ಕ್ರಿಕೆಟ್ ನಿಯಮ ಉಲ್ಲಂಘನೆ ಹರ್ಮನ್‍ಪ್ರೀತ್ ಅಮಾನತು – ಮೌನ ಮುರಿದ ಜಯ್ ಶಾ

Public TV
2 Min Read
Harmanpreet Kaur 1

ನವದೆಹಲಿ: ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಹರ್ಮನ್‍ಪ್ರೀತ್ ಕೌರ್‌ರನ್ನು (Harmanpreet Kaur) ಎರಡು ಪಂದ್ಯಗಳಿಗೆ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ತಮ್ಮ ನಿಲುವಿನ ಬಗ್ಗೆ ಮೌನ ಮುರಿದಿದ್ದಾರೆ.

ಢಾಕಾದಲ್ಲಿ ನಡೆದ ಘಟನೆಯ ಕುರಿತು ಬಿಸಿಸಿಐನ ನಿಲುವನ್ನು ಶಾ ಪ್ರಕಟಿಸಿದ್ದಾರೆ. ಮೇಲ್ಮನವಿಯ ಸಮಯ ಮುಗಿದಿರುವುದರಿಂದ ಹರ್ಮನ್‍ಪ್ರೀತ್ ಅವರ ನಿಷೇಧವನ್ನು ಹಿಂತೆಗೆದುಕೊಳ್ಳಲು ಅಥವಾ ಸಡಿಲಿಸಲು ಮಂಡಳಿಯು ಮನವಿ ಮಾಡುವುದಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಮೋಸದಾಟವಾಡಿತಾ ಪಾಕ್‌? ಕಂಡೂ ಕಾಣದಂತಿದ್ರಾ ಅಂಪೈರ್‌? – ಏಷ್ಯಾಕಪ್‌ ಸೋಲಿನ ಬಳಿಕ ಮತ್ತೆ ವಿವಾದ!

ಮಂಡಳಿಯ ನಿರ್ದೇಶನದಂತೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಎನ್‍ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಹರ್ಮನ್‍ಪ್ರೀತ್ ಅವರಿಗೆ ಸಲಹೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Harmanpreet Kaur

ಬಾಂಗ್ಲಾದೇಶದ ವಿರುದ್ಧದ ಐಸಿಸಿ ಮಹಿಳಾ ಚಾಂಪಿಯನ್‍ಶಿಪ್ ಸರಣಿಯ ಮೂರನೇ ಪಂದ್ಯದಲ್ಲಿ ಎರಡು ಪ್ರತ್ಯೇಕ ನೀತಿ ಸಂಹಿತೆ ಉಲ್ಲಂಘನೆಗಾಗಿ ಹರ್ಮನ್‍ಪ್ರೀತ್‍ಗೆ ದಂಡ ವಿಧಿಸಲಾಗಿದೆ. ಮೊದಲು ಕ್ಯಾಚ್ ನೀಡಿ ಔಟಾದ ಹತಾಶೆಯಲ್ಲಿ ಬ್ಯಾಟ್‍ನಿಂದ ವಿಕೆಟ್ ಉರುಳಿಸಿದ್ದರು.

ಪಂದ್ಯದ ನಂತರ ಹರ್ಮನ್ ಪ್ರೀತ್ ಅಂಪೈರ್ ಮಾನದಂಡವನ್ನು ಪ್ರಶ್ನಿಸಿದ್ದರು. ಇದಕ್ಕಾಗಿ ಆಟಗಾರರ ನೀತಿ ಸಂಹಿತೆಯ ಆರ್ಟಿಕಲ್ 2.8ನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಪಂದ್ಯದಲ್ಲಿ ಅಂಪೈರ್ ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ಹರ್ಮನ್‍ಪ್ರೀತ್‍ಗೆ ಮೊದಲ ತಪ್ಪಿಗಾಗಿ ಅವರ ಪಂದ್ಯದ ಶುಲ್ಕದ 25% ರಷ್ಟು ದಂಡ ವಿಧಿಸಲಾಯಿತು. ಅಲ್ಲದೇ ಒಂದು ಡಿಮೆರಿಟ್ ಅಂಕವನ್ನು ನೀಡಲಾಯಿತು. ಬಳಿಕ 2ನೇ ಹಂತದ ತಪ್ಪಿಗಾಗಿ ಪಂದ್ಯದ ಶುಲ್ಕದ 50% ರಷ್ಟು ದಂಡವನ್ನು ವಿಧಿಸಲಾಯಿತು. ಇದಕ್ಕಾಗಿ ಅವರು ಮೂರು ಡಿಮೆರಿಟ್ ಅಂಕಗಳನ್ನು ಪಡೆದರು.

ಎರಡು ಪಂದ್ಯಗಳ ಅಮಾನತಿನ ಕಾರಣದಿಂದಾಗಿ ಹರ್ಮನ್‍ಪ್ರೀತ್ 2023ರ ಏಷ್ಯನ್ ಗೇಮ್ಸ್‍ನ ಕ್ವಾರ್ಟರ್‍ಫೈನಲ್ ಮತ್ತು ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇದನ್ನೂ ಓದಿ: ಹಿಜಬ್‌ ಧರಿಸದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಇರಾನಿನ ಚೆಸ್‌ ಆಟಗಾರ್ತಿಗೆ ದೇಶದ ಪೌರತ್ವ ಕೊಟ್ಟ ಸ್ಪೇನ್‌

Web Stories

Share This Article