ನವದೆಹಲಿ: ಟೀಂ ಇಂಡಿಯಾ (Team India) ಅಭಿಮಾನಿಗಳ ಟೀಕೆಗೆ ಮುಖ್ಯ ಕೋಚ್ ದ್ರಾವಿಡ್ (Rahul Dravid) ಪ್ರತಿಕ್ರಿಯೆ ಕೊಟ್ಟಿದ್ದಾರೆ. ವಿಶ್ವಕಪ್ ಹಾಗೂ ಏಷ್ಯಾ ಕಪ್‍ಗೆ ಎರಡು ಪಂದ್ಯಗಳು ಬಾಕಿ ಇರುವಾಗ ವಿರಾಟ್ ಹಾಗೂ ರೋಹಿತ್ ಅವರನ್ನು ಆಡಿಸಿದರೆ ನಮಗೆ ಸರಿಯಾದ ಉತ್ತರ ಸಿಗುವುದಿಲ್ಲ. ನಾನು ಯಾವಾಗಲು ದೊಡ್ಡ ಪ್ರತಿಫಲವನ್ನೇ ನೋಡಲು ಬಯಸುತ್ತೇನೆ. ಹೊಸ ಆಟಗಾರರಿಗೆ ಅವಕಾಶ ಸಿಗಲಿ ಎಂದು ಆಡಿಸಲಾಗಿದೆ ಎಂದಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ಹಾಗೂ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (West Indies) ವಿರುದ್ಧ ಗೆಲುವು ಸಾಧಿಸಿದ್ದ ಟೀಂ ಇಂಡಿಯಾಕ್ಕೆ 2ನೇ ಏಕದಿನ ಪಂದ್ಯದಲ್ಲಿ ಕೈ ಸುಟ್ಟುಕೊಂಡಿದೆ. ಈ ಮೂಲಕ ಈಗ ಸರಣಿ 1-1 ರಲ್ಲಿ ಸಮಬಲ ಸಾಧಿಸಿದೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 48 ರನ್ ಚಚ್ಚಿದ ಆಫ್ಘನ್ ಬ್ಯಾಟರ್ – ಮೈದಾನದಲ್ಲೇ ಕಣ್ಣೀರಿಟ್ಟ ಬೌಲರ್
ಸೋಲಿನ ನಂತರ ಕೋಪಗೊಂಡ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಹರಿಹಾಯ್ದಿದ್ದರು. ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರು ಹಿರಿಯ ಬ್ಯಾಟರ್‌ಗಳಿಗೆ ವಿಶ್ರಾಂತಿ ನೀಡಿದ ಕಾರಣಕ್ಕೆ ತಂಡ ಸೋಲು ಕಂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೋಚ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ನಿರ್ಧಾರಗಳು 2007ರ ವಿಶ್ವಕಪ್‍ನ ಇತಿಹಾಸ ಮರುಕಳಿಸಬಹುದೆಂದು ಕ್ರಿಕೆಟ್ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ. ಟೀಂ ಇಂಡಿಯಾ 16 ವರ್ಷಗಳ ಹಿಂದೆ ತಮ್ಮ ಅತ್ಯಂತ ಕೆಟ್ಟ ವಿಶ್ವಕಪ್ ಪ್ರದರ್ಶನ ಮಾಡಿತ್ತು.
ಮೊದಲ ಪಂದ್ಯದಲ್ಲಿ ರೋಹಿತ್ 6ನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿದಿದ್ದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್‍ಗೆ ಬಂದಿರಲಿಲ್ಲ. ಟೀಂ ಇಂಡಿಯಾ 115 ರನ್‍ಗಳ ಗುರಿ ತಲುಪಲು ಸಾಕಷ್ಟು ಪ್ರಯಾಸಪಟ್ಟಿತ್ತು.
2ನೇ ಏಕದಿನ ಪಂದ್ಯದಲ್ಲೂ ಭಾರತದ ಬ್ಯಾಟಿಂಗ್ ಮತ್ತೆ ಕಳಪೆ ಪ್ರದರ್ಶನ ನೀಡಿದೆ. ಈ ಬಾರಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 40.5 ಓವರ್‌ಗಳಲ್ಲಿ 181 ರನ್‍ಗಳಿಗೆ ಆಲೌಟ್ ಆಗಿತ್ತು. ಇದನ್ನೂ ಓದಿ: ಧೋನಿ ವಿಮಾನದಲ್ಲಿ ಮಲಗಿದ್ದಾಗ ಕದ್ದು ಫೋಟೋ ಕ್ಲಿಕ್ – ಗಗನಸಖಿ ನಿರ್ಧಾರ ಸರಿಯೇ?
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]