ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ (Congress- BJP) ಹೊರತುಪಡಿಸಿ ಪ್ರತ್ಯೇಕವಾಗಿ 3 ಶಕ್ತಿ ಸ್ಥಾಪನೆ ಆಗಲಿದೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ ನಿಂದ ಮುಸ್ಲಿಂ ಸಮುದಾಯದವರು ಪಕ್ಷಾತೀತವಾಗಿ ಪ್ರವಾಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರತ್ಯೇಕ ಶಕ್ತಿ ಸ್ಥಾಪನೆಗಾಗಿ ಅವರು ಪ್ರವಾಸ ಹೋಗುತ್ತಿದ್ದಾರೆ. ಬಿಜೆಪಿ-ಕಾಂಗ್ರೆಸ್ ಹೊರತಾಗಿ ಪ್ರತ್ಯೇಕ ಮೂರನೇ ಶಕ್ತಿ ರಚನೆಗೆ ಪ್ರವಾಸ ಮಾಡುತ್ತಿದ್ದಾರೆ. ಪಕ್ಷಾತೀತವಾಗಿ ಮುಸ್ಲಿಂ ಸಂಘಗಳು ರಾಜ್ಯಪ್ರವಾಸ ಹೋಗುತ್ತಿದ್ದಾರೆ ಅಂತ ಮಾಹಿತಿ ಕೊಟ್ಟರು. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟಿದ್ದಕ್ಕೆ ಪಶ್ಚಾತ್ತಾಪ ಇಲ್ಲ, ಐ ಲವ್ ಮೋದಿ : ಸಿಎಂ ಇಬ್ರಾಹಿಂ
ಮುಸ್ಲಿಂ ಸಮುದಾಯದ ಎಲ್ಲಾ ಸಂಘಗಳು ಇದರಲ್ಲಿ ಇರಲಿದ್ದಾರೆ. ನಮ್ಮನ್ನು ಪಕ್ಷಾತೀತವಾಗಿ ಬನ್ನಿ ಅಂತ ಕರೆದಿದ್ದಾರೆ. ರಾಜ್ಯದಲ್ಲಿ 100% ಮತದಾನ ಆಗಬೇಕು. ಪಕ್ಷಗಳ ಅಭಿವೃದ್ಧಿ, ಪ್ರಣಾಳಿಕೆ ನೋಡಿ ಜನ ಮತ ಹಾಕಬೇಕು. ಚುನಾವಣೆ ಸಮಯದಲ್ಲಿ ಹಣ ಕೇಳಬಾರದು. ಹಣಕ್ಕೆ ಮತ ಹಾಕಬಾರದು. ಉತ್ತಮ ಅಭ್ಯರ್ಥಿಗಳ ಆಯ್ಕೆ ಮಾಡಬೇಕು ಎಂಬ ಅಜೆಂಡಾ ಇಟ್ಟುಕೊಂಡು ಮುಸ್ಲಿಂ ಸಂಘಗಳು ರಾಜ್ಯ ಪ್ರವಾಸ ಮಾಡಲಿವೆ ಅಂತ ತಿಳಿಸಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]