ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಕನಸಲ್ಲೂ ನಾನು ಬರುತ್ತೇನೆ ಎಂದು ಚಿಕ್ಕಬಳ್ಳಾಪುರದಲ್ಲಿ (Chikkaballapura) ಮಾಜಿ ಸಚಿವ ಡಾ.ಕೆ.ಸುಧಾಕರ್ (K.Sudhakar) ಲೇವಡಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಗೃಹಕಚೇರಿಯಲ್ಲಿ ಮಾತನಾಡಿದ ಅವರು, ಶಾಸಕ ಪ್ರದೀಪ್ ಈಶ್ವರ್ ತಾನು ಲಾಟರಿ ಎಂಎಲ್‌ಎ ಎಂದು ಹೇಳಿಕೊಂಡಿದ್ದಾರೆ. ಲಾಟರಿ ಹೊಡೆದು ಆಗಿದ್ದರೂ ಯಾರೂ ಕೂಡ ಹಾಗೆ ಹೇಳಿಕೊಳ್ಳುವುದಿಲ್ಲ. ವಿಶ್ವದಲ್ಲೇ ಆ ರೀತಿ ಹೇಳಿಕೊಳ್ಳುವ ಶಾಸಕ ಇವರೊಬ್ಬರೇ ಎಂದು ಕುಟುಕಿದರು. ಇದನ್ನೂ ಓದಿ: ಸ್ವಗ್ರಾಮ ಪೆರೇಸಂದ್ರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ಗೆ ಮುಖಭಂಗ?
ಸುಧಾಕರ್ ಕಾಂಗ್ರೆಸ್ ಎಂಪಿ ಟಿಕೆಟ್ ಕೇಳಿದ್ದಾರೆ ಎಂಬ ಪ್ರದೀಪ್ ಈಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರದೀಪ್ ಈಶ್ವರ್‌ಗೆ ಅರಿವಿನ ಕೊರತೆ ಇದೆ. ಪ್ರದೀಪ್ ಈಶ್ವರ್ ಗೆ ಭಯ ಬೇಡ. ನಾನು ಕಾಂಗ್ರೆಸ್‌ಗೆ (Congress) ಬಂದರೆ ಅವರಿಗೆ ಎಲ್ಲಿ ತೊಂದರೆ, ಅಭದ್ರತೆ ಆಗುತ್ತದೆ ಎಂದು ಭಯ ಬೀಳುತ್ತಿದ್ದಾರೆ. ನೀವು ಎಲ್ಲಿದ್ದೀರೋ ಅಲ್ಲೇ ಇರಿ. ಅಲ್ಲೇ ನಿಮ್ಮನ್ನು ಮಣಿಸುವ ಕೆಲಸ ಮಾಡುತ್ತೇನೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಸ್ವಾರ್ಥಕ್ಕಾಗಿ ಘೋಷಿಸಿದ ಗ್ಯಾರೆಂಟಿ ಯೋಜನೆ ಅನ್ನೋ ಪ್ರಧಾನಿ ಹೇಳಿಕೆಗೆ ಸಿಎಂ ತಿರುಗೇಟು
Web Stories