ಮತ್ತೆ ವರುಣ್‌ ಧವನ್‌ ಜೊತೆ ಆಲಿಯಾ ಭಟ್ ರೊಮ್ಯಾನ್ಸ್

Public TV
1 Min Read
alia bhatt

ಬಾಲಿವುಡ್‌ನ (Bollywood) ತೆರೆ ಮೇಲಿನ ಬೆಸ್ಟ್ ಜೋಡಿ ಅಂದರೆ ವರುಣ್ ಧವನ್-ಆಲಿಯಾ ಭಟ್. ಮತ್ತೆ ವರುಣ್-ಆಲಿಯಾ ಭಟ್ (Alia Bhatt) ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

alia bhatt

2012ರಲ್ಲಿ ‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾ ಮೂಲಕ ವರುಣ್ ಧವನ್(Varun Dhawan)- ಆಲಿಯಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇಬ್ಬರ ಕೆಮಿಸ್ಟ್ರಿ ಈ ಸಿನಿಮಾದಲ್ಲಿ ಮೋಡಿ ಮಾಡಿತ್ತು. ಬಳಿಕ ಕಳಂಕ್, ಬದ್ರಿನಾಥ್ ಕಿ ದುಲ್ಹನಿಯಾ, ಹಮ್ಟಿ ಶರ್ಮಾ ಕಿ ದುಲ್ಹನಿಯಾ ಸಿನಿಮಾಗಳಲ್ಲಿ ವರುಣ್-ಆಲಿಯಾ ಜೊತೆಯಾಗಿ ಮಿಂಚಿದ್ದಾರೆ. ತೆರೆ ಮೇಲಿನ ಸಕ್ಸಸ್‌ಫುಲ್ ಜೋಡಿ ಅಂದರೆ ತಪ್ಪಾಗಲಾರದು. ಇದನ್ನೂ ಓದಿ:ಧನುಷ್‌ಗೆ ಜೋಡಿಯಾದ ‘ಬುಟ್ಟ ಬೊಮ್ಮ’ ಖ್ಯಾತಿಯ ಅನಿಕಾ

alia bhatt 1

ಇದೀಗ ವರುಣ್-ಆಲಿಯಾ ಮೇನಿಯಾ ಶುರುವಾಗಲಿದೆ. ಬವಾಲ್ (Bawal) ಚಿತ್ರದ ನಂತರ ವರುಣ್ ಧವನ್ ಆಲಿಯಾ ಭಟ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ನಯಾ ಪ್ರೇಮಕಥೆಯ ಜೊತೆ ವರುಣ್-ಆಲಿಯಾ ಫುಲ್ ಮನರಂಜನೆ ಕೊಡೋದು ಗ್ಯಾರೆಂಟಿ.

ಶಶಾಂಕ್ ಖೈತಾನ್ ನಿರ್ದೇಶನದ ‘ದುಲ್ಹನಿಯಾ ಪಾರ್ಟ್ 3’ (Dulhania 3) ವರುಣ್-ಆಲಿಯಾ ರೊಮ್ಯಾನ್ಸ್ ಮಾಡಲಿದ್ದಾರೆ. ಭಿನ್ನ ಕಥೆ-ಪಾತ್ರದ ಮೂಲಕ ಬಿಟೌನ್‌ನ ಸಕ್ಸಸ್‌ಫುಲ್ ಜೋಡಿ ಬರುತ್ತಿದೆ. ರಣ್‌ವೀರ್-ಆಲಿಯಾ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಪ್ರೇಕ್ಷಕರಿಗೆ ಹಿಡಿಸಿದೆ. ಹಾಗಾಗಿ ಹೊಸ ಪ್ರಾಜೆಕ್ಟ್ಗಳತ್ತ ಆಲಿಯಾ ಮುಖ ಮಾಡಿದ್ದಾರೆ. ‘ದುಲ್ಹನಿಯಾ’3ನಲ್ಲಿ ನಟಿಸಲು ಆಲಿಯಾ ಓಕೆ ಎಂದಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಅಪ್‌ಡೇಟ್ ಸಿಗಲಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article