– ದೇವೀರಮ್ಮನ ದೇಗುಲಕ್ಕೆ ಡ್ರೆಸ್ ಕೋಡ್ ಜಾರಿ, ಮೊಬೈಲ್ ಫೋನ್‌ಗೂ ನಿಷೇಧ
ಚಿಕ್ಕಮಗಳೂರು: ದೇವಿರಮ್ಮನ ದೇಗುಲಕ್ಕೆ (Deviramma Temple) ಡ್ರೆಸ್‌ಕೋಡ್ (Dresscode) ಆದೇಶ ಜಾರಿಯಾಗಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಲು ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸೂಚನೆ ನೀಡಿದೆ.
ಇನ್ನು ಮುಂದೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಇತಿಹಾಸ ಪ್ರಸಿದ್ಧ ಬಿಂಡಿಗ ದೇವಿರಮ್ಮನ ದೇವಾಲಯದಲ್ಲಿ ಸ್ಕರ್ಟ್, ಮಿಡಿ, ಸ್ಲೀವ್‌ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ. ದೇವಾಲಯದ ಆವರಣದೊಳಗೆ ಮೊಬೈಲ್ (Mobile) ಫೋನ್‌ಗೂ ನೀಷೇಧ ಹೇರಲಾಗಿದೆ. ದೀಪಾವಳಿ ವೇಳೆ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿವರ್ಷ ಲಕ್ಷಾಂತರ ಭಕ್ತರು ದೇವಿರಮ್ಮನ ಬೆಟ್ಟ ಹತ್ತುತ್ತಾರೆ. ಮಧ್ಯರಾತ್ರಿಯೇ ಪಿರಮಿಡ್ ಆಕಾರದ ಬೆಟ್ಟ ಹತ್ತಿ ಭಕ್ತಿ ಸಮರ್ಪಿಸುತ್ತಾರೆ. ಇದನ್ನೂ ಓದಿ: ‘ಗೃಹಜ್ಯೋತಿ’ ಗ್ಯಾರಂಟಿಗೆ ಇಂದು ಚಾಲನೆ; ಕಲಬುರಗಿಯಲ್ಲಿ ಸಿಎಂ ಉದ್ಘಾಟನೆ – ಖರ್ಗೆ ತವರಲ್ಲಿ ಸಿದ್ಧತೆ
ಮಕ್ಕಳಿಂದ ವೃದ್ಧರವರೆಗೂ ಬೆಟ್ಟ ಹತ್ತಿ ಬೆಟ್ಟದ ತಾಯಿಗೆ ಕೈಮುಗಿಯುತ್ತಾರೆ. ಯುವಕ-ಯುವತಿಯರೂ ಬರುತ್ತಾರೆ. ಅವರಲ್ಲಿ ಪ್ರೇಮಿಗಳು ಸಹಾ ಇರುತ್ತಾರೆ. ಯಾರೇ ಬಂದರೂ ಸಾಂಪ್ರದಾಯಿಕ ಉಡುಗೆಯಲ್ಲೇ ಬರಬೇಕೆಂದು ದೇವಾಲಯ ಸೂಚನೆ ನೀಡಿದೆ. ದೇವಾಯದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಹಾಗೂ ರೀಲ್ಸ್‌ಗೆ ಅವಕಾಶವಿಲ್ಲ ಎಂದು ಸಂದೇಶ ನೀಡಿದೆ. ಇದನ್ನೂ ಓದಿ: ಚಂದ್ರನಿಗೆ ಹತ್ತಿರ.. ಹತ್ತಿರ..; ಇಂದು ಚಂದ್ರನ ಕಕ್ಷೆಗೆ ಇಸ್ರೋ ಬಾಹ್ಯಾಕಾಶ ನೌಕೆ – ಮುಂದೇನು?
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]