ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ವಿಚಾರಣಾಧೀನ ಕೈದಿ ಎಸ್ಕೇಪ್

Public TV
1 Min Read
SURESH

ಚಾಮರಾಜನಗರ: ಕೋರ್ಟ್‍ಗೆ (Court) ಕರೆದೊಯ್ಯುವಾಗ ವಿಚಾರಣಾಧೀನ ಕೈದಿಯೊಬ್ಬ ಪೊಲೀಸರಿಂದ (Police) ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ತಮಿಳುನಾಡಿನ ಹಾಸನೂರು ಬಳಿ ನಡೆದಿದೆ.

ಆರೋಪಿಯನ್ನು ಚಾಮರಾಜನಗರ (Chamarajanagar) ಉಪಕಾರಾಗೃಹದಿಂದ ತಮಿಳುನಾಡಿನ (Tamil Nadu) ಸತ್ಯಮಂಗಲಂ ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಈ ಘಟನೆ ನಡೆದಿದೆ. ಮೇಗಲಹುಂಡಿಯ ಸುರೇಶ್ (28) ಎಂಬಾತ ಪರಾರಿಯಾದ ವ್ಯಕ್ತಿ. ಹಾಸನೂರು ಬಳಿ ಟೀ ಕುಡಿಯುವ ವೇಳೆ ಆರೋಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಟ್ಟುನಿಟ್ಟಿನ ಕ್ರಮ; ಅಪಘಾತಗಳ ಸಂಖ್ಯೆ ಇಳಿಕೆ

ಕಳ್ಳತನ ಪ್ರಕರಣಗಳಲ್ಲಿ ಬಂಧಿಯಾಗಿದ್ದ ಸುರೇಶ್ ಚಾಮರಾಜನಗರ ಜೈಲಿನಲ್ಲಿದ್ದ. ಆತನನ್ನು ತಮಿಳುನಾಡಿನ ಕಳ್ಳತನ ಪ್ರಕರಣವೊಂದರಲ್ಲಿ ವಿಚಾರಣೆಗಾಗಿ ಕೋರ್ಟ್‍ಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ವಿಚಾರಣಾಧೀನ ಕೈದಿ ಸುರೇಶ್ ತಪ್ಪಿಸಿಕೊಂಡಿದ್ದಾನೆ. ಇದೀಗ ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಟೊಮೆಟೋ ಬಳಕೆಯನ್ನೇ ನಿಲ್ಲಿಸಿ- ಪಂಜಾಬ್ ರಾಜ್ಯಪಾಲ ಕರೆ

Web Stories

Share This Article