ಅಮೃತ್ ಭಾರತ್; ರಾಜ್ಯದ 13 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ – ಮೋದಿಯಿಂದ ಇಂದು ಚಾಲನೆ

Public TV
4 Min Read
koppala railway station darga

ಬೆಂಗಳೂರು: ದೇಶದ ರೈಲ್ವೆ ಇಲಾಖೆಗೆ ವೇಗ ನೀಡಿ ಭಾರತದ ರೈಲುಗಳು ವಿಶ್ವಮಟ್ಟದಲ್ಲಿ ಮಿಂಚುವಂತೆ ಮಾಡಿದ್ದ ಪ್ರಧಾನಿ ಮೋದಿ (Narendra Modi) ಸರ್ಕಾರ, ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ದೇಶದ ರೈಲ್ವೆ ನಿಲ್ದಾಣಗಳನ್ನು ಹೈಟೆಕ್ ಮಾಡುವ ನಿಟ್ಟಿನಲ್ಲಿ ಅಮೃತ್ ಭಾರತ್ ನಿಲ್ದಾಣ ಯೋಜನೆಯ ಮೊದಲ ಹಂತಕ್ಕೆ ಇಂದು (ಭಾನುವಾರ) ಪ್ರಧಾನಿಯಿಂದ ಚಾಲನೆ ದೊರೆಯಲಿದೆ. ಈ ಮೂಲಕ ರಾಜ್ಯದಿಂದ ಈ ಯೋಜನೆಗೆ ಆಯ್ಕೆಯಾದ 55 ನಿಲ್ದಾಣಗಳ ಪೈಕಿ, 13 ನಿಲ್ದಾಣಗಳು ಶಿಲಾನ್ಯಾಸಗೊಳಲಿವೆ.

ಅಮೃತ್ ಭಾರತ್ ರೈಲು ನಿಲ್ದಾಣ ಪುನಾಭಿವೃದ್ಧಿ ಯೊಜನೆಗೆ ಇಂದು ಚಾಲನೆ ಸಿಗಲಿದೆ. ದೇಶದ ಪ್ರಮುಖ ನಗರಗಳ ಸೇರಿ ಒಟ್ಟು 1,275 ರೈಲ್ವೆ ನಿಲ್ದಾಣಗಳನ್ನು ಉನ್ನತ ಮಟ್ಟಕ್ಕೇರಿಸಿ 24,470 ಕೋಟಿ ವೆಚ್ಚದಲ್ಲಿ ವಿಶ್ವದರ್ಜೆ ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ ರೈಲ್ವೆ ನಿಲ್ದಾಣಗಳನ್ನು ಹೈಟೆಕ್ ಮಾಡುವ ನಿಟ್ಟಿನಲ್ಲಿ ಅಮೃತ್ ಭಾರತ್ ನಿಲ್ದಾಣ ಯೋಜನೆಯ ಮೊದಲ ಹಂತಕ್ಕೆ ಇಂದು ಪ್ರಧಾನಿಯಿಂದ ಚಾಲನೆ ದೊರೆಯಲಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪನ – ದೆಹಲಿ, ಪಂಜಾಬ್​ನಲ್ಲೂ ನಡುಗಿದ ಭೂಮಿ

narendra modi SCO

ನಮ್ಮ ರಾಜ್ಯದ ಒಟ್ಟು 55 ನಿಲ್ದಾಣ ಈ ಯೋಜನೆಗೆ ಆಯ್ಕೆಯಾಗಿವೆ. ಮೊದಲ ಹಂತದಲ್ಲಿ ನೈಋತ್ಯ, ದಕ್ಷಿಣ, ದಕ್ಷಿಣ ಕೇಂದ್ರ ಮತ್ತು ಕೇಂದ್ರ ರೈಲು ವಿಭಾಗಗಳನ್ನು ಸೇರಿ ಒಟ್ಟು 13 ರೈಲ್ವೆ ನಿಲ್ದಾಣಗಳು ಈ ಯೋಜನೆಯ ಲಾಭ ಪಡೆದುಕೊಳ್ಳಲಿವೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯದ 13 ರೈಲ್ವೆ ನಿಲ್ದಾಣಗಳನ್ನು ಸೇರಿ, ದೇಶಾದ್ಯಂತ ಅಮೃತ್ ಭಾರತ್ ನಿಲ್ದಾಣ ಯೋಜನೆ ಮೊದಲ ಹಂತದ 508 ರೈಲು ನಿಲ್ದಾಣಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಇಂದು ಚಾಲನೆ ನೀಡಲಿದ್ದಾರೆ.

ಅಮೃತ್ ಭಾರತ್ ನಿಲ್ದಾಣ ಯೊಜನೆ ಲಾಭಪಡೆಯಲಿರುವ ರಾಜ್ಯದ ವಿವಿಧ ವಿಭಾಗದ ರೈಲ್ವೆ ನಿಲ್ದಾಣಗಳು ಹೀಗಿವೆ. ಇದನ್ನೂ ಓದಿ: ಪಿಓಪಿ, ಬಣ್ಣದ ಮೂರ್ತಿ ತಯಾರಿಕೆ, ದಾಸ್ತಾನು ಮಾರಾಟ ಮಾಡದಂತೆ ಈಶ್ವರ್ ಖಂಡ್ರೆ ಮನವಿ

ಅಮೃತ್ ಭಾರತ್ ಯೋಜನೆಯ ರೈಲ್ವೆ ನಿಲ್ದಾಣಗಳು
ಬಳ್ಳಾರಿ                            16.7 ಕೋಟಿ ರೂ.
ಘಟಪ್ರಭಾ                        18.2 ಕೋಟಿ ರೂ.
ಗೋಕಾಕ್ ರಸ್ತೆ                  17 ಕೋಟಿ ರೂ.
ಬೀದರ್                            24.4 ಕೋಟಿ ರೂ.
ಮಂಗಳೂರು                     18.5 ಕೋಟಿ ರೂ.
ಹರಿಹರ                             25.2 ಕೋಟಿ ರೂ.
ಅಳ್ನಾವರ                          17.2 ಕೋಟಿ ರೂ.
ಗದಗ                                23.2 ಕೋಟಿ ರೂ.
ಅರಸೀಕೆರೆ                          34.1 ಕೋಟಿ ರೂ.
ಕಲಬುರಗಿ                           29.1 ಕೋಟಿ ರೂ.
ಶಹಾಬಾದ್                         26.1 ಕೋಟಿ ರೂ.
ಕೊಪ್ಪಳ                               21.1 ಕೋಟಿ ರೂ.
ಒಟ್ಟು                                   347 ಕೋಟಿ ರೂ.

ಒಟ್ಟು 347 ಕೋಟಿ ರೂ. ವೆಚ್ಚದಲ್ಲಿ ಈ ರೈಲ್ವೆ ನಿಲ್ದಾಣಗಳು ಅಭಿವೃದ್ಧಿ ಹೊಂದಲಿವೆ. ಅಮೃತ್ ಭಾರತ್ ನಿಲ್ದಾಣ ಯೊಜನೆಯಡಿಯಲ್ಲಿ ಈಗಾಗಲೇ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ನಿಲ್ದಾಣದ ಪ್ರವೇಶ ದ್ವಾರ, ಸಂಚಾರ ಪ್ರದೇಶ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಶೌಚಗೃಹ, ದಿವ್ಯಾಂಗ ಪ್ರಯಾಣಿಕರಿಗೆ ಅನುಕೂಲವಾಗುವ ಲಿಫ್ಟ್ ಮತ್ತು ಎಸ್ಕಲೇಟರ್, ನಿಲ್ದಾಣದ ಸ್ವಚ್ಛತೆ, ಉಚಿತ ವೈಫೈ ಹೀಗೆ ನಾನಾ ಸವಲತ್ತುಗಳು ಅಭಿವೃದ್ಧಿಯಾಗಲಿವೆ. ಈ ಯೊಜನೆಯು ನಿಲ್ದಾಣದ ಕಟ್ಟಡವನ್ನು ಆಧುನಿಕ ವಾಸ್ತುವಿನ್ಯಾಸದೊಂದಿಗೆ ಸುಧಾರಣೆ, ನಿಲ್ದಾಣದ ಎರಡೂ ಬದಿಗಳನ್ನು ನಗರದೊಂದಿಗೆ ಪರಸ್ಪರ ವ್ಯವಸ್ಥೆ, ಸುಸ್ಥಿರ ಮತ್ತು ಪರಿಸರಸ್ನೇಹಿ ಅಭಿವೃದ್ಧಿ, ರೂಫ್ ಪ್ಲಾಜಾಗಳು ನಿರ್ಮಾಣಗೊಳಲಿವೆ.

Web Stories

Share This Article