ಸಾಲ ಮರುಪಾವತಿ ವಿಳಂಬ- ತುಮಕೂರು ಕಾಲೇಜಿಗೆ ಬೀಗ ಜಡಿದ ಬ್ಯಾಂಕ್‌

Public TV
1 Min Read
Tumakur

ತುಮಕೂರು: ಸಾಲ ಮರುಪಾವತಿ ಮಾಡದ ಕಾರಣಕ್ಕೆ ಶೆಟ್ಟಿಹಳ್ಳಿ ಬಳಿಯ ಎಚ್ಎಂಎಸ್ ಪಾಲಿಟೆಕ್ನಿಕ್ ಕಾಲೇಜಿಗೆ (HSM Polytechnic College) ಟಿಜಿಎಂಸಿ ಬ್ಯಾಂಕ್ (TGMC Bank) ಸಿಬ್ಬಂದಿ ಬೀಗ ಹಾಕಿದ ಪ್ರಸಂಗ ನಡೆದಿದೆ.

ಮಾಜಿ ಶಾಸಕ, ಎಚ್‌ಎಂಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಫಿ ಅಹ್ಮದ್ ಹಲವು ವರ್ಷಗಳ ಹಿಂದೆ ತುಮಕೂರು ಗ್ರೈನ್ ಮರ್ಚೆಂಟ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಪಡೆದ ಸಾಲವನ್ನು ಪಾವತಿಸದ ಕಾರಣ ಬ್ಯಾಂಕ್‌ ಹಲವು ಬಾರಿ ನೋಟಿಸ್‌ ಜಾರಿ ಮಾಡಿತ್ತು. ಇದನ್ನೂ ಓದಿ: ICC WorldCup 2023: ಪಾಕಿಸ್ತಾನ ತಂಡ ಭಾರತಕ್ಕೆ ಬರೋದು ಫಿಕ್ಸ್

ಬ್ಯಾಂಕ್‌ನಿಂದ ಹಲವು ಬಾರಿ ನೋಟಿಸ್ ನೀಡಿದರೂ ಸ್ಪಂದಿಸದ ಕಾರಣ ಶನಿವಾರ ಬ್ಯಾಂಕ್ ಸಿಬ್ಬಂದಿ ಕಾಲೇಜಿಗೆ ಬೀಗ ಹಾಕಿದ್ದಾರೆ. ಸಂಜೆ ಬಾಕಿ ಹಣ ಪಾವತಿಸಿದ ನಂತರ ಕಾಲೇಜಿಗೆ ಹಾಕಿದ್ದ ಬೀಗ ತೆರವು ಮಾಡಲಾಯಿತು.

ಹಣ ಪಾವತಿ ಮಾಡಿದ ನಂತರ ಆಡಳಿತ ಮಂಡಳಿ ವಶಕ್ಕೆ ಕಾಲೇಜನ್ನು ನೀಡಲಾಯಿತು ಎಂದು ಟಿಜಿಎಂಸಿ ಬ್ಯಾಂಕ್ ಅಧ್ಯಕ್ಷ ದಿವ್ಯಾನಂದಮೂರ್ತಿ ತಿಳಿಸಿದರು.


Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article