ಬೆಂಗಳೂರು: ರಾಜ್ಯದಲ್ಲಿ ವರ್ಗಾವಣೆ ಪರ್ವ ಜೋರಾಗಿದ್ದು ಈ ಮಧ್ಯೆ ಕೆಲ ಗೊಂದಲವೂ ಏರ್ಪಟ್ಟಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಗೃಹಸಚಿವ ಪರಮೇಶ್ವರ್ (Parameshwar) ರಹಸ್ಯ ಸಭೆ ನಡೆಸಿದರೂ ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆ (Police Inspector Transfer) ಸಂಬಂಧ ಹಲವು ಪ್ರಶ್ನೆಗಳು ಎದ್ದಿದೆ.
211 ಇನ್ಸ್‌ಪೆಕ್ಟರ್ ವರ್ಗಾವಣೆಯಲ್ಲಿ 5 ಡಜನ್‍ಗೂ ಹೆಚ್ಚು ವರ್ಗಾವಣೆಗೆ ತಡೆ ಏಕೆ? ಸರ್ಕಾರದಲ್ಲಿ ಯಾರು, ಯಾರಿಗಾಗಿ, ಯಾವ ಜಾಗ ಕೇಳುತ್ತಿದ್ದಾರೆ ಎಂಬುದು ಈಗ ಕುತೂಹಲದ ಪ್ರಶ್ನೆ. ಇದನ್ನೂ ಓದಿ: ಸೌಜನ್ಯಾ ಕೇಸ್ ಮರು ತನಿಖೆಯಾಗ್ಲಿ- ಧರ್ಮಸ್ಥಳದ ಗೌರವ, ಪ್ರತಿಷ್ಠೆಯನ್ನ ಹೇಗಾದ್ರೂ ಕಾಪಾಡ್ತೇವೆ: VHP
ವರ್ಗಾವಣೆ ವಿಚಾರದಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಆ ವೇಳೆ ಎಚ್ಚರಿಕೆಯಿಂದ ಹೆಜ್ಜೆ ಇಡಲು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಪೊಲೀಸ್ ವರ್ಗಾವಣೆಯಲ್ಲಿ ಶಾಸಕರು, ಪಕ್ಷದ ಹಿರಿಯರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ರಹಸ್ಯ ಸಭೆ ನಡೆಸಿ ಫೈನಲ್ ಮಾಡಿದ್ದರು.
ಪೊಲೀಸ್ ಇಲಾಖೆಯ ವರ್ಗಾವಣೆಯನ್ನು ಅಳೆದು ತೂಗಿ ಸಿದ್ದು, ಪರಂ ನಿರ್ಧಾರ ಮಾಡಿದ್ದರೂ ವರ್ಗಾವಣೆ ಆದೇಶದ ಬಳಿಕ ಕೆಲ ಪ್ರಭಾವಿ ಸಚಿವರು, ಕೆಲ ಶಾಸಕರು ಆಕ್ಷೇಪ ಎತ್ತಿದ್ದರು.
ವಿಶೇಷವಾಗಿ ಬೆಂಗಳೂರಿಗೆ ಸಂಬಂಧಪಟ್ಟ ವರ್ಗಾವಣೆ ಬಗ್ಗೆಯೇ ಕೆಲ ಪ್ರಭಾವಿಗಳ ಆಕ್ಷೇಪ ಹಿನ್ನೆಲೆ ಇದ್ದಕ್ಕಿದ್ದಂತೆ 60ಕ್ಕೂ ಹೆಚ್ಚು ವರ್ಗಾವಣೆಗಳನ್ನ ಪೊಲೀಸ್ ಇಲಾಖೆ ತಡೆ ಹಿಡಿದಿದೆ. ದೆಹಲಿ ಪ್ರವಾಸದಿಂದ ಸಿದ್ದರಾಮಯ್ಯ ವಾಪಸ್ ಆದ ಬಳಿಕ ತಡೆಹಿಡಿದ ವರ್ಗಾವಣೆ ಮರುಪರಿಶೀಲನೆ ಮಾಡುವ ಸಾಧ್ಯತೆ ಇದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]