ಸೀಕ್ರೆಟ್ ಮ್ಯಾರೇಜ್ ಬಗ್ಗೆ ರಿವೀಲ್ ಮಾಡಿದ ರಶ್ಮಿಕಾ ಮಂದಣ್ಣ

Public TV
2 Min Read
rashmika mandanna 1 3

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ತಾವು ಗುಟ್ಟಾಗಿ ಮದುವೆ ಆಗಿರುವುದಾಗಿ ಹೇಳುವ ಮೂಲಕ ‘ಮದುವೆ ಮಾಡಿಕೊಂಡ ಹುಡುಗ ಯಾರು?’ ಎಂದು ಹುಡುಕುವಂತೆ ಮಾಡಿದ್ದಾರೆ. ಅಷ್ಟಕ್ಕೂ ಅಸಂಖ್ಯಾತ ಅಭಿಮಾನಿ ಬಳಗ ಹೊಂದಿರುವ ಈ ನಟಿ ಗುಟ್ಟಾಗಿ ಮದುವೆ (Wedding) ಆಗುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಯನ್ನೂ ಹುಟ್ಟು ಹಾಕಿದ್ದಾರೆ. ಇದನ್ನೂ ಓದಿ:ಮತ್ತೆ ಬೋಲ್ಡ್ ಫೋಟೋ ಹಂಚಿಕೊಂಡ ಸಾನ್ಯಾ ಅಯ್ಯರ್

rashmika mandanna 6

‘ಕಿರಿಟ್ ಪಾರ್ಟಿ’ ಸಿನಿಮಾ ವೇಳೆ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ರಶ್ಮಿಕಾ ಎಂಗೇಜ್ ಆದರು. ಕೆಲವೇ ತಿಂಗಳಲ್ಲಿ ಅದು ಮುರಿದು ಬಿತ್ತು. ಆನಂತರ ಅವರು ಮದುವೆ, ಎಂಗೇಜ್ ಮೆಂಟ್ ವಿಚಾರವಾಗಿ ಎಲ್ಲಿಯೂ ಮಾತನಾಡಲಿಲ್ಲ. ತೆಲುಗು ರಂಗಕ್ಕೆ ರಶ್ಮಿಕಾ ಎಂಟ್ರಿ ಕೊಟ್ಟ ನಂತರ ಡೇಟಿಂಗ್ ವಿಚಾರವಾಗಿ ಮತ್ತೆ ಸುದ್ದಿಯಾದರು. ಅದರಲ್ಲೂ ವಿಜಯ್ ದೇವರಕೊಂಡ ಜೊತೆ ಇವರು ಹೆಸರು ತಳುಕು ಹಾಕಿಕೊಂಡ ನಂತರ ಮತ್ತೆ ಮತ್ತೆ ಮದುವೆ ವಿಚಾರ ಚಾಲ್ತಿಗೆ ಬಂತು.

rashmika mandanna

ರಶ್ಮಿಕಾ ಪತ್ರಕರ್ತರಿಗೆ ಎದುರಾದಾಗೊಮ್ಮೆ ಮದುವೆ ವಿಚಾರ ಪ್ರಸ್ತಾಪವಾಗುತ್ತಿತ್ತು. ಲವ್, ಡೇಟಿಂಗ್ ಬಗ್ಗೆಯೂ ಪ್ರಶ್ನೆ ಕೇಳಲಾಗುತ್ತಿತ್ತು. ಎಲ್ಲದಕ್ಕೂ ತಣ್ಣಗೆ ನಗುತ್ತಾ ಸುಮ್ಮನಾಗುತ್ತಿದ್ದರು ಕೊಡಗಿನ ಬೆಡಗಿ. ಇದೇ ಮೊದಲ ಬಾರಿಗೆ ಅವರು ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮಗೆ ಈಗಾಗಲೇ ಗುಟ್ಟಾಗಿ ಮದುವೆ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಅವರ ಮಾತು ಅಸಂಖ್ಯಾತ ಅಭಿಮಾನಿಗಳಿಗೆ ತಲೆಕೆಡಿಸಿದೆ.

rashmika 1 1

ಇಂಥದ್ದೊಂದು ಶಾಕಿಂಗ್ ನ್ಯೂಸ್ ಕೊಟ್ಟ ರಶ್ಮಿಕಾ ಮತ್ತೆ ಮಗುಳ್ನಕ್ಕು ತಾನು ಯಾರೊಂದಿಗೆ ಮದುವೆ ಆಗಿದ್ದೇನೆ ಎನ್ನುವ ವಿಚಾರವನ್ನೂ ಬಹಿರಂಗ ಪಡಿಸಿದ್ದಾರೆ. ಸ್ಟಾರ್ ನಟಿಯ ಮದುವೆ ಆಗೋ ಯೋಗ ಕೂಡಿ ಬಂದಿದ್ದು ನರುಟೊಗೆ ಎನ್ನುವುದು ವಿಶೇಷ. ಈಗಾಗಲೇ ಇದೇ ನರುಟೊ ಜೊತೆ ರಶ್ಮಿಕಾ ಡ್ಯುಯೆಟ್ ಕೂಡ ಹಾಡಿದ್ದಾರೆ.

ಈ ನರುಟೊ ಯಾರು ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ. ಈ ನರುಟೊ (Naruto) ಬೇರೆ ಯಾರೂ ಅಲ್ಲ, ಫೇಮಸ್ ಎನಿಮೆ ಕಾರ್ಟೂನ್ ಸೀರಿಸ್ ನಲ್ಲಿ ಬರುವ ಒಂದು ಪಾತ್ರವಷ್ಟೆ. ಆ ಪಾತ್ರದ ಮೇಲೆ ರಶ್ಮಿಕಾಗೆ ಎಲ್ಲಿಲ್ಲದ ಕ್ರಶ್. ಹಾಗಾಗಿ ಅದರೊಂದಿಗೆ ರಶ್ಮಿಕಾ ಸೀಕ್ರೆಟ್ ಆಗಿ ಮದುವೆ ಆಗಿದ್ದಾರಂತೆ. ಈ ವಿಷಯವನ್ನು ಅವರು ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದಾರೆ. ಈ ಮಾತುಗಳಿಗೆ ಮತ್ತೋರ್ವ ಖ್ಯಾತ ನಟ ಟೈಗರ್ ಶ್ರಾಫ್ ಸಾಕ್ಷಿಯಾಗಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article