ್ ಕೂಡ ತೆರವು ಮಾಡಬೇಕು. ಬೆಳಗ್ಗೆ ಸಚಿವರು, ಶಾಸಕರಿಗೂ ಹೇಳಿದ್ದೇನೆ. ಬರ್ತ್ ಡೇ, ಡೆತ್ ಡೇ, ಶುಭಹಾರೈಕೆ ಫ್ಲೆಕ್ಸ್ ಹಾಕುವಂತಿಲ್ಲ. ಫ್ಲೆಕ್ಸ್ ಹಾಕಿದ್ರೆ ಎಫ್‌ಐಆರ್ ದಾಖಲಿಸಲಾಗುವುದು. ಮಲ್ಟಿನ್ಯಾಷನಲ್ ಹೋಲ್ಡಿಂಗ್ಸ್‌ಗೂ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಾನು ಯಾರಿಗೂ ಪ್ರಮಾಣ ಮಾಡ್ಬೇಕಾದ ಅವಶ್ಯಕತೆ ಇಲ್ಲ, ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ, ಇಲ್ಲ ಅಂದ್ರೆ ಹಣ ಇಲ್ಲ: ಡಿಕೆಶಿ

ಬೆಂಗಳೂರು ಟ್ರಾಫಿಕ್ ಕಿರಿಕಿರಿ ಈಸ್ ಔಟ್ ಪ್ರಯತ್ನ ನಡೆದಿದೆ. ಶಾಲಾ ಮಕ್ಕಳಿಂದ ಹಿಡಿದು ಎಲ್ಲರ ಸಲಹೆ ಬಂದಿವೆ. ಕೆಲವು ಸಂಸ್ಥೆಗಳಿಗೆ ಡಿಬೇಟ್‌ಗೆ ಕೊಟ್ಟಿದ್ದೆವು. ಈ ಸಲಹೆಗಳನ್ನ ಆಧರಿಸಿ ವರದಿಗೆ ಕೊಟ್ಟಿದ್ದೆವು. ದೆಹಲಿಯಲ್ಲಿ ಗಡ್ಕರಿಯವರನ್ನ ಭೇಟಿ ಮಾಡಿದ್ದೆವು. ಯಶವಂತಪುರ, ಕೋಲಾರ, ಮೈಸೂರು ಹೈವೇ, ಹೊಸಕೋಟೆ ಕಡೆಯಿಂದ ಹೈವೇಗಳು ರೀಚ್ ಆಗುತ್ತವೆ. ಇದರಿಂದ ಟ್ರಾಫಿಕ್ ಪ್ರಾಬ್ಲಂ ಹೆಚ್ಚಾಗಿದೆ. ವಾಹನಗಳ ಹೆಚ್ಚಳವೂ ಇದೆ. ಕೇಂದ್ರ ಸಚಿವರು ಇದಕ್ಕೆ ಸಲಹೆ ಕೊಟ್ಟಿದ್ದರು. ಟನಲ್, ಫ್ಲೈಓವರ್ ಬಗ್ಗೆ ಸಲಹೆಗಳನ್ನೂ ಕೊಟ್ಟಿದ್ದರು. ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡು ಬನ್ನಿ ಎಂದಿದ್ದಾರೆ‌ ಎಂದರು.

ಡಿಕೆಶಿ ಬ್ಲ್ಯಾಕ್‌ಮೇಲ್ ಮಾಡ್ತಾರೆ ಎಂಬ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿ.ಟಿ. ರವಿ ನನ್ನ ಸ್ನೇಹಿತ. ರಾಜ್ಯ ರಾಜಕಾರಣಕ್ಕೆ ಬರ್ತಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹೇಳಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article