ಕಾರಿನ ಚಕ್ರ ಸ್ಫೋಟ – ಹೆಡ್‌ಕಾನ್ಸ್‌ಟೇಬಲ್ ದುರ್ಮರಣ

Public TV
1 Min Read
Police

ಕಲಬುರಗಿ: ಚಕ್ರ ಸ್ಫೋಟಗೊಂಡ ಪರಿಣಾಮ ಕಾರೊಂದು (Car) ಪಲ್ಟಿಯಾಗಿ ಹೆಡ್‌ಕಾನ್ಸ್‌ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೇಡಂನಲ್ಲಿ ನಡೆದಿದೆ.

ಕಲಬುರಗಿಯ (Kalaburagi) ಅಶೋಕ್ ನಗರ ಪೊಲಿಸ್ (Police) ಠಾಣೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮೊಯಿಜುದ್ದೀನ್ (52) ಎಂಬುವವರು ಮೃತ ಪಟ್ಟ ಪೊಲೀಸ್ ಇಲಾಖೆ ಸಿಬ್ಬಂದಿ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಉಳಿದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕುಡಿದ ವಿಚಾರ ತಂದೆ ಬಳಿ ಬಾಯ್ಬಿಟ್ಟಿದ್ದಕ್ಕೆ ಕೊಲೆಗೈದ ಆರೋಪಿಗಳು ಅರೆಸ್ಟ್

ಮೊಯಿಜುದ್ದೀನ್ ಸಹೋದರ ನಿಜಮುದ್ದೀನ್ ಮತ್ತು ಇನ್ನೋರ್ವ ವ್ಯಕ್ತಿ ಕಾರಿನಲ್ಲಿದ್ದರು ಎನ್ನಲಾಗಿದೆ. ಕಲಬುರಗಿ ನಗರದಿಂದ ಸೇಡಂನ ಮಳಖೇಡಕ್ಕೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಈ ಅವಘಡ ಸಂಭವಿಸಿದೆ. ಠಾಣೆಯ ಸಿಬ್ಬಂದಿ ಮೃತ ಪಟ್ಟ ಮೊಯಿಜುದ್ದೀನ್‍ಗಾಗಿ ಸಂತಾಪ ಸೂಚಿಸಿದ್ದಾರೆ.

ಈ ಸಂಬಂಧ ಮಳಖೇಡ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರಾಥಮಿಕ ಒತ್ತುವರಿ ಪಟ್ಟಿ ತಯಾರಿಸಿ, ಪ್ರತೀ ವಾರಾಂತ್ಯ ತೆರವಿಗೆ ಮುಂದಾಗಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article