Expressway ರೂಲ್ಸ್ ಬ್ರೇಕ್ – ಚಾಲಕರಿಂದ 7 ಲಕ್ಷ ರೂ. ದಂಡ ವಸೂಲಿ

Public TV
2 Min Read
Bengaluru Mysuru Expressway 6

ಮಂಡ್ಯ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bengaluru-Mysuru-Expressway) ಅಪಘಾತಗಳನ್ನು ತಡೆಗಟ್ಟಲು ಸರ್ಕಾರ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ವಾಹನ ಸವಾರರು ನಿಯಮಗಳನ್ನು ಗಾಳಿಗೆ ತೂರಿದಾಗ ಸಂಚಾರ ಮಾಡಿದಾಗ ಪೊಲೀಸರು ದಂಡದ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ. ಮಂಡ್ಯ (Mandya) ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಸುಮಾರು 7 ಲಕ್ಷ ರೂ.ಗಳನ್ನು ಪೊಲೀಸರು  (Police) ವಸೂಲಿ ಮಾಡಿದ್ದಾರೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಾವಿರಕ್ಕೂ ಅಧಿಕ ಅಪಘಾತಗಳು ನಡೆದಿವೆ. ಈ ಪೈಕಿ 140ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಲ್ಲದೇ ಈ ಅಪಘಾತಗಳಲ್ಲಿ ಹಲವು ಮಂದಿ ಕೈ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಇದರಿಂದ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಅಪಘಾತಗಳನ್ನು ತಡೆಗಟ್ಟಲು ಹೊಸ ನಿಯಮಗಳನ್ನು ಜಾರಿ ಮಾಡಿತ್ತು. ಎಕ್ಸ್‍ಪ್ರೆಸ್‍ವೇನಲ್ಲಿ 100 ಕಿಮೀಗೂ ಅಧಿಕ ವೇಗದಲ್ಲಿ ವಾಹನಗಳು ಚಲಿಸದಂತೆ, ದ್ವಿಚಕ್ರ, ತ್ರಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದಲ್ಲದೇ ಟ್ರಕ್‍ಗಳು ಎಡಬದಿಯ ವೇನಲ್ಲಿ ಸಂಚಾರ ಮಾಡಬೇಕೆಂದು ನಿಯಮ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಅರಾವಳಿ ಬೆಟ್ಟದಲ್ಲಿ ಅಡಗಿಕುಳಿತ ಜನ – ಹರಿಯಾಣ ಗಲಭೆ ದಂಗೆಕೋರರ ಸುಳಿವು ಪತ್ತೆ!

ಇಷ್ಟಾದರೂ ವಾಹನ ಸವಾರರು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇದೇ ಕಾರಣಕ್ಕೆ ಪೊಲೀಸರು ದಂಡ ವಿಧಿಸಲು ತೀರ್ಮಾನ ಮಾಡಿದ್ದರು. ಇದರಿಂದಾಗಿ ಕಳೆದ ಒಂದು ವಾರದದಿಂದ ಇಲ್ಲಿಯವರೆಗೆ 7 ಲಕ್ಷ ರೂ. ದಂಡ ವಸೂಲಿಯಾಗಿದೆ. ಅತಿಯಾದ ವೇಗದ ಚಾಲನೆಗೆ 500 ರೂ., ಲೈನ್ ಡಿಸಿಪ್ಲೀನ್ ಉಲ್ಲಂಘನೆಗೆ 250 ರೂ., ನಿರ್ಬಂಧ ವಿಧಿಸಿದ ವಾಹನಗಳ ಸಂಚಾರಕ್ಕೆ 100 ಮಂದಿ ಚಾಲಕರಿಗೆ ಇದುವರೆಗೆ ದಂಡ ಹಾಕಲಾಗಿದೆ.

ಹೆದ್ದಾರಿ ಪ್ರಾಧಿಕಾರ ಅಳಡಿಸಿರುವ ಎಇ ತಂತ್ರಜ್ಞಾನದ ಸ್ಪೀಡ್ ಡಿಟೆಕ್ಟರ್ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಗಣಂಗೂರು ಟೋಲ್ ಪ್ಲಾಜಾಕ್ಕೂ ಮೊದಲ 2 ಕಿಮೀ ದೂರದಲ್ಲಿ ಪೊಲೀಸರು ಸ್ಪೀಡ್ ಹಂಟರ್ ಮೂಲಕ ವಾಹನಗಳ ವೇಗದ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ಅತೀಯಾಗಿ ವಾಹನ ಚಲಾಯಿಸಿದರೆ ಚಾಲಕರಿಗೆ ಟೋಲ್‍ನಲ್ಲಿ ಪೊಲೀಸರೇ ದಂಡ ವಸೂಲಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಪೊಲೀಸ್‌ ವರ್ಗಾವಣೆ ಸಭೆಯಲ್ಲಿ ವೈಎಸ್‌ಟಿ ಟ್ಯಾಕ್ಸ್‌ನವರಿಗೆ ಏನು ಕೆಲಸ? – ಹೆಚ್‌ಡಿಕೆಯಿಂದ ಮಿಡ್‌ನೈಟ್‌ ಬಾಂಬ್‌

Web Stories

Share This Article