ಒಂದು ಫ್ರಿಡ್ಜ್‌ಗಾಗಿ 7 ತಿಂಗಳ ಗರ್ಭಿಣಿಯ ಜೀವವೇ ಹೋಯ್ತು!

Public TV
1 Min Read
pregnant

ಪಾಟ್ನಾ: ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ (Dowry) ಫ್ರಿಡ್ಜ್ ಗಿಫ್ಟ್ (Refrigerator Gift) ಕೊಟ್ಟಿಲ್ಲವೆಂದು 7 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆಯೊಂದು ಬಿಹಾರದ ಪೂರ್ನಿಯಾದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಅಂಗೂರಿ ಬೇಗಂ (30) ಎಂದು ಗುರುತಿಸಲಾಗಿದೆ. ಈಕೆ 2012ರಲ್ಲಿ ಮೊಮಿನತ್ ಅಲಾಂ ಎಂಬಾತನನ್ನು ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದರು. ಇದೀಗ ಅಂಗೂರಿ ಮತ್ತೆ ಗರ್ಭಿಣಿಯಾಗಿದ್ದು, ಸದ್ಯ ಈಕೆಯನ್ನು ಬಾಮೈದರೇ ಕೊಲೆ ಮಾಡಿದ್ದಾರೆ.

ಕೊಲೆ ನಡೆದ ಬೆನ್ನಲ್ಲೇ ಅಂಗೂರಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲಿಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಇದಕ್ಕೂ ಮುನ್ನವೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಸೆಲ್ಫಿ ಹುಚ್ಚು – ಕಾಲು ಜಾರಿ ನದಿಯಲ್ಲಿ ಕೊಚ್ಚಿಹೋಗಿ ವ್ಯಕ್ತಿ ಸಾವು

ಅಂಗೂರಿ ಮೃತದೇಹವನ್ನು ಪೊಲೀಸರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ರವಾನಿಸಿದ್ದಾರೆ. ಈ ವೇಳೆ ಆಕೆ 7 ತಿಂಗಳ ಗರ್ಭಿಣಿ ಎಂಬುದು ಬಯಲಾಗಿದ್ದು, ನಂತರ ಮೃತದೇಹವನ್ನು ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಮಹಿಳೆಯನ್ನು ಥಳಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಅಂಗೂರಿ ಸಹೋದರ ಪ್ರತಿಕ್ರಿಯಿಸಿ, ಒಂದು ಫ್ರಿಡ್ಜ್‍ಗೋಸ್ಕರ ನನ್ನ ಸಹೋದರಿಯ ಕೊಲೆಯಾಗಿದೆ. ಇದಕ್ಕೂ ಮುನ್ನ ಪತಿ ಹಾಗೂ ಆತನ ಸಹೋದರರಿಂದ ದೈಹಿಕ ಹಿಂಸೆಯನ್ನು ಕೂಡ ಆಕೆ ಅನುಭವಿಸಿದ್ದಳು ಎಂದು ತಿಳಿಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article