ನವದೆಹಲಿ: ಆಮ್ ಆದ್ಮ ಪಕ್ಷ (AAP) ಮತ್ತು ಕೇಂದ್ರ ಸರ್ಕಾರದ (Union Government) ನಡುವೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದ ದೆಹಲಿ ಆಡಳಿತ ಸೇವೆಗಳ ನಿಯಂತ್ರಣ ಸಂಬಂಧ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಬದಲಾಯಿಸುವ ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ ತಿದ್ದುಪಡಿ ಮಸೂದೆ, 2023 (National Capital Territory of Delhi (Amendment) Bill, 2023) ರಾಜ್ಯಸಭೆಯಲ್ಲಿ ಪಾಸ್ ಆಗಿದೆ.
ಗೃಹ ಸಚಿವ ಅಮಿತ್ ಶಾ (Amit Shah) ಈ ಮಸೂದೆಯನ್ನು ರಾಜ್ಯಸಭೆಯಲ್ಲಿ(Rajya Sabha) ಮಂಡಿಸಿದರು. ಮಸೂದೆಯ ಪರ 131 ಮತಗಳು ಬಿದ್ದರೆ, 102 ಮತಗಳು ವಿರುದ್ಧ ಚಲಾವಣೆಯಾದವು. ಬಿಜೆಡಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಸದಸ್ಯರು ಬೆಂಬಲ ನೀಡಿದ್ದರಿಂದ ಮಸೂದೆ ಪಾಸ್ ಆಗಿದೆ. ಈ ಮಸೂದೆಗೆ ರಾಷ್ಟ್ರಪತಿಗಳ ಸಹಿ ಬಿದ್ದ ಬಳಿಕ ಅಧಿಕೃತ ಕಾನೂನಾಗಿ ಜಾರಿಯಾಗಲಿದೆ.
‘भारत’ जीत गया ‘I.N.D.I.A.’ हार गया।
संसद द्वारा राष्ट्रीय राजधानी क्षेत्र दिल्ली (संशोधन) विधेयक, 2023 पारित किया गया।#DelhiServiceBill pic.twitter.com/CimgBT3I7J
— Sambit Patra (@sambitswaraj) August 7, 2023
ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್ ಮತ್ತು ಭೂ ವ್ಯವಹಾರಗಳನ್ನು ಹೊರತುಪಡಿಸಿ ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆಯ ಮೇಲೆ ದೆಹಲಿ ಸರ್ಕಾರವು ಶಾಸಕಾಂಗ ಮತ್ತು ಕಾರ್ಯಕಾರಿ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಮೇ 11 ರಂದು ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ರದ್ದುಗೊಳಿಸುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿತ್ತು.
ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆ ಕಳೆದ ಗುರುವಾರ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಈ ಮಸೂದೆ ಅಂಗೀಕರವಾಗಿತ್ತು. ಇದನ್ನೂ ಓದಿ: ಭಾಷಣದಲ್ಲಿ ಮತದಾರರಿಗೆ ಆಮಿಷ – ಜೆಪಿ ನಡ್ಡಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದು
Rajya Sabha MP and Former CJI Ranjan Gogoi makes his maiden speech on the Delhi Services Bill#DelhiServiceBill #RajyaSabha #RanjanGogoi दिल्ली सेवा बिल pic.twitter.com/drwBwzk0Up
— Bar & Bench (@barandbench) August 7, 2023
ರಾಜ್ಯಸಭೆಯಲ್ಲಿ ಬಿಜೆಪಿಗೆ ಬೆಂಬಲ ಇಲ್ಲದ ಕಾರಣ ಮಸೂದೆ ಹೇಗೆ ಪಾಸ್ ಆಗುತ್ತದೆ ಎಂಬ ಕುತೂಹಲವಿತ್ತು. ಸುಗ್ರೀವಾಜ್ಞೆ ವಿರುದ್ಧ ಬೆಂಬಲ ನೀಡುವಂತೆ ದೆಹಲಿ ಸಿಎಂ ಕೇಜ್ರಿವಾಲ್ (Arvind kejriwal) ವಿಪಕ್ಷಗಳನ್ನು ಕೋರಿದ್ದರು.
ದೆಹಲಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಇರುವುದನ್ನು ಖಚಿತಪಡಿಸಿಕೊಳ್ಳುವುದು ಮಸೂದೆಯ ಉದ್ದೇಶವಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುವುದಿಲ್ಲ ಎಂದು ಅಮಿತ್ ಶಾ ತಮ್ಮ ಭಾಷಣದಲ್ಲಿ ಹೇಳಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]