ವಿಶ್ವ ನಾಯಕರೂ ಮೋದಿಯನ್ನ ʻಬಾಸ್‌ʼ ಅಂತಾರೆ – ಮಹಾರಾಷ್ಟ್ರ ಸಿಎಂ ಶ್ಲಾಘನೆ

Public TV
1 Min Read
Modi

– 15 ಸಾವಿರ ಕೋಟಿ ರೂ. ಮೌಲ್ಯದ ಕಾಮಗಾರಿಗೆ ಮೋದಿ ಚಾಲನೆ

ಮುಂಬೈ: ಮೋದಿಯನ್ನ ಗೌರವದಿಂದ ನಡೆಸಿಕೊಳ್ಳುವ ವಿಶ್ವನಾಯಕರೂ ಕೂಡ ʻಬಾಸ್‌ʼ ಅಂತಾ ಕರೆಯುತ್ತಾರೆ ಎಂದು ಮಹಾರಾಷ್ಟ್ರ (Maharashtra) ಸಿಎಂ ಏಕನಾಥ್‌ ಶಿಂದೆ (Eknath Shinde) ಶ್ಲಾಘಿಸಿದ್ದಾರೆ.

ಪುಣೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಲೋಕಮಾನ್ಯ ತಿಲಕ್‌ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮೋದಿ ಅವರನ್ನ ವಿಶ್ವ ನಾಯಕರೂ ಜಾಗತಿಕ ಮಟ್ಟದಲ್ಲಿ ಗೌರವಿಸುತ್ತಿರುವುದು ದೇಶಕ್ಕೆ ಹೆಮ್ಮೆಯ ವಿಷಯ. ಹಲವು ದೇಶಗಳ ಗಣ್ಯರು ಮೋದಿಯವರನ್ನ ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ನಾವು ಕೂಡ ಅದನ್ನ ನೋಡಿದ್ದೇವೆ. ಕೆಲವರು ಆಟೋಗ್ರಾಫ್‌ ತೆಗೆದುಕೊಂಡ್ರೆ, ಇನ್ನೂ ಕೆಲವರು ಮೋದಿಯನ್ನ ಬಾಸ್‌ ಅಂತಾ ಕರೆಯುತ್ತಾರೆ ಎಂದು ಶ್ಲಾಘಿಸಿದ್ದಾರೆ.

NARENDRA MODI SHARAD PAWAR

ಪ್ರಶಸ್ತಿ ಸ್ವೀಕರಿಸಿದ ಬಳಿಕ, ಬಹುಮಾನದ ಹಣವನ್ನ ನವಾಮಿ ಗಂಗೆ ಯೋಜನೆಗೆ ನೀಡುವುದಾಗಿ ಮೋದಿ ಘೋಷಿಸಿದರು. ವೇದಿಕೆ ಕಾರ್ಯಕ್ರಮದ ಬಳಿಕ ನೂತನ ಮೆಟ್ರೋ ರೈಲು ಸೇವೆ ಹಾಗೂ ಇತರ 15 ಸಾವಿರ ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ರಾಜಕೀಯ ಎದುರಾಳಿಗಳು- ಪರಸ್ಪರ ಕೈಕುಲುಕಿದ ಶರದ್ ಪವಾರ್, ಮೋದಿ

ಕಳೆದ 9 ತಿಂಗಳಲ್ಲಿ 4 ಬಾರಿ ರಾಜ್ಯಕ್ಕೆ ಭೇಟಿ ನೀಡಿರುವ ಪಿಎಂ ಮೋದಿ, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಇದು ನಮಗೆ ಹೆಚ್ಚಿನ ಶಕ್ತಿ ನೀಡಿದೆ. ಮೋದಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡ್ತಿದ್ದಾರೆ. ಮಹಾರಾಷ್ಟ್ರದಿಂದ ಒಂದು ಟ್ರೆಲಿಯನ್‌ ಡಾಲರ್‌ ಆರ್ಥಿಕತೆ (Economy) ಗುರಿ ಸಾಧಿಸಲು ಕೇಂದ್ರ ಸರ್ಕಾರವೂ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಶರದ್ ಪವಾರ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೋದಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ಪರಿಸರ ಸ್ನೇಹಿ ಬೋಯಿಂಗ್‌ ಹೊಂದಿರುವ 20ನೇ ವಿಮಾನ ಪರಿಚಯಿಸಿದ ಆಕಾಶ ಏರ್‌ಲೈನ್‌

Web Stories

Share This Article