ಟೆಂಪಲ್ ರನ್ ಮುಗಿಸಿ ಫೋಟೋಶೂಟ್ ನಲ್ಲಿ ಭಾಗಿಯಾದ ಸಾರಾ ಅಲಿ ಖಾನ್

Public TV
2 Min Read
Sara Ali Khan 1

ಬಾಲಿವುಡ್ (Bollywood) ನಟ ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್ ಕಳೆದ ಹಲವು ತಿಂಗಳಿಂದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಕಾಶಿ ಸೇರಿದಂತೆ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ ಸಾರಾ. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅನ್ಯಧರ್ಮಿಯರಾಗಿ ಹಿಂದೂ ದೇವಾಲಯಕ್ಕೆ ಹೋಗುವ ಕುರಿತು ದೊಡ್ಡ ಮಟ್ಟದಲ್ಲೇ ಚರ್ಚೆಯಾಗಿತ್ತು.

Sara Ali Khan 5

ಏನೇ ಟ್ರೋಲ್ ಮಾಡಿದರು ಸಾರಾ ಹೆದರಲಿಲ್ಲ. ಮತ್ತೆ ಮತ್ತೆ ಹಿಂದೂ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಬಂದರು. ಇದೀಗ ಸಾರಾ ಟೆಂಪಲ್ ರನ್ ಮುಗಿಸಿಕೊಂಡು ಹೊಸ ಫೋಟೋಶೂಟ್ (Photoshoot) ನಲ್ಲಿ ಭಾಗಿಯಾಗಿದ್ದಾರೆ. ಇದೆಲ್ಲವನ್ನೂ ಅವರು ಮಾಡುತ್ತಿರುವುದು ಕೇವಲ ಮನಶಾಂತಿಗೆ ಎಂದು ಹೇಳಲಾಗುತ್ತಿದೆ. ಲವ್ ಬ್ರೇಕ್ ಅಪ್ ಆಗಿರುವ ಕಾರಣಕ್ಕಾಗಿ ಶಾಂತಿ ಹುಡುಕಿಕೊಂಡು ಸಾರಾ ಅಲಿಯುತ್ತಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ.

Sara Ali Khan 4

ಸಾರಾ ಅಲಿ ಖಾನ್ (Sara Ali Khan) ಹಾಗೂ ಕ್ರಿಕೆಟಿಗ ಶುಭ್ ಮನ್ (Shubh Man Gill) ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದು ಹಳೆಯ ಸುದ್ದಿ. ಈ ಸುದ್ದಿಗೆ ಪುಷ್ಠಿ ಕೊಡುವಂತೆ ಇಬ್ಬರೂ ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತಾಜಾ ಸಾಮಾಚಾರ ಎಂದರೆ, ಇಬ್ಬರ ನಡುವಿನ ಲವ್ ಬ್ರೇಕ್ ಅಪ್ ಆಗಿದೆ ಎನ್ನುವುದು. ಇಬ್ಬರೂ ಡೇಟ್ (Dating) ಮಾಡುತ್ತಿದ್ದಾರಾ, ಇಲ್ಲವಾ ಎನ್ನುವ ಅನುಮಾನದ ನಡುವೆಯೇ ಇಬ್ಬರೂ ದೂರವಾಗಿದ್ದು ಮಾತ್ರ ನಿಜ.

Sara Ali Khan 2

ಶುಭ್ ಮನ್ ಗಿಲ್ ಮತ್ತು ಸಾರಾ ಅಲಿಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದರು. ಹಲವು ವಿಚಾರಗಳನ್ನೂ ಹಂಚಿಕೊಳ್ಳುತ್ತಿದ್ದರು. ಆದರೆ, ಹಲವು ದಿನಗಳ ಹಿಂದೆ ಇಬ್ಬರೂ ಫಾಲೋ ಮಾಡುವುದನ್ನು ನಿಲ್ಲಿಸಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಅನ್ ಫ್ರೆಂಡ್ ಮಾಡಿಕೊಂಡಿದ್ದಾರೆ. ಹಾಗಾಗಿ ಪ್ರೀತಿಯ ಪಾರಿವಾಳ ಹಾರಿ ಹೋಗಿದೆ ಎಂದು ಹೇಳಲಾಗುತ್ತಿದೆ.

Sara Ali Khan 3

ಬಿಟೌನ್‌ನ ಸಾಲು ಸಾಲು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಸೈಫ್ ಅಲಿ ಖಾನ್ ಪುತ್ರಿ ಸಾರಾ ಸಿನಿಮಾಗಿಂತ ಡೇಟಿಂಗ್ ವಿಷ್ಯವಾಗಿ ಸುದ್ದಿಯಲ್ಲಿದ್ದರು.  ಮುಂಬೈ ಮತ್ತು ದೆಹಲಿಯಲ್ಲಿ ಶುಭ್ ಮನ್ ಗಿಲ್ ಮತ್ತು ಸಾರಾ ಪದೇ ಪದೇ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇಬ್ಬರ ಲವ್ವಿ ಡವ್ವಿ ವಿಚಾರವನ್ನು ಬಹಿರಂಗಗೊಳಿಸಿದ್ದರು.

Sara Ali Khan 8

ಇತ್ತೀಚೆಗೆ ಮುಂಬೈನ ಬಾಸ್ಟಿಯನ್ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಒಟ್ಟಿಗೆ ಡಿನ್ನರ್ ಮಾಡಿದ್ದರು. ನಂತರ ದೆಹಲಿಯಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು. ಕ್ಯಾಶುಯಲ್ ಉಡುಗೆಯಲ್ಲಿ ದೆಹಲಿ ಹೋಟೆಲ್‌ನಿಂದ ಇಬ್ಬರು ನಿರ್ಗಮಿಸಿದ್ದರು. ಬಳಿಕ ವಿಮಾನದಲ್ಲಿ ಅಭಿಮಾನಿಗಳಿಗೆ ಸೆಲ್ಫಿ ಕೊಡುತ್ತಿರುವ ವೀಡಿಯೋವೊಂದು ಸಖತ್ ವೈರಲ್ ಆಗಿತ್ತು.

 

ಸದ್ಯ ಬಿಟೌನ್‌ನಲ್ಲಿ ಸಾರಾ ಮತ್ತು ಶುಭಮನ್ ಗಿಲ್ ಲವ್ವಿ ಡವ್ವಿ ಬ್ರೇಕ್ ಅಪ್ (Breakup) ವಿಚಾರವೇ ಸಖತ್ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ  ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನ ಅಧಿಕೃತವಾಗಿ ಹೇಳುವವರೆಗೂ ಕಾದುನೋಡಬೇಕಿದೆ.

Web Stories

Share This Article