ವಾಷಿಂಗ್ಟನ್: ಡೆಲ್ಟಾ ಏರ್‌ಲೈನ್ಸ್ ವಿಮಾನದಲ್ಲಿ ಪಾನಮತ್ತನಾಗಿದ್ದ ಪ್ರಯಾಣಿಕನೊಬ್ಬ (Delta Passenger), ಹರಿಹರೆಯದ ಹುಡುಗಿ ಮತ್ತು ಆಕೆಯ ತಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣವೆಂದು ಪರಿಗಣಿಸಿರುವ ನಾಗರಿಕ ವಿಮಾನಯಾನ ಸಂಸ್ಥೆಯು ಏರ್‌ಲೈನ್ಸ್‌ಗೆ (Delta Air Lines) 2 ದಶಲಕ್ಷ ಡಾಲರ್ (16.45 ಕೋಟಿ ರೂ.) ದಂಡ ವಿಧಿಸಿದೆ. ಜೊತೆಗೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸೂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವರ್ಷ ಜುಲೈ 26 ರಂದು ನಡೆದ ಘಟನೆ ಸಂಬಂಧ ತಾಯಿ-ಮಗಳನ್ನ ವಿಚಾರಣೆಗೆ ಕರೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತರು ಪ್ರಯಾಣಿಸಿದ ವಿಮಾನವು ನ್ಯೂಯಾರ್ಕ್‌ನ JFK ವಿಮಾನ ನಿಲ್ದಾಣದಿಂದ (FK Airport) ಗ್ರೀಸ್‌ನ ಅಥೆನ್ಸ್‌ಗೆ ಹೊರಟಿತ್ತು. ಸುಮಾರು 9 ಗಂಟೆಗಳ ಪ್ರಯಾಣ ಮಾಡಬೇಕಿತ್ತು. ಈ ವೇಳೆ ಸಂತ್ರಸ್ತರು ಸಿಬ್ಬಂದಿ ಸಹಾಯ ಕೋರಿದರೂ ಅದನ್ನು ನಿರ್ಲಕ್ಷಿಸಲಾಯಿತು. ಮೊದಲೇ ಪಾನಮತ್ತನಾಗಿದ್ದ ವ್ಯಕ್ತಿಗೆ ಇನ್ನಷ್ಟು ಮದ್ಯ ನೀಡಿದ್ದರು ಎನ್ನಲಾಗಿದೆ. ಈ ಸಂಬಂಧ ನ್ಯೂಯಾರ್ಕ್‌ನ ಈಸ್ಟರ್ನ್ ಜಿಲ್ಲೆಯಲ್ಲಿ ಕೇಸ್ ದಾಖಲಾಗಿತ್ತು. ಪಾನಮತ್ತ ವ್ಯಕ್ತಿ ಲೈಂಗಿಕ ದೌರ್ಜನ್ಯ ನಡೆಸಿದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸದೇ ಆತನನ್ನ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಆಸ್ಟ್ರೇಲಿಯಾ ಸೇನಾ ಹೆಲಿಕಾಪ್ಟರ್ ಪತನ – ನಾಲ್ವರು ಸಿಬ್ಬಂದಿ ನಾಪತ್ತೆ
9 ಗಂಟೆ ಪ್ರಯಾಣದ ಅವಧಿಯಲ್ಲಿ ನಡೆದಿದ್ದೇನು?
ನ್ಯೂಯಾರ್ಕ್‌ನಿಂದ ಗ್ರೀಸ್‌ಗೆ ಹೊರಟಿದ್ದ ವಿಮಾನ ಸುಮಾರು 9 ಗಂಟೆ ಪ್ರಯಾಣ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಕಂಠಪೂರ್ತಿ ಕುಡಿದಿದ್ದ ಪ್ರಯಾಣಿಕನನ್ನ, ತಾಯಿ ಮತ್ತು ಮಗಳ ಪಕ್ಕದಲ್ಲೇ ಕೂರಿಸಿದ್ದಾರೆ. ಬಳಿಕ ಮದ್ಯ ಸೇವನೆ ಮಾಡ್ತಿದ್ದ ಅವನು 16 ವರ್ಷದ ಹುಡುಗಿಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದಾನೆ. ಆಕೆ ಮಾತನಾಡಲು ತಿರಸ್ಕರಿಸಿದಾಗ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾನೆ. ಅಶ್ಲೀಲವಾಗಿ ಸನ್ನೆ ಮಾಡಿದ್ದಾನೆ. ಆಕೆಯ ವಿಳಾಸ ತಿಳಿಸುವಂತೆ ಒತ್ತಾಯಿಸಿದ್ದಾನೆ. ಬಳಿಕ ಏಕಾಏಕಿ ಬೆನ್ನಿನ ಮೇಲೆ ಕೈಹಾಕಿದ್ದಾನೆ. ಈ ವೇಳೆ ಹುಡುಗಿಯ ತಾಯಿ ಮಧ್ಯಪ್ರವೇಶಿಸಿದಾಗ ಆಕೆಯ ತೋಳನ್ನು ಎಳೆದು ಕೂಗಾಡಿದ್ದಾನೆ. ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾಗೆ ಚೀನಾ ಶಸ್ತ್ರಾಸ್ತ್ರ ಪೂರೈಕೆ: ಅಮೆರಿಕ ವರದಿ
ಕುಡಿದ ವ್ಯಕ್ತಿ ಜೋರಾಗಿ ಕಿರುಚಾಡುತ್ತಿದ್ದರಿಂದ ಇತರ ಪ್ರಯಾಣಿಕರು ಘಟನೆಯನ್ನು ಗಮನಿಸುತ್ತಿದ್ದರು. ಆಕೆ ಮಹಿಳಾ ಸಿಬ್ಬಂದಿ ಸಹಾಯ ಕೋರಿದರೂ ತಾಳ್ಮೆಯಿಂದಿರಿ ಅಂತಾ ತಮ್ಮ ಪಾಡಿಗೆ ತಾವಿದ್ದರು. ಅಲ್ಲದೇ ಮೊದಲೇ ಪಾನಮತ್ತನಾಗಿದ್ದವನಿಗೆ ಮತ್ತೆ ಮತ್ತೆ ಡ್ರಿಂಕ್ಸ್ ಕೊಡುತ್ತಿದ್ದರು. ಪ್ರಯಾಣ ಮುಗಿಯುವವರಿಗೂ ಆತ ತೊಂದರೆ ಕೊಡುತ್ತಲೇ ಬಂದಿದ್ದಾನೆ. ಕೆಟ್ಟ ಕೆಟ್ಟ ಭಾಷೆಗಳನ್ನ ಪ್ರಯೋಗಿಸಿ ಬೈದಿದ್ದಾನೆ. ವಿಮಾನಯಾನ ಸಂಸ್ಥೆಯೂ ಮಹಿಳಾ ಅಟೆಂಡರ್‌ಗಳು ಮತ್ತು ವಿಮಾನ ಸಿಬ್ಬಂದಿಗೂ ದಂಡ ವಿಧಿಸಲಾಗಿದೆ. ಆದ್ರೆ ಡೆಲ್ಟಾ ಏರ್‌ಲೈನ್ಸ್ ತನ್ನ ಮೇಲಿನ ಆರೋಪವನ್ನ ತಳ್ಳಿಹಾಕಿದೆ.
Web Stories