ಕಲುಷಿತ ನೀರು ಸೇವಿಸಿ ಮಡಿದವರ ಕುಟುಂಬಸ್ಥರಿಗೆ 25 ಲಕ್ಷ ಪರಿಹಾರ, ಸರ್ಕಾರಿ ನೌಕರಿ ಕೊಡಿ: ಸಿ.ಟಿ. ರವಿ ಆಗ್ರಹ

Public TV
1 Min Read
C.T.RAVI

ಚಿತ್ರದುರ್ಗ: ಕಲುಷಿತ ನೀರು (Contaminated Water Tragedy) ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಜೊತೆಗೆ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಸರ್ಕಾರಕ್ಕೆ ಮಾಜಿ ಶಾಸಕ ಸಿ.ಟಿ. ರವಿ (C.T. Ravi) ಒತ್ತಾಯಿಸಿದರು.

ಚಿತ್ರದುರ್ಗ (Chitradurga) ನಗರದ ಕವಾಡಿಗರಹಟ್ಟಿ ಬಡಾವಣೆಗೆ ಭೇಟಿ ನೀಡಿದ ಅವರು ಆಸ್ಪತ್ರೆಗೆ ತೆರಳಿ ಅಸ್ವಸ್ಥರಾಗಿದ್ದ ಜನರ ಆರೋಗ್ಯ ವಿಚಾರಿಸಿದರು. ಸಿ.ಟಿ. ರವಿ ಅವರ ಜೊತೆ ಮಾಜಿ ಸಚಿವ ಬಿ.ಸಿ. ನಾಗೇಶ್‌, ಮಾಜಿ ಶಾಸಕ ಜಿ.ಹೆಚ್‌.ತಿಪ್ಪಾರೆಡ್ಡಿ, ಎಂಎಲ್‌ಸಿ ಕೆ.ಎಸ್‌. ನವೀನ್‌ ಕೂಡ ಇದ್ದರು. ಇದನ್ನೂ ಓದಿ: ದಲಿತಕೇರಿಯಲ್ಲಿ ಮಾತ್ರ ಈ ರೀತಿ ನಡೆದಿದೆ: ಕಲುಷಿತ ನೀರು ಸೇವಿಸಿ ಐವರ ಸಾವಿನ ಬಗ್ಗೆ ಚೇತನ್‌ ಪ್ರತಿಕ್ರಿಯೆ

Polluted water chitradurga

ಅಸ್ವಸ್ಥರ ಆರೋಗ್ಯ ವಿಚಾರಣೆ ಬಳಿಕ ಸಿ.ಟಿ.ರವಿ ಪ್ರತಿಕ್ರಿಯಿಸಿ, ರಾಜ್ಯದ ಹಲವೆಡೆ ಈ ರೀತಿಯ ಪ್ರಕರಣ ನಡೆದಿವೆ. ರಾಜ್ಯ ಸರ್ಕಾರ ಈವರೆಗೆ ಎಚ್ಚೆತ್ತುಕೊಂಡಿಲ್ಲ. ಸಾವಿನ ಬಳಿಕ ಪರಿಹಾರ ಕೊಡುವುದು ಒಂದು ಭಾಗ. ಈ ರೀತಿಯ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ದರಿದ್ರ ಬಂದಿಲ್ಲ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಆ ದರಿದ್ರ ಅವರಿಗೆ ಬರೋದು ಬೇಡ. ಅದು ಒಳ್ಳೆಯದೂ ಅಲ್ಲ ಎಂದು ಟಾಂಗ್‌ ಕೊಟ್ಟರು. ಇದನ್ನೂ ಓದಿ: ಕನಸು ಭಗ್ನಗೊಂಡ ಹೆಚ್‌ಡಿಕೆ, ಭಗ್ನಪ್ರೇಮಿಯಂತೆ ವ್ಯಾಘ್ರರಾಗಿದ್ದಾರೆ: ದಿನೇಶ್‌ ಗುಂಡೂರಾವ್‌ ತಿರುಗೇಟು

Web Stories

Share This Article