ತನ್ನ ಪತ್ನಿ ಜೊತೆ ಹೆಚ್ಚಾಗಿ ಫೋನ್‌ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊಲೆ

Public TV
1 Min Read
bengaluru chikkajala

ಬೆಂಗಳೂರು: ತನ್ನ ಹೆಂಡತಿಯೊಂದಿಗೆ ಫೋನ್‌ನಲ್ಲಿ ಹೆಚ್ಚಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಚಿಕ್ಕಪ್ಪನ ಮಗನಿಂದಲೇ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಚಿಕ್ಕಜಾಲ (Chikkajala) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂದೀಪ್ ಕುಮಾರ್ ಕೊಲೆಯಾದ ವ್ಯಕ್ತಿಯಾದರೆ, ಆತನ ಚಿಕ್ಕಪ್ಪನ ಮಗ ಶುಬೋದ್ ಮಂಡಲ್ ಹತ್ಯೆ ನಡೆಸಿದ ಆರೋಪಿ. ಇಬ್ಬರು ಕೂಡಾ ಬಿಹಾರ ಮೂಲದವರು.

KILLING CRIME

ಸಂದೀಪ್ ಕೂಲಿ ಕೆಲಸಕ್ಕಾಗಿ ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಚಿಕ್ಕಜಾಲದಲ್ಲಿ ರೂಂ ಮಾಡಿಕೊಂಡು ಸ್ನೇಹಿತರೊಂದಿಗೆ ವಾಸವಿದ್ದ. ಕಳೆದ 3 ತಿಂಗಳ ಹಿಂದಷ್ಟೇ ಶುಬೋದ್ ಕೂಡಾ ಬೆಂಗಳೂರಿಗೆ ಬಂದಿದ್ದ. ಈ ವೇಳೆ ಸಂದೀಪ್‌ಗೆ ತನ್ನ ಪತ್ನಿ ಜೊತೆ ಶುಬೋದ್ ಫೋನ್‌ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದುದು ತಿಳಿದುಬಂದಿತ್ತು. ಈ ನಡುವೆ ಸಂದೀಪ್‌ಗೆ ತನ್ನ ಪತ್ನಿ ಜೊತೆ ಶುಬೋದ್ ಅಕ್ರಮ ಸಂಬಂಧ ಹೊಂದಿರೋ ಶಂಕೆಯೂ ಮೂಡಿತ್ತು. ಇದನ್ನೂ ಓದಿ: ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಸಾವು

ಶುಕ್ರವಾರ ರಾತ್ರಿ ಮದ್ಯಪಾನ ಮಾಡುತ್ತಿದ್ದ ವೇಳೆ ಇಬ್ಬರ ನಡುವೆ ಇದೇ ವಿಚಾರವಾಗಿ ಜಗಳ ಪ್ರಾರಂಭವಾಗಿತ್ತು. ಜಗಳದ ಬಳಿಕ ಮಲಗಿದ್ದ ಸಂದೀಪ್ ಕುಮಾರ್ ಮೇಲೆ ಶುಬೋದ್ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಬಳಿಕ ಸ್ಥಳದಿಂದ ಆತ ಪರಾರಿಯಾಗಿದ್ದ.

ಸಂದೀಪ್ ಕೊಲೆಯಾದ 24 ಗಂಟೆಯವರೆಗೂ ಆತನ ಶವ ಅದೇ ರೂಂನಲ್ಲಿ ಇತ್ತು. ಶನಿವಾರ ರಾತ್ರಿ ಸಂದೀಪ್ ಸ್ನೇಹಿತ ರೂಂಗೆ ಬಂದಾಗ ಆತ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೊಬೈಲ್ ಚಾರ್ಜರ್ ಕೊಡ್ಲಿಲ್ಲ ಎಂದು ನೇಣಿಗೆ ಶರಣಾದ ಯುವಕ

ಬಳಿಕ ಚಿಕ್ಕಜಾಲ ಪೊಲೀಸರು ತನಿಖೆ ನಡೆಸಿದ್ದು, ಹತ್ಯೆಯ ಅಸಲಿ ಕಹಾನಿ ಬಯಲಿಗೆಳೆದಿದ್ದಾರೆ. ತಲೆಮರೆಸಿಕೊಳ್ಳಲು ಪ್ರಯತ್ನಿಸಿದ್ದ ಆರೋಪಿ ಶುಬೋದ್ ಮಂಡಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಚಿಕ್ಕಜಾಲ ಪೊಲೀಸರಿಂದ ತನಿಖೆ ಮುಂದುವರಿದಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article